ರಾಮಶಾಮಭಾಮ – 2005
ಸಾಹಿತ್ಯ : ಕವಿರಾಜ್
ಸಂಗೀತ : ಗುರುಕಿರಣ್
ಗಾಯಕರು : ರಮೇಶ್ ಚಂದ್ರ, ಚಿತ್ರ
ಪದೆಪದೇ ನೆನಪಾದೆ
ಪದೆಪದೇ ನೆನೆದೆ
ಪದೆಪದೇ ಮರೆಯಾದೆ
ಪದೆಪದೇ ಕರೆದೆ
ಯಾವ ಜನ್ಮದಲಿ ನನ್ನ ನಿನ್ನ ನಡುವೆ
ಪ್ರೀತಿ ಮೂಡಿತೇನೊ?
ಮೆಲ್ಲ ಮೆಲ್ಲ ನನ್ನಲ್ಲೆಲ್ಲ
ನೀ ತುಂಬಿಕೊಂಡೆ ಒಲವೇ
ಕಳ್ಳ ಕಳ್ಳ ನನ್ನ ನಲ್ಲ
ಕಣ್ಣಲ್ಲೇ ದೋಚಿ ಬಿಡುವೆ
ಹಗಲಲು ಕನಸು ಕನಸಲಿ ನೀ
ಉಸಿರಿನ ಉಸಿರು ನೀ ||೧||
ಎಲ್ಲೋ ಎಲ್ಲೋ ಮುತ್ತು ಚೆಲ್ಲೋ
ಪ್ರೀತಿನೇ ಸ್ವಾತಿ ಮಳೆಯೇ
ಅಲ್ಲೊ ಇಲ್ಲೊ ಎಲ್ಲ ಮೆಲ್ಲೊ
ಪ್ರೀತೀನೇ ಜೇನಹೊಳೆಯೇ?
ಪದಗಳೇ ಇರದ ಕವಿತೆಯಿದು
ಸವಿ ಸವಿ ಸುಧೆಯಿದು ||೨||
***
One thought on “ರಾಮಶಾಮಭಾಮ – ಪದೆಪದೇ ನೆನಪಾದೆ”