ತೇನ ವಿನಾ – ಕುವೆಂಪು

ರಚನೆ : ಕುವೆಂಪು

ತೇನ ವಿನಾ ತೇನ ವಿನಾ
ತೃಣಮಪಿ ನ ಚಲತಿ ತೇನ ವಿನಾ
ಮಮತೆಯ ಬಿಡು, ಹೇ ಮೂಢಮನಾ,
ಮೂಢಮನಾ, ಹೇ ಮೂಢಮನಾ !

ರವಿಗಿಲ್ಲದ ಭಯ, ಶಶಿಗಿಲ್ಲದ ಭಯ,
ತಾರಾನಿವಹಕೆ ಇರದ ಭಯ,
ನಿನಗೇತಕೆ ಬಿಡು, ಅಣು ! ಶ್ರದ್ಧೆಯನಿಡು;
ನಿನ್ನನೆ ನೈವೇದ್ಯವ ನೀಡು !
ತೇನ ವಿನಾ . . .

ಎಲ್ಲೆಲ್ಲಿಯು ಕಯ್, ಎಲ್ಲೆಲಿಯು ಕಾಲ್
ಎಲ್ಲೆಲ್ಲಿಯು ಕಣ್ ತಾನಾದ
ಸತ್ ಚಿತ್ ಶಕ್ತಿಯ ಆನಂದವಿರಲ್
ಬಿಡು ಏತಕೆ ನಿನಗೆ ವಿಷಾದ !
ತೇನ ವಿನಾ . . .

(‘ಅಗ್ನಿಹಂಸ’ ಸಂಕಲನದಿಂದ)

4 thoughts on “ತೇನ ವಿನಾ – ಕುವೆಂಪು”

  1. sunaath says:

    ಕುವೆಂಪು ರಚಿತ ಈ ಕವನದಲ್ಲಿ ಭಕ್ತಿ ಹಾಗು ಶ್ರದ್ಧೆ ಸಾಂದ್ರವಾಗಿರುವದನ್ನು ಗಮನಿಸಬಹುದು. ತ್ರಿವೇಣಿಯವರಿಗೆ ಧನ್ಯವಾದಗಳು.

  2. sritri says:

    ಕಾಕಾ, ನಿಮ್ಮ ಧನ್ಯವಾದವನ್ನು ,ಈ ಕವಿತೆಯನ್ನು `ತುಳಸಿವನ’ದ ಸಂಗ್ರಹಕ್ಕೆಂದು ಕಳಿಸಿಕೊಟ್ಟ ಶಶಿಕಲಾ ಅವರಿಗೆ ತಲುಪಿಸುತ್ತಿದ್ದೇನೆ.

  3. ತುಳಸಿಯಮ್ಮಾ,

    ತುಂಬಾ ಇಷ್ಟವಾಯ್ತು ಕವಿತೆ. ಪೂರ್ತಿ ಸಿಕ್ಕಿರ್ಲಿಲ್ಲ… ನಿಮ್ಮಲ್ಲಿ ದೊರಕಿತು. ಧನ್ಯವಾದಗಳು.

    ಪ್ರೀತಿಯಿಂದ,
    ತೇಜು.

  4. sritri says:

    ತೇಜಸ್ವಿನಿ, ನನಗಿಷ್ಟವಾದ ಕವಿತೆಗಳನ್ನು ಹಂಚಿಕೊಳ್ಳುವ ಖುಷಿ ನನ್ನದು. ಧನ್ಯವಾದದ ಅಗತ್ಯವಿಲ್ಲ. 🙂 ಈ ಕವಿತೆ ಹಾಡಿನ ರೂಪದಲ್ಲಿ ಕೇಳಲು ಕೂಡ ಬಹಳ ಚೆನ್ನಾಗಿದೆ.

Leave a Reply to Tejaswini Hegde Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಸಂಜೆಗೆನ್ನ ಪಯಣ – ಕೆ.ಎಸ್.ನರಸಿಂಹಸ್ವಾಮಿಸಂಜೆಗೆನ್ನ ಪಯಣ – ಕೆ.ಎಸ್.ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ ಗಾಯಕ – ಡಾ.ರಾಜ್‍ಕುಮಾರ್ ಸಂಗೀತ – ಸಿ.ಅಶ್ವಥ್ ಹಾಡು ಕೇಳಿ ಸಂಜೆಗೆನ್ನ ಪಯಣವೆಂದು ತಿಳಿದಳೆನ್ನ ಸುಂದರಿ ನನ್ನ ಮುಂದೆ ಬಂದು ನಿಂದು ತಡೆದಳಿಂತು ವಿನಯದಿ | ಕೆಂಪು ತುಟಿಗಳಿಂದ ಹರಸಿ ನುಡಿಯಲಿಲ್ಲ ನಿಜವನು ತೆರೆದ ಕಂಗಳುದಕ ಸುರಿಸಿ

ನಿಮ್ಮೊಡನಿದ್ದೂ ನಿಮ್ಮಂತಾಗದೆ – ಕೆ. ಎಸ್. ನಿಸಾರ್ ಅಹಮದ್ನಿಮ್ಮೊಡನಿದ್ದೂ ನಿಮ್ಮಂತಾಗದೆ – ಕೆ. ಎಸ್. ನಿಸಾರ್ ಅಹಮದ್

ಕವನ –  ನಿಮ್ಮೊಡನಿದ್ದೂ ನಿಮ್ಮಂತಾಗದೆ ಕವಿ –  ಕೆ. ಎಸ್. ನಿಸಾರ್ ಅಹಮದ್ ನಿಮ್ಮೊಡನ್ದಿದೂ ನಿಮ್ಮಂತಾಗದೆ ಜಗ್ಗಿದ ಕಡೆ ಬಾಗದೆ ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ ಪರಕೀಯನಾಗಿ ತಲೆಯೆತ್ತುವುದಿದೆ ನೋಡಿ ಅದು ಬಲು ಕಷ್ಟದ ಕೆಲಸ. ವೃತ್ತದಲ್ಲಿ

ಅಳುವ ಕಡಲೊಳು – ಗೋಪಾಲಕೃಷ್ಣ ಅಡಿಗಅಳುವ ಕಡಲೊಳು – ಗೋಪಾಲಕೃಷ್ಣ ಅಡಿಗ

ಕವಿ –  ಎಂ.ಗೋಪಾಲಕೃಷ್ಣ ಅಡಿಗ ಹಾಡು ಕೇಳಿ :           ಪಿ.ಕಾಳಿಂಗರಾವ್                 ರಾಜೇಶ್ (ಚಿತ್ರ:ಮತದಾನ)                      ಬಿ.ಆರ್.ಛಾಯಾ (ಚಿತ್ರ:ಮತದಾನ) ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ ನೆರೆತಿದೆ ಬೆರೆತಿದೆ ಕುಣಿವ ಮೊರೆವ