`ಕರಿ ದಿನ’ದ ಬೆಳಗಿಗೆ

`ಯುಗಾದಿ’ ದಿನ ಗೆಳತಿಯಿಂದ ಬಂದಿದ್ದ ಶುಭಾಶಯ ಪತ್ರದಲ್ಲಿ ಬೇಂದ್ರೆಯವರ ಕವಿತೆಯ ಈ ಸಾಲುಗಳು ತಂಪಾದ ನಗು ಬೀರುತ್ತಿದ್ದವು.

ಪ್ರಾರ್ಥನೆ

ಲೇಸೆ ಕೇಳಿಸಲಿ ಕಿವಿಗೆ,
ನಾಲಿಗೆಗೆ ಲೇಸೆ ನುಡಿದು ಬರಲಿ.
ಲೇಸೆ ಕಾಣಿಸಲಿ ಕಣ್ಗೆ,
ಜಗದಲಿ ಲೇಸೆ ಹಬ್ಬುತಿರಲಿ.

ಲೇಸೆ ಕೈಗಳಿಂದಾಗುತಿರಲಿ.
ತಾ ಬರಲಿ ಲೇಸು ನಡೆದು.
ಲೇಸನುಂಡು, ಲೇಸುಸುರಿ,
ಇಲ್ಲಿರಲಿ ಲೇಸೆ ಮೈಯ್ಯ ಪಡೆದು.

-ಅಂಬಿಕಾತನಯದತ್ತ

(ಗಂಗಾವತರಣ ಕವನ ಸಂಕಲನದಿಂದ)

ಎಂಥಹ ಸುಂದರ ಆಶಯ ಹೊತ್ತ ಶುಭಾಶಯ! ಎಲ್ಲೆಡೆಯು ಲೇಸೇ ಲೇಸಾಗಿ ಮೆರೆಯುವಾಗ, ಕೆಟ್ಟತನಕ್ಕೆ ಹಾಸುವರಾರು ಕೆಂಪುಹಾಸು? ಎಲ್ಲರೂ ಒಳ್ಳೆಯ ಮಾತಾಡುತ್ತಾ, ಒಳ್ಳೆಯದನ್ನು ಮಾಡುತ್ತಾ, ಒಳ್ಳೆಯವರಾಗಿಹೋದರೆ ಕೆಟ್ಟವರಿಗಾದರೂ ಏನು ಕೆಲಸ? ಅವರು ಏನಾದರೂ ಸಿಗುವುದೋ ಎಂದು ಅತ್ತಿತ್ತ ನೋಡಿ, ಏನೂ ಸಿಗದೆ, ಹೊತ್ತು ಹೋಗದೆ, ಕೊನೆಗೆ ಒಳ್ಳೆಯವರೇ ಆಗಬೇಕೇನೊ – ಅಣ್ಣಾವ್ರ ಸಿನಿಮಾದಲ್ಲಿ ಚೆನ್ನಾಗಿ ಒದೆ ತಿಂದ ಮೇಲೆ ಒಳ್ಳೆಯವರಾಗುವ ಕೆಟ್ಟವರ ಹಾಗೆ.

ಹೊಸ ವರ್ಷ ನಿಮ್ಮೆಲ್ಲರಿಗೂ ಒಳಿತು ಮಾಡಲಿ, ಒಳಿತನ್ನೇ ನೀಡಲಿ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆ ನಿಜವಾಗುತ್ತಿರಲಿ. ಶುಭಾಶಯ ಕಳಿಸಿದ ಒಳ್ಳಯ ಮನಸಿನ ಗೆಳತಿಗೆ ಶುಭವಾಗಲಿ.

2 thoughts on “`ಕರಿ ದಿನ’ದ ಬೆಳಗಿಗೆ”

  1. sunaath says:

    ಖರ ನಾಮ ಸಂವತ್ಸರವು “ಲೇಸೆ ಕೇಳಿಸಲಿ…” ಆಶಯದೊಂದಿಗೆ ಪ್ರಾರಂಭವಾಗುತ್ತಿರುವದು ಸಂತಸದ ವಿಷಯ. ಯುಗಾದಿಯ ಶುಭಾಶಯಗಳು.

