`ಕರಿ ದಿನ’ದ ಬೆಳಗಿಗೆ

`ಯುಗಾದಿ’ ದಿನ ಗೆಳತಿಯಿಂದ ಬಂದಿದ್ದ ಶುಭಾಶಯ ಪತ್ರದಲ್ಲಿ ಬೇಂದ್ರೆಯವರ ಕವಿತೆಯ ಈ ಸಾಲುಗಳು ತಂಪಾದ ನಗು ಬೀರುತ್ತಿದ್ದವು.

ಪ್ರಾರ್ಥನೆ

ಲೇಸೆ ಕೇಳಿಸಲಿ ಕಿವಿಗೆ,
ನಾಲಿಗೆಗೆ ಲೇಸೆ ನುಡಿದು ಬರಲಿ.
ಲೇಸೆ ಕಾಣಿಸಲಿ ಕಣ್ಗೆ,
ಜಗದಲಿ ಲೇಸೆ ಹಬ್ಬುತಿರಲಿ.

ಲೇಸೆ ಕೈಗಳಿಂದಾಗುತಿರಲಿ.
ತಾ ಬರಲಿ ಲೇಸು ನಡೆದು.
ಲೇಸನುಂಡು, ಲೇಸುಸುರಿ,
ಇಲ್ಲಿರಲಿ ಲೇಸೆ ಮೈಯ್ಯ ಪಡೆದು.

-ಅಂಬಿಕಾತನಯದತ್ತ

(ಗಂಗಾವತರಣ ಕವನ ಸಂಕಲನದಿಂದ)

ಎಂಥಹ ಸುಂದರ ಆಶಯ ಹೊತ್ತ ಶುಭಾಶಯ! ಎಲ್ಲೆಡೆಯು ಲೇಸೇ ಲೇಸಾಗಿ ಮೆರೆಯುವಾಗ, ಕೆಟ್ಟತನಕ್ಕೆ ಹಾಸುವರಾರು ಕೆಂಪುಹಾಸು? ಎಲ್ಲರೂ ಒಳ್ಳೆಯ ಮಾತಾಡುತ್ತಾ, ಒಳ್ಳೆಯದನ್ನು ಮಾಡುತ್ತಾ, ಒಳ್ಳೆಯವರಾಗಿಹೋದರೆ ಕೆಟ್ಟವರಿಗಾದರೂ ಏನು ಕೆಲಸ? ಅವರು ಏನಾದರೂ ಸಿಗುವುದೋ ಎಂದು ಅತ್ತಿತ್ತ ನೋಡಿ, ಏನೂ ಸಿಗದೆ, ಹೊತ್ತು ಹೋಗದೆ, ಕೊನೆಗೆ ಒಳ್ಳೆಯವರೇ ಆಗಬೇಕೇನೊ – ಅಣ್ಣಾವ್ರ ಸಿನಿಮಾದಲ್ಲಿ ಚೆನ್ನಾಗಿ ಒದೆ ತಿಂದ ಮೇಲೆ ಒಳ್ಳೆಯವರಾಗುವ ಕೆಟ್ಟವರ ಹಾಗೆ.

ಹೊಸ ವರ್ಷ ನಿಮ್ಮೆಲ್ಲರಿಗೂ ಒಳಿತು ಮಾಡಲಿ, ಒಳಿತನ್ನೇ ನೀಡಲಿ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಎಂಬ ನಂಬಿಕೆ ನಿಜವಾಗುತ್ತಿರಲಿ. ಶುಭಾಶಯ ಕಳಿಸಿದ ಒಳ್ಳಯ ಮನಸಿನ ಗೆಳತಿಗೆ ಶುಭವಾಗಲಿ.

2 thoughts on “`ಕರಿ ದಿನ’ದ ಬೆಳಗಿಗೆ”

  1. sunaath says:

    ಖರ ನಾಮ ಸಂವತ್ಸರವು “ಲೇಸೆ ಕೇಳಿಸಲಿ…” ಆಶಯದೊಂದಿಗೆ ಪ್ರಾರಂಭವಾಗುತ್ತಿರುವದು ಸಂತಸದ ವಿಷಯ. ಯುಗಾದಿಯ ಶುಭಾಶಯಗಳು.

