ಅಳಿಸಿ ಬರೆದ ಕವನ

ಹೀಗನ್ನಿಸುತ್ತದೆ –
ನೂರು ಪದಗಳ ಹುಡುಕಿ
ಎದೆಯ ಭಾವವ ತಡಕಿ
ಒಮ್ಮೆ ಬರೆದು ಮುಗಿಸಿದ ಕವನ
ಯಾಕೋ ಸರಿ ಎನಿಸಿದಾಗ
ಮತ್ತೆ ಅಳಿಸಿ ಬರೆಯುವಂತೆ:

ಎಲ್ಲಿಂದಲೋ ಹೊರಟು
ಎಲ್ಲೋ ತಲುಪಲು ಬಯಸಿ
ಇನ್ನೆಲ್ಲೋ ಬಂದು ನಿಂತ
ಈ ಬದುಕನ್ನು ಮತ್ತೆ
ಹೊಸದಾಗಿ ಆರಂಭಿಸುವಂತಿದ್ದರೆ?

ಉಹುಂ, ಹಾಗಾಗಲಾರದು –
ಅಳಿಸಿ ಬರೆದ ಕವನ
ನಿಜವಾಗಿರಲ್ಲ
ಅಳಿಸಿ ಹೋಗಿದೆ ಹಾದಿ
ಮರಳುವಂತಿಲ್ಲ!

(ಜನವರಿ,೨೦೦೪)

***

8 thoughts on “ಅಳಿಸಿ ಬರೆದ ಕವನ”

 1. jyothi says:

  trivEni yavare,

  Nimma ee kavana bahaLa ishTavaaytu nanage.. bahala arthagarbhitavaagide

 2. ಎಲ್ಲರೂ ನಿರೀಕ್ಷಿಸುತ್ತಿರುವುದನ್ನೇ, ಹೇಳಲಾಗದುದ್ದನ್ನು ಕವನದ ಮೂಲಕ ಬಹಳ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ. ಸ್ಲೇಟಿನ ಮೇಲೆ ಬರೆದಂತೆ ಗತಜೀವನವಾಗಿದ್ರೆ, ಬರೆದ ಓರೆ ಕೋರೆ ಅಕ್ಷರಗಳನ್ನು ಆಗಾಗ ಅಳಿಸಬಹುದ್ದಿತ್ತು. ದುಂಡನೆ ಅಕ್ಷರ ಬರುವವರೆವಿಗೆ ಮತ್ತೆ ಮತ್ತೆ ಬರೆಯಬಹುದಿತ್ತು. ಇದೊಂದು ನಮ್ಮಲ್ಲಿರುವ ಕೊರತೆ. ಇದನ್ನೂ ಜಯಿಸಿಬಿಟ್ಟರೆ ನಾವೆಲ್ಲರೂ ಪರಮಾತ್ಮಗಳಾಬಹುದು. ಉತ್ತಮ ಚಿಂತನೆಗೆ ಧನ್ಯವಾದಗಳು. (ಹಳೆಯ ಕವನವಾಗಿದ್ರೂ ನಾನು ಈ ಮೊದಲು ನೋಡಿರಲಿಲ್ಲ).

 3. Sritri ಅವರೆ,
  ಭಾವನೆಗಳನ್ನು ಬಡಿದೆಬ್ಬಿಸಿದೆ ಈ ಕವನ.
  ನಂಗೆ ಕೂಡ ಬಾಲ್ಯಕ್ಕೆ ಶಾಶ್ವತವಾಗಿ ಮರಳುವಾಸೆ
  ಯಾಕೆ ಗೊತ್ತೇ?

  ಅಂದು ಆಡುತ್ತಾಡುತ್ತಿರುವಾಗ ಬಿದ್ದು
  ಮಾಡಿಕೊಂಡ ಗಾಯಕ್ಕಿರುತ್ತಿತ್ತು ಮದ್ದು|
  ಇಂದು ಬದುಕಲ್ಲಿ ಮನಸಿಗಾಗುವ
  ಗಾಯಕ್ಕೆಲ್ಲಿದೆ ಮದ್ದು?||

 4. sritri says:

  ತವಿಶ್ರೀಯವರೆ, ಕವನ ಓದಿ ಮೆಚ್ಚಿಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

  “ಜೀವನ ಮಾತ್ರವಲ್ಲ, ಒಮ್ಮೆ ಬರೆದ ಕವನವನ್ನೂ ಕೂಡ ಮತ್ತೆ ಅಳಿಸಿ ಬರೆದಾಗ, ಮೊದಲಿದ್ದ ಭಾವ ಅದರಲ್ಲಿರುವುದು ಸಾಧ್ಯವಿಲ್ಲ” ಎಂಬುದು ಕವನ ಬರೆದಾಗ ನನ್ನ ಮನಸ್ಸಿನಲ್ಲಿದ್ದ ಅನಿಸಿಕೆ.

