ಅಮ್ಮ

ಅವಳು-
ದುಡಿದುಡಿದು ಸತ್ತವಳು,
ದುಡಿದು ಬೇಸತ್ತವಳು,
ಬದುಕ ಹೆಗ್ಗಾಲಿಯ ಕೆಳಗೆ
ನುಚ್ಚು ನೂರಾದವಳು

ಅವಳಿಲ್ಲ ಈಗ-
ಹೀಗನ್ನುವುದು ದಾಷ್ಟೀಕ
ಇದ್ದೇ ಇದ್ದಾಳೆ ಮನದಾಳದೊಳಗೆ-

ನಾನೊಂದು ಕಣ್ಣೀರಿಡುವಾಗ
ಮೈದಡವಿ ಸಂತೈಸುತ್ತಾಳೆ,
ನನ್ನ ಸುಖ, ಸಾಧನೆಗಳಿಗೆ
ತಾನೂ ಸಂಭ್ರಮಿಸಿ ನಲಿಯುತ್ತಾಳೆ,
ತೀರದ ಕೊರಗಾಗಿ ಕಾಡುತ್ತಾಳೆ,
ಆರದ ಗಾಯವಾಗಿ ಉರಿಯುತ್ತಾಳೆ,
ಭಾರದ ನೆನಪಾಗಿ ಮೀಟುತ್ತಾಳೆ

ಇಲ್ಲಿ…… ಅಮೆರಿಕಾದ ಅಡಿಗೆ ಮನೆಯಲ್ಲಿ
ತಿಳಿಸಾರು ಕುದಿವಾಗ
ಕರಿಬೇವ ಘಮದಂತೆ ಹಿತವಾಗಿ ಸುಳಿಯುತ್ತಾಳೆ
ನನ್ನ ಎಳೆ ಕಂದಗಳ ಹಾಲು ನಗೆಯಲ್ಲಿ ಫಕ್ಕನೆ
ಮಿಂಚಿ ಮರೆಯಾಗುತ್ತಾಳೆ….
ದೂರದಾರಿಯಲ್ಲಿ ಏಕಾಂಗಿ ನಡೆವಾಗ
ಮಂದ ದನಿಯಲ್ಲಿ ನನ್ನ ಹೆಸರು
ಕೂಗಿ ಕರೆಯುತ್ತಾಳೆ

ಅವಳು… ಮಹಾದೇವಿಯಲ್ಲ,
ಮಹಾನುಭಾವಳಲ್ಲ,
ಎಲ್ಲೆಲ್ಲೂ ಕಾಣಸಿಗುವ ಸರ್ವೇ ಸಾಧಾರಣ
ಪ್ರೇಮಮಯಿ ಹೆಂಗಸು!

ಅವಳು…ಅವಳೇ…ನನ್ನಮ್ಮ..
ಆಗಿರಲೂಬಹುದು ಅವಳು ನಿಮ್ಮಮ್ಮ!!

(೨೦೦೧, ಮದರ್ಸ್ ಡೇ)

***

4 thoughts on “ಅಮ್ಮ”

  1. Krupesh says:

    thumba chennagide nimma kavana. naanu swalpa gadyapriya, aadru nimma sarala bhasheya ammana kuritha kayva istavaaythu.

  2. sritri says:

    ಕವನ ಓದಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಕೃಪೇಶ್.

  3. sunaath says:

    Mother’s Day ದಿನದಂದು ಅಮ್ಮನಿಗೆ ಸೊಗಸಾದ ಕೊಡುಗೆ ನೀಡಿದ್ದೀರಿ.
    ನಿಮಗೂ ಸಹ ಶುಭಾಶಯಗಳು.

  4. hrlvenkatesh says:

    ಅವಳು…ಅವಳೇ…ನನ್ನಮ್ಮ..
    ಆಗಿರಲೂಬಹುದು ಅವಳು ನಿಮ್ಮಮ್ಮ!!

