ಮಠ – ೨೦೦೫
ಸಾಹಿತ್ಯ,ಸಂಗೀತ – ವಿ. ಮನೋಹರ್
ಗಾಯಕ – ಸಿ. ಅಶ್ವಥ್
ಗಾಯಕ – ಸಿ. ಅಶ್ವಥ್
ತಪ್ಪು ಮಾಡದೋರ್ ಯಾರವ್ರೆ?
ತಪ್ಪೇ ಮಾಡದೋರ್ ಎಲ್ಲವ್ರೆ?
ಅಪ್ಪಿ ತಪ್ಪಿ ತಪ್ಪಾಗುತ್ತೆ
ಬೆಳ್ಳಿ ಕೂಡ ಕಪ್ಪಾಗುತ್ತೆ
ತಿದ್ಕೊಳ್ಳಕ್ಕೆ ದಾರಿ ಐತೆ ||ಪ||
ಘಮಘಮ ತಂಪು ತರೋ ಗಾಳಿ ಕೂಡ
ಗಬ್ಬುನಾತ ತರೋದಿಲ್ವಾ?
ಪರಮಪಾವನೆ ಗಂಗೆಯಲ್ಲೂ ಕೂಡ
ಹೆಣಗಳು ತೇಲೋದಿಲ್ವಾ?
ಕಳ್ರುನೆಲ್ಲ ಜೈಲಿಗೆ ಹಾಕೋದಾದ್ರೆ
ಭೂಮಿಗೆ ಬೇಲಿ ಹಾಕಬೇಕಲ್ವಾ
ತೀರ್ಥ ಕುಡಿದ್ರೂ ಶೀತಾಗಲ್ವಾ?
ಮಂಗಳಾರತಿನೂ ಸುಡೋದಿಲ್ವಾ?
ದೇವ್ರುಗಳೇ ತಪ್ ಮಾಡಿಲ್ವಾ? ||೧||
ಹೆಣ್ಣು ಹೊನ್ನು ಮಣ್ಣು ಮೂರರಿಂದ್ಲೇ
ಎಲ್ಲಾ ರೀತಿ ಎಡವಟ್ಟು
ನಿನ್ನ ಪಾಡಿಗೆ ನೀನು ಇರೊದ್ಬಿಟ್ಟು
ಪರರ ಸ್ವತ್ತಿಗ್ಯಾಕೆ ಪಟ್ಟು?
ಮೆಳ್ಳಗಣ್ಣು ಇದ್ದರೂ ತಪ್ಪಿಲ್ಲ
ಕಳ್ಳಗಣ್ಣು ಇರಬಾರ್ದು
ಕದಿಯೋದಾದ್ರೆ ವಿದ್ಯೆ ಕದಿ
ತೊರೆದೆಬಿಡು ಕೇಡುಬುದ್ಧಿ
ಲದ್ದಿ ಬುದ್ಧಿ ಮಾಡು ಶುದ್ಧಿ
ತಪ್ಪು ಮಾಡದೋರ್ ಯಾರವ್ರೆ?
ತಪ್ಪೇ ಮಾಡದೋರ್ ಎಲ್ಲವ್ರೆ?
ನಾವೂ ನೀವೂ ಎಲ್ಲ ಒಂದೇ
ತಪ್ಪು ಮಾಡೋ ಕುರಿಮಂದೆ
ತಿದ್ಕೊಳ್ಳಕ್ಕೆ ದಾರಿ ಐತೆ ಮುಂದೆ ||೨||