  2. sritri says:

    ಕಾಕಾ, ನಿಮಗೂ ಯುಗಾದಿಯ ಶುಭಾಶಯಗಳು.

Leave a Reply to sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ವರ್ಷ ತೊಡಕಿಗೆ ಒಂದೆರಡು ಸಾಲುವರ್ಷ ತೊಡಕಿಗೆ ಒಂದೆರಡು ಸಾಲು

 ಈ ಎರಡು ದಿನಗಳಲ್ಲಿ, ಪತ್ರಿಕೆ, ಟಿವಿ, ಶುಭಾಶಯ ಪತ್ರಗಳಲ್ಲಿ ಬಹಳ ಹೆಚ್ಚು ಸಲ ಕೇಳಿ ಬಂದಿರುವ ಪದಗಳೆಂದರೆ, ಸಿಹಿ-ಕಹಿ,ನೋವು-ನಲಿವು, ಬೇವು-ಬೆಲ್ಲ. ನಿಮ್ಮೆಲ್ಲರ ಮನೆಗಳಲ್ಲಿ ಯುಗಾದಿ ಹಬ್ಬ ಚೆನ್ನಾಗಿ ಆಚರಿಸಿದಿರಾ? ಸಿಹಿ ಅಡುಗೆ ಏನು ಮಾಡಿದ್ದಿರಿ? ನಮ್ಮನೆಯಲ್ಲಿ ಹೋಳಿಗೆ ಮಾಡಿದ್ದೆ. ಮಾಡಬೇಕೆನ್ನುವ ಯೋಚನೆ ಏನೂ ಇರಲಿಲ್ಲ. ಉದಯ ಟಿವಿಯಲ್ಲಿ ತಾರಾ

ವಸಂತ ಸಾಹಿತ್ಯೋತ್ಸವದ ಸುಖದ ಕ್ಷಣಗಳುವಸಂತ ಸಾಹಿತ್ಯೋತ್ಸವದ ಸುಖದ ಕ್ಷಣಗಳು

(ಲೇಖಕಿಯರಾದ ವೀಣಾ, ವೈದೇಹಿಯವರೊಂದಿಗೆ ಅಮೆರಿಕನ್ನಡಿಗ ಬರಹಗಾರರು) “ನಾನು ಭಾವಜೀವಿ. ಎಂತಹ ಬರಡು ನೆಲದಲ್ಲೂ ಪ್ರೀತಿಯ ಪಸೆಗಾಗಿ ಕೆದರುವ ಆಶಾಜೀವಿ. ಸಹಜವಾಗಿಯೇ ನನ್ನಲ್ಲಿ ತವರಿನ ನೆನಪುಗಳು ತುಳುಕಾಡುವುದು ಹೆಚ್ಚು! ಈಗಲೂ ಹಾಗೆಯೇ ಹೇಳಬೇಕೆಂದರೆ- ಬಹುದಿನಗಳ ನಂತರ ತವರಿಗೆ ಹೋದ ಹೆಣ್ಣುಮಗಳೊಬ್ಬಳು, ಅಣ್ಣ-ತಮ್ಮಂದಿರು ನೀಡಿದ

ಗಣೇಶ ಬಂದ!ಗಣೇಶ ಬಂದ!

ನಮ್ಮ ಕೈತೋಟದಲ್ಲೇ ಬೆಳೆದ ಹೂವು,ಎಲೆಗಳಿಂದ ಪೂಜೆಗೊಂಡು ಪ್ರಸನ್ನನಾಗಿರುವ ಪರಿಸರಪ್ರಿಯ ಗಣೇಶ “ಎಲ್ಲರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!” ಅನುಪಮಾ-ನಿತಿನ್ ಮಂಗಳವೇಧೆ ಮನೆಯ ಗೌರಿ-ಗಣೇಶ ಆಶಾ-ಗುರುದತ್ ಮನೆಯಲ್ಲಿ ಪೂಜೆಗೊಂಡ ಗಣೇಶ