ಮಿಡಿದ ಹೃದಯಗಳು (೧೯೯೩) –
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕರು – ಎಸ್.ಪಿ.ಬಾಲಸುಬ್ರಹ್ಮಣ್ಯ, ಚಿತ್ರಾ
ಚಂದದ ಚಂದನದಿಂದ
ಕೊರೆದ ಗೊಂಬೆಯ ಅಂದಚಂದ
ಘಮಘಮ ಬೊಂಬೆ ಹಿಡಿದರೆ
ಸರಿಗಮ ಬೊಂಬೆ ನುಡಿದರೆ ||ಪ||ತುಂಬಿರುವ ತುಂಗೆ ನೀನು
ಸೌಂದರ್ಯ ವನದ ಜೇನು
ಬಳುಕಿದರೆ ನೀ
ಮುಳುಗುವೆನು ನಾ
ರಸವಂತ ಚಿತ್ರಗಾರ
ನನ್ನ ಪ್ರೇಮ
ಸೂತ್ರಧಾರ
ತೀಡಿದರೆ ನೀ
ಮೂಡುವೆನು ನಾ
ಮಾತಾಡಬಲ್ಲದೀ
ಬೇಲೂರ ಬಾಲಿಕೆ
ಸಿಹಿಯಾದ ಕಾಣಿಕೆ
ಕೊಡಬಲ್ಲ ಮದನಿಕೆ ||೧||
ಕಲ್ಪನೆಯ ಕನ್ಯೆ ನಾನು
ಕಂಗೊಳಿಸೊ ಕವಿಯು ನೀನು
ಬಯಸಿದರೆ ನೀ
ಬಳಸುವೆನು ನಾ
ಕರ್ಪೂರ ಅಲ್ಲ ನೀನು
ಕರಗೋಕೆ ಬಲ್ಲೆಯೇನು?
ಕರಗಿದರೆ ನೀ
ಉರಿಸುವೆನು ನಾ
ಅಸಮಾನ್ಯ ಶೂರನೇ
ಸುಕುಮಾರಿ ಚೋರನೇ
ಅಪರೂಪ ಭಂಗಿಯೇ
ರತಿದೇವಿ ತಂಗಿಯೇ? ||೨||
***