ಅಳಿಸಿ ಬರೆದ ಕವನ

ಹೀಗನ್ನಿಸುತ್ತದೆ –
ನೂರು ಪದಗಳ ಹುಡುಕಿ
ಎದೆಯ ಭಾವವ ತಡಕಿ
ಒಮ್ಮೆ ಬರೆದು ಮುಗಿಸಿದ ಕವನ
ಯಾಕೋ ಸರಿ ಎನಿಸಿದಾಗ
ಮತ್ತೆ ಅಳಿಸಿ ಬರೆಯುವಂತೆ:

ಎಲ್ಲಿಂದಲೋ ಹೊರಟು
ಎಲ್ಲೋ ತಲುಪಲು ಬಯಸಿ
ಇನ್ನೆಲ್ಲೋ ಬಂದು ನಿಂತ
ಈ ಬದುಕನ್ನು ಮತ್ತೆ
ಹೊಸದಾಗಿ ಆರಂಭಿಸುವಂತಿದ್ದರೆ?

ಉಹುಂ, ಹಾಗಾಗಲಾರದು –
ಅಳಿಸಿ ಬರೆದ ಕವನ
ನಿಜವಾಗಿರಲ್ಲ
ಅಳಿಸಿ ಹೋಗಿದೆ ಹಾದಿ
ಮರಳುವಂತಿಲ್ಲ!

(ಜನವರಿ,೨೦೦೪)

***

8 thoughts on “ಅಳಿಸಿ ಬರೆದ ಕವನ”

  1. jyothi says:

    trivEni yavare,

    Nimma ee kavana bahaLa ishTavaaytu nanage.. bahala arthagarbhitavaagide

  2. ಎಲ್ಲರೂ ನಿರೀಕ್ಷಿಸುತ್ತಿರುವುದನ್ನೇ, ಹೇಳಲಾಗದುದ್ದನ್ನು ಕವನದ ಮೂಲಕ ಬಹಳ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ. ಸ್ಲೇಟಿನ ಮೇಲೆ ಬರೆದಂತೆ ಗತಜೀವನವಾಗಿದ್ರೆ, ಬರೆದ ಓರೆ ಕೋರೆ ಅಕ್ಷರಗಳನ್ನು ಆಗಾಗ ಅಳಿಸಬಹುದ್ದಿತ್ತು. ದುಂಡನೆ ಅಕ್ಷರ ಬರುವವರೆವಿಗೆ ಮತ್ತೆ ಮತ್ತೆ ಬರೆಯಬಹುದಿತ್ತು. ಇದೊಂದು ನಮ್ಮಲ್ಲಿರುವ ಕೊರತೆ. ಇದನ್ನೂ ಜಯಿಸಿಬಿಟ್ಟರೆ ನಾವೆಲ್ಲರೂ ಪರಮಾತ್ಮಗಳಾಬಹುದು. ಉತ್ತಮ ಚಿಂತನೆಗೆ ಧನ್ಯವಾದಗಳು. (ಹಳೆಯ ಕವನವಾಗಿದ್ರೂ ನಾನು ಈ ಮೊದಲು ನೋಡಿರಲಿಲ್ಲ).

  3. Sritri ಅವರೆ,
    ಭಾವನೆಗಳನ್ನು ಬಡಿದೆಬ್ಬಿಸಿದೆ ಈ ಕವನ.
    ನಂಗೆ ಕೂಡ ಬಾಲ್ಯಕ್ಕೆ ಶಾಶ್ವತವಾಗಿ ಮರಳುವಾಸೆ
    ಯಾಕೆ ಗೊತ್ತೇ?

    ಅಂದು ಆಡುತ್ತಾಡುತ್ತಿರುವಾಗ ಬಿದ್ದು
    ಮಾಡಿಕೊಂಡ ಗಾಯಕ್ಕಿರುತ್ತಿತ್ತು ಮದ್ದು|
    ಇಂದು ಬದುಕಲ್ಲಿ ಮನಸಿಗಾಗುವ
    ಗಾಯಕ್ಕೆಲ್ಲಿದೆ ಮದ್ದು?||

  4. sritri says:

    ತವಿಶ್ರೀಯವರೆ, ಕವನ ಓದಿ ಮೆಚ್ಚಿಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

    “ಜೀವನ ಮಾತ್ರವಲ್ಲ, ಒಮ್ಮೆ ಬರೆದ ಕವನವನ್ನೂ ಕೂಡ ಮತ್ತೆ ಅಳಿಸಿ ಬರೆದಾಗ, ಮೊದಲಿದ್ದ ಭಾವ ಅದರಲ್ಲಿರುವುದು ಸಾಧ್ಯವಿಲ್ಲ” ಎಂಬುದು ಕವನ ಬರೆದಾಗ ನನ್ನ ಮನಸ್ಸಿನಲ್ಲಿದ್ದ ಅನಿಸಿಕೆ.