 5. sritri says:

  ಜ್ಯೋತಿಯವರೇ, ಮೊದಲ ಬಾರಿಗೆ ತುಳಸಿವನಕ್ಕೆ ಆಗಮಿಸಿರುವ ನಿಮಗೆ ಸುಸ್ವಾಗತ . ನೀವು ರಚಿಸಿರುವ ಊರ್ಮಿಳಾ, ಸೌಂದರ್ಯ ರೇಖಾಚಿತ್ರಗಳನ್ನು ನೋಡಿದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ. ಹೊಸ ಚಿತ್ರ ಬರೆದಾಗ ತಿಳಿಸಲು ಮರೆಯಬೇಡಿ.

 6. sritri says:

  ಅಸತ್ಯಾನ್ವೇಷಿಗಳೇ, ನಿಮ್ಮ ನಗೆಮಾತುಗಳಿಂದ ಎಲ್ಲರನ್ನೂ ನಕ್ಕು ನಲಿಸುವ ನಿಮ್ಮ ಮನಸ್ಸಿನಲ್ಲಿ ಯಾವ ಗಾಯವಿರಲು ಸಾಧ್ಯ? ನೋವು ಮರೆಸಲು ನಗೆಗಿಂತ ಉತ್ತಮ ಮದ್ದು ಬೇರೇನಿದ್ದೀತು?

 7. Soni says:

  Triveni avre…

  Jakkas kavana!

 8. sritri says:

  Thanks sony 🙂

Leave a Reply to jyothi Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಪ್ರೀತಿಯ ಕವಿಗೊಂದು ಇಮೇಲು!ಪ್ರೀತಿಯ ಕವಿಗೊಂದು ಇಮೇಲು!

ಕವಿಗಳೇ, ಇಲ್ಲಿಂದ ಹೋದಮೇಲೆ ನಿಮ್ಮಿಂದ ಸುದ್ದಿಯಿಲ್ಲ, ಸಮಾಚಾರ ತಿಳಿಯೋಣವೆಂದರೆ ಈಗ ಬಳೆಗಾರ ಬರುವುದಿಲ್ಲ ಭವಾನಿ ಕಂಗನ್, ಮಹಿಳಾ ಬ್ಯಾಂಗಲ್ ಬಂದ ಮೇಲೆ ಅವನಿಗೂ ಕೆಲಸವಿಲ್ಲ, ಪಾಪ! ಪತ್ರ ವ್ಯವಹಾರಕ್ಕೂ ಪುರಸೊತ್ತಿಲ್ಲದ ಹೊತ್ತಲ್ಲಿ ಈಮೇಲೇ ಮೇಲೆನಿಸಿತು. ನಾವು ಕ್ಷೇಮ, ನೀವು ಹೇಗಿದ್ದೀರಿ? ಮೊನ್ನೆ

ಅವನಿಗೊ೦ದು ಪ್ರಶ್ನೆ?ಅವನಿಗೊ೦ದು ಪ್ರಶ್ನೆ?

ಮೇಲೆ ಮೇಲೆ ನಾನು ನುಡಿದ ಮಾತುಗಳನೇ ನ೦ಬಿಬಿಟ್ಟೆ ಹೃದಯದೊಳಗೆ ಇರುವ ಭಾವ ಹೊಕ್ಕು ನೋಡಲಿಲ್ಲವೇತಕೆ? ನಿನ್ನ ಮಾತುಗಳನೆ ನಾನು ನನ್ನವೆ೦ದು ನುಡಿಯುತ್ತಿದ್ದೆ ನನ್ನ ಎದೆಯ ರಾಗಗಳಿಗೆ ನೀನು ಕಿವುಡನಾದೆ ಏತಕೆ? ನಿನ್ನದೊ೦ದು ಸವಿ ಮಾತಿನಿ೦ದ ನನ್ನ ದು:ಖ ಕಳೆಯುತಿತ್ತು ಒ೦ದು ಮಾತೂ

ಮುಡಿಗೇರಲಿ ಸಾಧನೆಮುಡಿಗೇರಲಿ ಸಾಧನೆ

ಚಿತ್ರಕವನದಿಂದ ಕೇಳಿರೆ ಗೆಳತಿಯರೇ, ನಿಮ್ಮಮ್ಮ, ಅಜ್ಜಿಗಿಂತ ನೀವೇ ಪುಣ್ಯವಂತರು ಓದಿ-ಬರೆದು ಮಾಡಲು, ಅವರಿಗ್ಯಾರು ನೆರವು ಕೊಟ್ಟರು? ಹೆಣ್ಣಿಗೇಕೆ ಶಿಕ್ಷಣ? ಅದು ಪರರ ಮನೆಯ ಬೆಳಕು ಕಸೂತಿ, ರಂಗೋಲಿ, ಹಾಡು-ಹಸೆ ಬಂದರಾಯಿತು, ಸಾಕು ವರ್ಷ ಎಂಟಕ್ಕೇ ಮದುವೆ, ಬಸುರು, ಬಾಣಂತನದ ಕಾಟ ಕಸಮುಸುರೆ,