ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ

ರಚನೆ : ಪುರಂದರದಾಸರು
ವಿದ್ಯಾಭೂಷಣರ ದನಿಯಲ್ಲಿ

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ
ನಿನಗೆ ನಮೋ ನಮೋ ||ಪಲ್ಲವಿ||

ಸುಂದರ ಮೃಗಧರ ಪಿನಾಕಧನುಕರ
ಗಂಗಾಶಿರ ಗಜಚರ್ಮಾಂಬರಧರ ||ಅನು||

ನಂದಿವಾಹನಾನಂದದಿ೦ದ ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತಘಟದಿಂದುದಿಸಿದ ವಿಷತ೦ದು ಭುಜಿಸಿದವ ನೀನೆ
ಕಂದರ್ಪನ ಕ್ರೋಧದಿ೦ದ ಕಣ್ತೆರೆದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀರಾಮನ ನಾಮವ ಚಂದದಿ ಪೊಗಳುವ ನೀನೆ ||೧||

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವನು ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೆ
ಕಾಲ ಕೂಟವನುಪಾನಮಾಡಿದ ನೀಲಕಂಠನು ನೀನೆ
ಜಾಲಮಾಡಿದ ಗೋಪಾಲನೆ೦ಬ ಹೆಣ್ಣಿಗೆ ಮರುಳಾದವ ನೀನೆ ||೨||

ಧರೆಗೆ ದಕ್ಷಿಣ ಕಾವೇರೀತೀರ ಕುಂಭಪುರವಾಸನು ನೀನೆ
ಕೊರಳೂಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀ ಪುರಂದರ ವಿಠಲಗೆ ಪ್ರಾಣಪ್ರಿಯನು ನೀನೆ ||೩||

2 thoughts on “ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ”

  1. Sugganahally Shadakshari says:

    ಪಿನಾಕ ಎಂದರೆ ಏನು, ಪಿನಾಕಪಾಣಿ ಎಂದರೆ ಏನು? ಕೆಲವರು ಹೇಳುತ್ತಾರೆ ಪಿನಾಕ ಎಂದರೆ ತ್ರಿಶೂಲ ಎಂದು. ಮತ್ತೆ ಕೆಲವರು ಹೇಳುತ್ತಾರೆ ಬಿಲ್ಲು ಎಂದು. ಯಾವುದು ಸರಿ. ದಯಮಾಡಿ ತಿಳಿಸಿ.

    1. sritri says:

      ಪಿನಾಕ ಧನುಸ್ಸು – ರಾಮ ಮುರಿದ ಶಿವ ಧನುಸ್ಸು. ಪಿನಾಕವನ್ನು ಹಿಡಿದವನು ಪಿನಾಕಿ. ಆ ಬಿಲ್ಲಿನ ಮೇಲ್ಭಾಗದಲ್ಲಿ ತ್ರಿಶೂಲಾಕಾರ ಇತ್ತು.

      ಶಿವನ ತ್ರಿಶೂಲಕ್ಕೂ ‘ಪಿನಾಕ’ ಎಂಬ ಹೆಸರಿದೆ. ಆದ್ದರಿಂದ ಎರಡು ಸರಿ ಸಾಂದರ್ಭಿಕ ಅರ್ಥವನ್ನು ಮಾಡಬೇಕು

Leave a Reply to Sugganahally Shadakshari Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಶ್ರೀನಿವಾಸ ಕಲ್ಯಾಣ – Srinivasa Kalyanaಶ್ರೀನಿವಾಸ ಕಲ್ಯಾಣ – Srinivasa Kalyana

ಸ್ತ್ರೀಯರೆಲ್ಲರು ಬನ್ನಿರೆ । ಶ್ರೀನಿವಾಸನ ಪಾಡಿರೇಜ್ಞಾನಗುರುಗಳಿಗೊಂದಿಸಿ । ‏ ಮುಂದೆ ಕಥೆಯ ಪೇಳುವೆ ।। ಗಂಗಾ ತೀರದಿ ಋಷಿಗಳು । ಅಂದು ಯಾಗವ ಮಾಡ್ಡರುಬಂದು ನಾರದ ನಿಂತುಕೊಂಡು । ಯಾರಿಗೆಂದು ಕೇಳಲು ಅರಿತು ಬರಬೇಕು ಎಂದು । ಆ ಮುನಿಯು ತೆರಳಿದ-ಭೃಗುಮುನೀಯು

ಲಕ್ಷ್ಮೀಕಾಂತ ಬಾರೊಲಕ್ಷ್ಮೀಕಾಂತ ಬಾರೊ

ಲಕ್ಷ್ಮೀಕಾಂತ ಬಾರೊ ಶುಭ ಲಕ್ಷಣವಂತ ಬಾರೊ||ಪಲ್ಲವಿ|| ಪಕ್ಷಿವಾಹನ ಏರಿದವನೆ ಪಾವನಮೂರ್ತಿ ಬಾರೊ ||ಅನು|| ಆದಿಮೂಲ ವಿಗ್ರಹ ವಿನೋದಿ ನೀನೇ ಬಾರೊ ಸಾಧುಸಜ್ಜನ ಸತ್ಯಯೋನಿ ದಾನಿ ನೀನೇ ಬಾರೊ||-೧-|| ಗಾಡಿಕಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೊ ರೂಢ ಮಾತನಾಡಿ ಸರ್ವರೂಢಿಗೊಡೆಯ ಬಾರೊ ||-೨-||

ಪುರಂದರದಾಸರು ಕಂಡ ಮುಸ್ಲಿಮರುಪುರಂದರದಾಸರು ಕಂಡ ಮುಸ್ಲಿಮರು

ರಚನೆ : ಪುರಂದರ ದಾಸರು ತುರುಕರು ಕರೆದರೆ ಉಣಬಹುದಣ್ಣ | ತುರುಕರು ಕರೆದರೆ ಅತಿ ಪುಣ್ಯವಣ್ಣ || ತುರುಕರಿಂದ ಮುಟ್ಟು ಮಡಿ ಚಟ್ಟು ಹೋಗೋದು | ತುರುಕರಿಂದ ಎಂಜಲು ಹೋಗೋದು || ತುರುಕರ ಕೂದಲು ತುರುಬಿಗೆ ಸುತ್ತಿದರೆ ಎಣಿಕೆಯಿಲ್ಲದ ಮುತ್ತೈದೆಯರಣ್ಣ ||