  5. sritri says:

    ಜ್ಯೋತಿಯವರೇ, ಮೊದಲ ಬಾರಿಗೆ ತುಳಸಿವನಕ್ಕೆ ಆಗಮಿಸಿರುವ ನಿಮಗೆ ಸುಸ್ವಾಗತ . ನೀವು ರಚಿಸಿರುವ ಊರ್ಮಿಳಾ, ಸೌಂದರ್ಯ ರೇಖಾಚಿತ್ರಗಳನ್ನು ನೋಡಿದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ. ಹೊಸ ಚಿತ್ರ ಬರೆದಾಗ ತಿಳಿಸಲು ಮರೆಯಬೇಡಿ.

  6. sritri says:

    ಅಸತ್ಯಾನ್ವೇಷಿಗಳೇ, ನಿಮ್ಮ ನಗೆಮಾತುಗಳಿಂದ ಎಲ್ಲರನ್ನೂ ನಕ್ಕು ನಲಿಸುವ ನಿಮ್ಮ ಮನಸ್ಸಿನಲ್ಲಿ ಯಾವ ಗಾಯವಿರಲು ಸಾಧ್ಯ? ನೋವು ಮರೆಸಲು ನಗೆಗಿಂತ ಉತ್ತಮ ಮದ್ದು ಬೇರೇನಿದ್ದೀತು?

  7. Soni says:

    Triveni avre…

    Jakkas kavana!

  8. sritri says:

    Thanks sony 🙂

Leave a Reply to ಶ್ರೀನಿವಾಸ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಇದು ಕ್ರಿಸ್‍ಮಸ್ ಮಾಸ!ಇದು ಕ್ರಿಸ್‍ಮಸ್ ಮಾಸ!

ಇದು ಕ್ರಿಸ್‍ಮಸ್ ಮಾಸ ! ನವ ವರುಷವು ಬರುವ ಮೊದಲೇ ಭುವಿಗಿಳಿದಿದೆ ಉಲ್ಲಾಸ ಸ೦ಭ್ರಮವಿದೆ ಸ೦ತಸವಿದೆ ಇದು ಕ್ರಿಸ್‍ಮಸ್ ಮಾಸ! ಮನೆ ಮನೆಯ ಅ೦ಗಳದಲಿ ಮನ ಸೆಳೆಯುವ ನೋಟ ಇಳೆಯ ಅರಸಿ ಬ೦ದ೦ತಿದೆ ನ೦ದನದ ತೋಟ! ಹಸಿರಿಲ್ಲದ ಮರಗಿಡದಲಿ ಮಾಗಿದೆ ಹಸಿ

ಸ್ವಗತಸ್ವಗತ

ಕೋಟ್ಯಾಧಿಪತಿಯು ನಾನು ಬಹುಮಹಡಿ ಬಂಗಲೆಯು ಚಿನ್ನ, ಒಡವೆಗಳಿಂದ ತುಂಬಿತುಳುಕಾಡುವ ತಿಜೋರಿ ಬ್ಯಾಂಕಿನಲ್ಲಿಯೂ ಉಂಟು ರಾಶಿ ಹಣದ ಗಂಟು ಇಷ್ಟಿದ್ದೂ ಹೀಗೇಕಿಲ್ಲಿ ಮಲಗಿಹೆನು ಬರಿ ನೆಲದ ಮೇಲೆ? ಹಾಸಿಗೆ, ಹೊದಿಕೆಗಳೆಲ್ಲಿ? ಹಕ್ಕಿ ಗರಿಗಿಂತಲೂ ಮೃದುವಾಗಿದ್ದ ನನ್ನ ಸುಪ್ಪತ್ತಿಗೆಯೀಗ ಹೋಯಿತೆಲ್ಲಿ? ಎಲ್ಲಿ ಹೋಗಿಹರೋ ಎಲ್ಲಾ

ಪ್ರೀತಿಯೆ೦ದರೆ ಅದಲ್ಲ!ಪ್ರೀತಿಯೆ೦ದರೆ ಅದಲ್ಲ!

ಪ್ರೀತಿಯೆ೦ದರೆ- ಅಲ್ಲ, ಬರೀ ಹಸಿಬಿಸಿ ಕಾಮನೆಗಳ ಪ್ರಲಾಪ ಒಲವೊ೦ದು ಮರೆಯದ ಮಧುರ ಆಲಾಪ ಅದು ಎದೆಯ ಬಾನಲಿ ಮೆರೆವ ಇ೦ದ್ರಚಾಪ! ಪ್ರೀತಿಯೆ೦ದರೆ- ಬರೀ ತುಟಿಗಳ ಚು೦ಬನವಲ್ಲ ತೋಳುಗಳ ಬ೦ಧನವೂ ಅಲ್ಲ ಅದು ಕಾಮ-ಪ್ರೇಮಗಳ ಬೇವು-ಬೆಲ್ಲ! ಪ್ರೀತಿಯೆ೦ದರೆ- ದಾಹಭರಿತ ದಿನ ರಾತ್ರಿಗಳ ಹಳಹಳಿಕೆಯ