  2. sritri says:

    ಕಾಕಾ, ನಿಮಗೂ ಯುಗಾದಿಯ ಶುಭಾಶಯಗಳು.

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಭೂಮಿಗೆಭೂಮಿಗೆ

ಎದೆಯು ಬಿರಿದು ಪದವು ಕುಸಿಯೆ ತಬ್ಬಿ ಹಿಡಿದ ತಾಯಿಯೆ ಬೇರುಗಳಲಿ ಜೀವ ತುಂಬಿ ಚಿಗುರ ಪೊರೆದ ಮಾಯೆಯೆ ಹೂವು ಕೊಟ್ಟು ಹಣ್ಣು ಕೊಟ್ಟು ಉಪಚರಿಸಿದ ಮಮತೆಯೆ ಮುತ್ತು ರತ್ನ ವಜ್ರ ಖಚಿತ ಖ್ಯಾತಿವೆತ್ತ ಘನತೆಯೆ ಭೂರಮಣರೆಂದು ಮೆರೆದ ಸಾಮ್ರಾಟರ ಹುಟ್ಟಗಿಸಿ ಹೊಟ್ಟೆಲಿಟ್ಟ

ದೃಷ್ಟಿ ತಾಕಿತೇ ನಿನಗೆ ರಂಗಯ್ಯ?ದೃಷ್ಟಿ ತಾಕಿತೇ ನಿನಗೆ ರಂಗಯ್ಯ?

ಈಚೆಗೆ ರಾಮಪ್ರಿಯರ ತಾಣದಲ್ಲಿ ಒಂದು ಮುದ್ದು ಮಗುವಿನ ಚಿತ್ರ ನೋಡಿದೆ. ಅಲ್ಲಿ ನಡೆಯುತ್ತಿದ ಮಾತು-ಕಥೆಗಳನ್ನೂ ಗಮನಿಸಿದ ಮೇಲೆ ಈ ಪ್ರಶ್ನೆ ನನ್ನನ್ನು ಕಾಡಿತು. ಮಕ್ಕಳಿಗೆ ದೃಷ್ಟಿಯಾಗೋದು ನಿಜವೇ? ನನಗೆ ಕಣ್ಣು ಬೀಳೋದು, ದೃಷ್ಟಿ ಆಗುವುದು ಇದರಲ್ಲೆಲ್ಲ ನಂಬಿಕೆ ಇಲ್ಲ.  ಇದ್ದರೂ ಇರಬಹುದೇ ಎನ್ನುವ ಅರೆಬರೆ

ಶಿಲ್ಪಾ ಶೆಟ್ಟಿ ಮಾನ – ದೇಶದ ಅವಮಾನ?ಶಿಲ್ಪಾ ಶೆಟ್ಟಿ ಮಾನ – ದೇಶದ ಅವಮಾನ?

ಶಿಲ್ಪಾ ಶೆಟ್ಟಿಗಾದ ಅವಮಾನ – ದೇಶಕ್ಕೇ ಅವಮಾನವಾಗಿದ್ದು ಹೇಗೆ?    ಪತ್ರಿಕೆ,ಟಿವಿಗಳು ಭಾರತಕ್ಕೇನೋ ಭಾರೀ ಅವಮಾನವಾಗಿದೆ ಅನ್ನೋ ಹಾಗೆ ಬೊಬ್ಬೆ ಹೊಡೆಯುತ್ತಿದ್ದುದು ನೋಡಿ ನನ್ನನ್ನೂ ಇದೇ ಪ್ರಶ್ನೆ ಕಾಡಿತ್ತು.  ಕನ್ನಡಪ್ರಭದ ಈ ಲೇಖನ ಓದಿದ ಮೇಲೆ ಸಮಾಧಾನವಾಯಿತು. ನೀವೂ ಓದಿ ನೋಡಿ.  ಏನನ್ನಿಸಿತು ಹೇಳಿ . “ದೆಹಲಿಯಲ್ಲಿ ಅಡ್ದಾಡುವ ಬೆಂಗಳೂರಿನ ಯುವಕನನ್ನು ತಲೆತಿರುಕನೊಬ್ಬ “ಮದ್ರಾಸೀ”  ಎಂದು ಕರೆದರೆ