ರಚನೆ – ಪುರಂದರದಾಸರು
ವಿದ್ಯಾಭೂಷಣರ ದನಿಯಲ್ಲಿ
ನಾನೇಕೆ ಬಡವನೊ ನಾನೇಕೆ ಪರದೇಶಿ
ಶ್ರೀನಿಧೇ ಹರಿ ಎನಗೆ ನೀನಿರುವ ತನಕ||ಪ||
ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ
ಅಷ್ಟ ಬಂಧು ಬಳಗ ಸರ್ವ ನೀನೆ
ಪೆಟ್ಟಿಗೆಯ ಒಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣ ನೀನಿರುವತನಕ||೧||
ಒಡಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೇ
ಉಡಲು ಹೊದೆಯಲು ವಸ್ತ್ರ ಕೊಡುವವ ನೀನೆ
ಮಡದಿ ಮಕ್ಕಳನೆಲ್ಲ ಕಡೆಹಾಯಿಸುವವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವ ತನಕ||೨||
ವಿದ್ಯೆ ಹೇಳುವವ ನೀನೆ ಬುದ್ಧಿ ಕಲಿಸುವವ ನೀನೆ
ಉದ್ಧಾರ ಕರ್ತ ಮಮಸ್ವಾಮಿ ನೀನೆ
ಮುದ್ದು ಸಿರಿ ಪುರಂದರವಿಠಲ ನಿನ್ನಡಿ ಮೇಲೆ
ಬಿದ್ದು ಕೊಂಡಿರುವ ಎನಗೇತರ ಭಯವೊ||೩||
ತ್ರಿವೇಣಿ,
ಸುಂದರವಾದ ಈ ಕೀರ್ತನೆಯನ್ನು ಕೇಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.
ಸುಬ್ಬಲಕ್ಷ್ಮಿಯವರ ದನಿಯಲ್ಲಿ ಈ ಹಾಡು ಕೇಳಿದ್ದೆ.
ಇದೂ ಇಷ್ಟ ಆಯಿತು.
ಮಾಲಾ, ನನಗೂ ಈ ಹಾಡಿನ ಪರಿಚಯವಾಗಿದ್ದು ಎಂ. ಎಸ್. ಎಸ್ ಅವರ ದನಿಯಿಂದಲೇ. ಒಟ್ಟಿನಲ್ಲಿ, ‘ನಾನೇಕೆ ಬಡವನು?’ ಎಂದು ಹಾಡಿರುವ ಈ ಇಬ್ಬರು ಗಾಯಕರೂ ಬಡವರಂತೂ ಅಲ್ಲ ; ಪ್ರತಿಭೆಯಲ್ಲಿ. 🙂