    ಅಮ್ಮ ಏಲ್ಲರಿಗೂ ಏಲ್ಲಾ ಕಾಲಕ್ಕೂ ಮುಗಿಲೆತ್ತರಕ್ಕೆ ನಿಲ್ಲುವ ಒಂದು ಚೇತನ.. ಆದರೆ ಅದಕ್ಕೆ ಅಪವಾದವಾಗಿ ನಾನೋರ್ವ ಅಮ್ಮನನ್ನು ಕಂಡೆ. ಆಕೆ ತನ್ನ ಗಂಡನನ್ನು ಮತ್ತು ಮುದ್ದು ಕಂದನನ್ನು ತೊರೆದು, ಮತ್ತೊರ್ವನೊದಿಗೆ ಮದುವೆಯಾಗಿ ಇಂದಿಗೂ ಜೀವನ ಸಾಗಿಸುತ್ತಿದ್ದಾಳೆ. ತಾಯ್ತನಕ್ಕೇ ಅಪವಾದವಾಗಿ !

Leave a Reply to sritri Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ದಾರಿದಾರಿ

ಈ ತುದಿಯಲ್ಲಿ ಕಾಯುತ್ತಿದ್ದೇವೆ ನಾವಿನ್ನೂ ನಮ್ಮ ಸರದಿಗಾಗಿ ಕಣ್ಣುಗಳಲ್ಲಿ ಅಳಿದುಳಿದ ಆಸೆಯ ಕುರುಹು ನೋಟ ಹರಿಯುವ ಉದ್ದಕ್ಕೂ ಮೈಚಾಚಿ ಮಲಗಿದೆ ದಾರಿ ಯಾರೂ ಅರಿಯದ ಗುಟ್ಟು ತನ್ನಲ್ಲೇ ಬಚ್ಚಿಟ್ಟು ನಿರ್ಲಿಪ್ತ ಮೌನದಲಿ. ಯಾರೋ ಇಳಿಯುತ್ತಾರೆ ಮತ್ತಾರೋ ಏರುತ್ತಾರೆ ಅತ್ತಿತ್ತ ಹರಿಯುವ ಬಂಡಿಗೆ

ನಿನ್ನ ಕಾಡುವುದಿಲ್ಲವೇ?ನಿನ್ನ ಕಾಡುವುದಿಲ್ಲವೇ?

ಅಂದಿನಿಂದ ಇಂದಿನವರೆಗೂ ಜೊತೆ ಜೊತೆಯಾಗೇ ನಡೆದುಬ೦ದೆವಲ್ಲಾ ಬದುಕ ಹಿರಿದಾರಿಯುದ್ದಕ್ಕೂ…. ಪಯಣದ ಹಾದಿಯಲ್ಲಿ – ಕಂಡಿದ್ದು, ಉಂಡಿದ್ದು ನೂರಾರು. ತಂಪಿನ ನೆಳಲಲ್ಲಿ ಸುಖಿಸಿದ್ದುಂಟು, ಬೆಂಕಿಯ ಮಡಿಲಲ್ಲಿ ಬಳಲಿದ್ದುಂಟಾದರೂ ಅದಾವುದೂ ಮರೆಯದ ನೆನಪಾಗುಳಿಯದೆ, ಅಂದು ನೂರು ನಿಟ್ಟುಸಿರುಗಳ ಮರೆಸಿ ನಾವು ನಕ್ಕ ಆ ಒ೦ದೊ೦ದು

ಯಾವ ಮೋಹನ?ಯಾವ ಮೋಹನ?

ಮದುವೆಯಾಗಿ ಇಪ್ಪತ್ತೈದು ಕಳೆದರೂ ಆಗೀಗ ಫಂಕ್ಷನ್ನುಗಳಲ್ಲಿ ಹೊರಗೆ ಬಂದು ಉಸಿರೆಳೆದುಕೊಳ್ಳುವ ಅದೇ ಭಾರಿ ದುಬಾರಿ ಧಾರೆ ಸೀರೆಗಳು, ಎಂದೋ ಫ್ಯಾಷನ್ ಆಗಿದ್ದು ಈಗ ಫ್ಯಾಷನ್ ಅಂಗಳದಿಂದ ಒದ್ದಾಚೆ ಹಾಕಿರುವ ಅದೇ ಉದ್ದ ತೋಳಿನ ಅಂಚು ತೊಡಿಸಿದ ರವಿಕೆಗಳಲ್ಲಿ ಬಾಬ್ ಅಲ್ಲದ, ಜಡೆಯೂ