ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ

ರಚನೆ : ಪುರಂದರದಾಸರು
ವಿದ್ಯಾಭೂಷಣರ ದನಿಯಲ್ಲಿ

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ
ನಿನಗೆ ನಮೋ ನಮೋ ||ಪಲ್ಲವಿ||

ಸುಂದರ ಮೃಗಧರ ಪಿನಾಕಧನುಕರ
ಗಂಗಾಶಿರ ಗಜಚರ್ಮಾಂಬರಧರ ||ಅನು||

ನಂದಿವಾಹನಾನಂದದಿ೦ದ ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತಘಟದಿಂದುದಿಸಿದ ವಿಷತ೦ದು ಭುಜಿಸಿದವ ನೀನೆ
ಕಂದರ್ಪನ ಕ್ರೋಧದಿ೦ದ ಕಣ್ತೆರೆದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀರಾಮನ ನಾಮವ ಚಂದದಿ ಪೊಗಳುವ ನೀನೆ ||೧||

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವನು ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೆ
ಕಾಲ ಕೂಟವನುಪಾನಮಾಡಿದ ನೀಲಕಂಠನು ನೀನೆ
ಜಾಲಮಾಡಿದ ಗೋಪಾಲನೆ೦ಬ ಹೆಣ್ಣಿಗೆ ಮರುಳಾದವ ನೀನೆ ||೨||

ಧರೆಗೆ ದಕ್ಷಿಣ ಕಾವೇರೀತೀರ ಕುಂಭಪುರವಾಸನು ನೀನೆ
ಕೊರಳೂಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀ ಪುರಂದರ ವಿಠಲಗೆ ಪ್ರಾಣಪ್ರಿಯನು ನೀನೆ ||೩||

2 thoughts on “ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ”

  1. Sugganahally Shadakshari says:

    ಪಿನಾಕ ಎಂದರೆ ಏನು, ಪಿನಾಕಪಾಣಿ ಎಂದರೆ ಏನು? ಕೆಲವರು ಹೇಳುತ್ತಾರೆ ಪಿನಾಕ ಎಂದರೆ ತ್ರಿಶೂಲ ಎಂದು. ಮತ್ತೆ ಕೆಲವರು ಹೇಳುತ್ತಾರೆ ಬಿಲ್ಲು ಎಂದು. ಯಾವುದು ಸರಿ. ದಯಮಾಡಿ ತಿಳಿಸಿ.

    1. sritri says:

      ಪಿನಾಕ ಧನುಸ್ಸು – ರಾಮ ಮುರಿದ ಶಿವ ಧನುಸ್ಸು. ಪಿನಾಕವನ್ನು ಹಿಡಿದವನು ಪಿನಾಕಿ. ಆ ಬಿಲ್ಲಿನ ಮೇಲ್ಭಾಗದಲ್ಲಿ ತ್ರಿಶೂಲಾಕಾರ ಇತ್ತು.

      ಶಿವನ ತ್ರಿಶೂಲಕ್ಕೂ ‘ಪಿನಾಕ’ ಎಂಬ ಹೆಸರಿದೆ. ಆದ್ದರಿಂದ ಎರಡು ಸರಿ ಸಾಂದರ್ಭಿಕ ಅರ್ಥವನ್ನು ಮಾಡಬೇಕು

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಜಯ ಜಾನಕೀಕಾಂತಜಯ ಜಾನಕೀಕಾಂತ

ರಾಗ – ನಾಟ, ತಾಳ – ಜಂಪೆ ರಚನೆ – ಪುರಂದರದಾಸರು ಹಾಡು ಕೇಳಿ ವಿದ್ಯಾಭೂಷಣ ಡಾ. ಎಂ. ಎಲ್ ವಸಂತಕುಮಾರಿ ಡಾ. ಎಂ. ಬಾಲಮುರಳಿಕೃಷ್ಣ ಜಯ ಜಾನಕೀಕಾಂತ ಜಯ ಸಾಧು ಜನ ವಿನುತ ಜಯತು ಮಹಿಮಾನಂತ ಜಯ ಭಾಗ್ಯವಂತ ||ಪಲ್ಲವಿ||

ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ

ರಥವಾನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರ ಸತತ ಮಾರ್ಗದಿ ಸಂತತ ಸೇವಿಪರಿಗೆ ಅತಿಹಿತದಲಿ ಮನೋರಥವ ಕೊಡುವೆನೆಂದು ||ಪಲ್ಲವಿ|| ಚತುರ ದಿಕ್ಕು ವಿದಿಕ್ಕುಗಳಲ್ಲಿ ಚರಿಪ ಜನರಲ್ಲಿ ಮಿತಿಯಿಲ್ಲದೆ ಬಂದೋಲೈಸುತಲಿ ವರವ ಬೇಡುತಲಿ ನುತಿಸುತ ಪರಿಪರಿ ನತರಾಗಿಹರಿಗೆ ಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ||೧|| ಅತುಳ

ನಿನ್ನ ದರುಶನಕೆ ಬಂದವನಲ್ಲವೊನಿನ್ನ ದರುಶನಕೆ ಬಂದವನಲ್ಲವೊ

ರಚನೆ : ವಿಜಯದಾಸರು ಮುಖಾರಿ ರಾಗ, ಝಂಪೆ ತಾಳ 1. ನಿನ್ನ ದರುಶನಕೆ ಬಂದವನಲ್ಲವೊ| ಪುಣ್ಯವಂತರ ಪಾದ ದರುಶನಕೆ ನಾ ಬಂದೆ ||ಪಲ್ಲವಿ|| ಎಲ್ಲೆಲ್ಲಿಯೂ ನಿನ್ನ ವ್ಯಾಪ್ತಿ ತಾನಾಗಿರಲು | ಇಲ್ಲಿಗೇ ಬರುವ ಕಾರಣವಾವುದೋ | ಸೊಲ್ಲಿಗೇ ಸ್ತಂಭದಲಿ ತೋರಿದ ಮಹಾಮಹಿಮ