ಹೂವು ಹಣ್ಣು – ನಿಂಗಿ ನಿಂಗಿ

ಹೂವು ಹಣ್ಣು -೧೯೯೬
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯಕ: ಸಿ. ಅಶ್ವಥ್ ಮತ್ತು ಸಂಗಡಿಗರು

ಹಾಡು ಕೇಳಿ – 

ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ಯ
ಹೊಯ್ಯಾರೆ ಹೊಯ್ಯಾರೆ ಹೊಯ್

ನಿಂಗಿ ನಿಂಗಿ ನಿಂಗಿ ನಿಂಗಿ
ನಿದ್ದಿ ಕದ್ದೀಯಲ್ಲೆ ನಿಂಗಿ
ನಿಂಗಿ ನಿಂಗಿ ನಿಂಗಿ ನಿಂಗಿ
ಆಸಿ ಎದ್ದೀತಲ್ಲೆ ನಿಂಗಿ

ಚಂದಾನ ಚಂದ್ರ – ಹೊಯ್ಯಾರೆ ಹೊಯ್ಯ
ಭೂಮಿಗ ಲಾಂದ್ರ – ಹೊಯ್ಯಾರೆ ಹೊಯ್ಯ
ಆಗ್ಯಾನ ನೋಡಲ್ಲಿ |

ವಾರಿ ನೋಟ ಬೀರುವಾಕಿ
ನಾಚಿಕೊಂಡು ನಿಂತಿ ಯಾಕ ?
ಬಾಳಿ ದಿಂಡ ಹೋಲುವಾಕಿ ಬಾಗಿಲಾಗ ಇರಬೇಕ ?
ಯಾಕ ಹಿಂಗ ಕಾಡುತಿ?
ನೋಯುಹಂಗೆ ಮಾಡುತಿ?

ಬಿಲ್ಲಿನಂಗ ತಾಗುತಿ
ಹೆಣ್ಣ ಬಾಣ ಹೂಡುತಿ
ಲಾ ಲ ಲ ಲಾಲ ಲಲ್ಲಲಲ್ಲ……. ಲಾಲ

ನಿದ್ದಿಯೆಂಬುದು ಒಂದು ದೇವತಿ
ಪ್ರೇಮಿಗಳಿಗಾಕಿ ಸವತಿ
ಏನ ಗರತಿ ನಿನ್ನ ಸವತಿ
ಬಂದರೀಗ ಏನ ಮಾಡುತಿ?
ಯಾಕ ತಡ ಮಾಡುತಿ?
ವ್ಯಾಳಿ ಮುಖ ನೋಡುತಿ?

ಚಂದ್ರಮುಖಿ ಹೋಲುತಿ
ಯಾವ ಸುಖ ಬೇಡುತಿ
ಲಾ ಲ ಲಾಲ ಲಲ್ಲಲಲ್ಲ……. ಲಾಲ

*          *          *

4 thoughts on “ಹೂವು ಹಣ್ಣು – ನಿಂಗಿ ನಿಂಗಿ”

  1. ಈ ಹಾಡು ಕೇಳ್ತಿರ್ತೀನಿ. ಬಹಳ ಸೊಗಸಾಗಿದೆ. ಸಾಹಿತ್ಯ ಒದಗಿಸಿದುದಕ್ಕೆ ಧನ್ಯವಾದಗಳು.

  2. ಈ ಹಾಡು ನನಗಿಷ್ಟ ಅನ್ನೋದು ನಿಮಗ್ಹೇಗೆ ತಿಳಿಯಿತು?

    ಇದನ್ನು ಕಾಪಿ ಮಾಡ್ಕೊಂಡಿದ್ದೀನಿ. ಕಾಪಿ ರೈಟ್ ಇಲ್ವಲ್ಲ!

  3. ಅಸತ್ಯಾನ್ವೇಷಿಗಳೇ, ಕಾಪಿ ಮಾಡ್ಕೊಂಡಿದ್ದಾಗಿದ್ರೆ ಇನ್ನು ರೈಟ್ ಹೇಳಿ. (ಸುಮ್ನೆ ತಮಾಷೆಗೆ) ಇದು ಸೀರಿಯಸ್ ಸೈಟು.

  4. sritri says:

    ಅಸತ್ಯಾನ್ವೇಷಿಗಳೇ, ಕಾಪಿರೈಟ್ ಭಯವಿಲ್ಲದೆ ಹಾಡು ಹಾಡಿಕೊಂಡು ಖುಷಿಪಡಿ.

Leave a Reply to ಶ್ರೀನಿವಾಸ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಒಂದಾಗೋಣ ಬಾ – ಒಂದ್ಹೆಜ್ಜೆ ನಾವೇ ಹೋಗೋಣಯ್ಯಒಂದಾಗೋಣ ಬಾ – ಒಂದ್ಹೆಜ್ಜೆ ನಾವೇ ಹೋಗೋಣಯ್ಯ

ಚಿತ್ರ – ಒಂದಾಗೋಣ ಬಾ (೨೦೦೩) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಫಯಾಜ್‍ಖಾನ್ ಮತ್ತು ಸಂಗಡಿಗರು ಹಾಡು ಇಲ್ಲಿದೆ – ಒಂದ್ಹೆಜ್ಜೆ ನಾವೇ ಹೋಗೋಣಯ್ಯ ಸಿಹಿ ಸಜ್ಜೆ ತಿನಿಸಿ ಬರೋಣಯ್ಯ ಮನೆ ಬಾಗಿಲು ತೆರೆದ ಸೂರ್ಯ ಬೆಳಕಿದ್ದರೆ

ಚಿನ್ನಾರಿ ಮುತ್ತ – ರೆಕ್ಕೆ ಇದ್ದರೆ ಸಾಕೇ?ಚಿನ್ನಾರಿ ಮುತ್ತ – ರೆಕ್ಕೆ ಇದ್ದರೆ ಸಾಕೇ?

ಚಿತ್ರ – ಚಿನ್ನಾರಿ ಮುತ್ತ  (೧೯೯೩) ಸಾಹಿತ್ಯ – ಎಚ್.ಎಸ್.ವೆಂಕಟೇಶಮೂರ್ತಿ ಸಂಗೀತ – ಸಿ. ಅಶ್ವಥ್ ಗಾಯಕರು – ಬೇಬಿ ರೇಖಾ ಮತ್ತು ಸಂಗಡಿಗರು ಹಾಡು ಕೇಳಿ  ರೆಕ್ಕೆ ಇದ್ದರೆ ಸಾಕೇ? ಹಕ್ಕಿಗೆ ಬೇಕು ಬಾನು ಬಯಲಲಿ ತೇಲುತ ತಾನು ಮ್ಯಾಲೆ

ಬೆಳ್ಳಿ ಕಾಲುಂಗುರ – ಕೇಳಿಸದೆ ಕಲ್ಲು ಕಲ್ಲಿನಲಿಬೆಳ್ಳಿ ಕಾಲುಂಗುರ – ಕೇಳಿಸದೆ ಕಲ್ಲು ಕಲ್ಲಿನಲಿ

ಚಿತ್ರ : ಬೆಳ್ಳಿ ಕಾಲುಂಗುರ (೧೯೯೨) ಸಾಹಿತ್ಯ : ದೊಡ್ಡರಂಗೇಗೌಡ ಸಂಗೀತ : ಹಂಸಲೇಖ ಹಾಡು ಕೇಳಿ  *  ಎಸ್.ಪಿ.ಬಾಲಸುಬ್ರಹ್ಮಣ್ಯಂ  *  ಚಿತ್ರ ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ವೈಭವದ ತವರು ಕೂಗಿದೆ