ಹೂವು ಹಣ್ಣು – ನಿಂಗಿ ನಿಂಗಿ

ಹೂವು ಹಣ್ಣು -೧೯೯೬
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯಕ: ಸಿ. ಅಶ್ವಥ್ ಮತ್ತು ಸಂಗಡಿಗರು

ಹಾಡು ಕೇಳಿ – 

ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ಯ
ಹೊಯ್ಯಾರೆ ಹೊಯ್ಯಾರೆ ಹೊಯ್

ನಿಂಗಿ ನಿಂಗಿ ನಿಂಗಿ ನಿಂಗಿ
ನಿದ್ದಿ ಕದ್ದೀಯಲ್ಲೆ ನಿಂಗಿ
ನಿಂಗಿ ನಿಂಗಿ ನಿಂಗಿ ನಿಂಗಿ
ಆಸಿ ಎದ್ದೀತಲ್ಲೆ ನಿಂಗಿ

ಚಂದಾನ ಚಂದ್ರ – ಹೊಯ್ಯಾರೆ ಹೊಯ್ಯ
ಭೂಮಿಗ ಲಾಂದ್ರ – ಹೊಯ್ಯಾರೆ ಹೊಯ್ಯ
ಆಗ್ಯಾನ ನೋಡಲ್ಲಿ |

ವಾರಿ ನೋಟ ಬೀರುವಾಕಿ
ನಾಚಿಕೊಂಡು ನಿಂತಿ ಯಾಕ ?
ಬಾಳಿ ದಿಂಡ ಹೋಲುವಾಕಿ ಬಾಗಿಲಾಗ ಇರಬೇಕ ?
ಯಾಕ ಹಿಂಗ ಕಾಡುತಿ?
ನೋಯುಹಂಗೆ ಮಾಡುತಿ?

ಬಿಲ್ಲಿನಂಗ ತಾಗುತಿ
ಹೆಣ್ಣ ಬಾಣ ಹೂಡುತಿ
ಲಾ ಲ ಲ ಲಾಲ ಲಲ್ಲಲಲ್ಲ……. ಲಾಲ

ನಿದ್ದಿಯೆಂಬುದು ಒಂದು ದೇವತಿ
ಪ್ರೇಮಿಗಳಿಗಾಕಿ ಸವತಿ
ಏನ ಗರತಿ ನಿನ್ನ ಸವತಿ
ಬಂದರೀಗ ಏನ ಮಾಡುತಿ?
ಯಾಕ ತಡ ಮಾಡುತಿ?
ವ್ಯಾಳಿ ಮುಖ ನೋಡುತಿ?

ಚಂದ್ರಮುಖಿ ಹೋಲುತಿ
ಯಾವ ಸುಖ ಬೇಡುತಿ
ಲಾ ಲ ಲಾಲ ಲಲ್ಲಲಲ್ಲ……. ಲಾಲ

*          *          *

4 thoughts on “ಹೂವು ಹಣ್ಣು – ನಿಂಗಿ ನಿಂಗಿ”

  1. ಈ ಹಾಡು ಕೇಳ್ತಿರ್ತೀನಿ. ಬಹಳ ಸೊಗಸಾಗಿದೆ. ಸಾಹಿತ್ಯ ಒದಗಿಸಿದುದಕ್ಕೆ ಧನ್ಯವಾದಗಳು.

  2. ಈ ಹಾಡು ನನಗಿಷ್ಟ ಅನ್ನೋದು ನಿಮಗ್ಹೇಗೆ ತಿಳಿಯಿತು?

    ಇದನ್ನು ಕಾಪಿ ಮಾಡ್ಕೊಂಡಿದ್ದೀನಿ. ಕಾಪಿ ರೈಟ್ ಇಲ್ವಲ್ಲ!

  3. ಅಸತ್ಯಾನ್ವೇಷಿಗಳೇ, ಕಾಪಿ ಮಾಡ್ಕೊಂಡಿದ್ದಾಗಿದ್ರೆ ಇನ್ನು ರೈಟ್ ಹೇಳಿ. (ಸುಮ್ನೆ ತಮಾಷೆಗೆ) ಇದು ಸೀರಿಯಸ್ ಸೈಟು.

  4. sritri says:

    ಅಸತ್ಯಾನ್ವೇಷಿಗಳೇ, ಕಾಪಿರೈಟ್ ಭಯವಿಲ್ಲದೆ ಹಾಡು ಹಾಡಿಕೊಂಡು ಖುಷಿಪಡಿ.

Leave a Reply to ಅಸತ್ಯಾನ್ವೇಷಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಶೃಂಗಾರ ಕಾವ್ಯ – ಶೃಂಗಾರ ಕಾವ್ಯ ಬರೆದನುಶೃಂಗಾರ ಕಾವ್ಯ – ಶೃಂಗಾರ ಕಾವ್ಯ ಬರೆದನು

ಚಿತ್ರ – ಶೃಂಗಾರ ಕಾವ್ಯ – ೧೯೯೩ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಎಲ್.ಎನ್. ಶಾಸ್ತ್ರಿ ಹಾಡು ಕೇಳಿ ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಉಸಿರ ಹಿಡಿದ ತಂತಿ ಕಡಿದ ಇನ್ನು ಮೌನ ಗಾನವೇ

ನನ್ನಾಸೆಯ ಹೂವೇ – ಹೊಂಬಾಳೆ ಹೊಂಬಾಳೆನನ್ನಾಸೆಯ ಹೂವೇ – ಹೊಂಬಾಳೆ ಹೊಂಬಾಳೆ

ನನ್ನಾಸೆಯ ಹೂವೇ – ೧೯೯೦  ಸಂಗೀತ ಮತು ಸಾಹಿತ್ಯ: ಹಂಸಲೇಖ ಗಾಯಕ: ರಾಜೇಶ್ ಕೃಷ್ಣನ್     ಹಾಡು ಕೇಳಿ    ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ ನನ್ನಾಸೆಯ ಹೂವೇ ಕೇಳೇ ನೀನಿದ್ದರೆ ಬಾಳೆ ಹೊಂಬಾಳೆ ||ಪ|| ಕಡಲಂಥ ಕಣ್ಣೋಳೆ ಮುಗಿಲಂಥ ಮನದೋಳೆ ನಿನ್ನಂಥ

ಸಿ.ಬಿ.ಐ.ಶಂಕರ್ – ಕಾಡು ನೋಡ ಹೋದೆಸಿ.ಬಿ.ಐ.ಶಂಕರ್ – ಕಾಡು ನೋಡ ಹೋದೆ

ಚಿತ್ರ: ಸಿ.ಬಿ.ಐ.ಶಂಕರ್ (೧೯೮೯) ಸಾಹಿತ್ಯ, ಸಂಗೀತ: ಹಂಸಲೇಖ ಗಾಯಕರು : ಎಸ್.ಪಿ. ಬಾಲಸುಬ್ರಹ್ಮಣ್ಯಂ, ಚಿತ್ರ ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ ಕವಿತೆಯೊಳಗೆ ಹೋಗಿ ರಾಗದೊಡನೆ ಬಂದೆ ಕಡಲ ನೋಡ ಹೋದೆ ಮಾಯದ ಕಲೆಗೆ ಬಲೆಯ ತಂದೆ ಬಲೆಯ ಬೀಸಿ ಕಾದು