ಸಾಹಿತ್ಯ : ಕುವೆಂಪು
ಆಲ್ಬಂ : ಭಾವಬಿಂದು
ಸಂಗೀತ : ಸಿ.ಅಶ್ವಥ್
ಗಾಯಕ : ಶಿವಮೊಗ್ಗ ಸುಬ್ಬಣ್ಣ       

ಹಾಡು ಕೇಳಿ –

ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೊ

ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ

ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನೋ ಬರೀ ರವಿಯಲ್ಲವೊ
ಆ ಭ್ರಾಂತಿಯ ಮಾಣೊ

ರವಿವದನವೇ ಶಿವಸದನವೊ
ಬರೀ ಕಣ್ಣದೊ ಮಣ್ಣೊ
ಶಿವನಿಲ್ಲದೆ ಸೌಂದರ್ಯವೇ
ಶವ ಮುಖದ ಕಣ್ಣೊ

ಉದಯದೊಳೇನ್ ಹೃದಯವ ಕಾಣ್
ಅದೇ ಅಮೃತದ ಹಣ್ಣೊ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೊ

* * *

4 thoughts on “ಕುವೆಂಪು – ಆನಂದಮಯ”

 1. ಶಿವಮೊಗ್ಗ ಸುಬ್ಬಣ್ಣನವರ ಕಂಠಕ್ಕೆ ತಕ್ಕನಾದ ಗೀತೆ. ಒಳ್ಳೆಯ ಸಾಹಿತ್ಯ ಒದಗಿಸಿದ್ದೀರಿ. ಧನ್ಯವಾದಗಳು.

 2. ತವಿಶ್ರೀಯವರೆ, ಎಲ್ಲರನ್ನೂ ನಿಮ್ಮ ಸವಿಮಾತುಗಳಿಂದ ಪ್ರೋತ್ಸಾಹಿಸುತ್ತೀರಿ. ವಂದನೆಗಳು.

 3. ಈ ಕಾವ್ಯದ ಬಗ್ಗೆ ನನಗೆ ಮೊದಲಿಂದಲೂ ಜಿಜ್ಞಾಸೆಯಿತ್ತು. ಕೆಲ ಕಾಲದ ಹಿಂದೆ, ಈ ಕವನವು ಕುವೆಂಪುರವರದೊ ಅಥವಾ ಶಿವರುದ್ರಪ್ಪನವರದೊ ಎಂಬ ಅನುಮಾನವೂ ಇತ್ತು. ಇದನ್ನು ಪುನಃ ಕೇಳುವ (ಶಿವಮೊಗ್ಗ ಸುಬ್ಬಣ್ಣನವರ ಕಂಠಸಿರಿಯ ಮೂಲಕ) ಮೊದಲು, ಹಿಂದೆ, ಸಣ್ಣವನಿದ್ದಾಗ, ಶಾಲೆಯಲ್ಲಿ ಈ ಕವನವನ್ನು ಕಲಿತ (ಮಾಸಿದ) ನೆನಪು!

  ಅದೇನೇ ಇರಲಿ, ಈ ಕವನವನ್ನು ಕೇಳಿದಾಗಲೆಲ್ಲ, ನನಗೆ, ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಹೇಳುತ್ತ ಬಂದ ‘ಎಲ್ಲವೂ ಬ್ರಹ್ಮಮಯ’ ಎಂಬ ನುಡಿಯು ನೆನಪಿಗೆ ಬರುತ್ತದೆ!

  ಈ ಕವನದ ಸಾಹಿತ್ಯವನ್ನು ಕಲೆ ಹಾಕುವಾಗ ನೀವು ಒಂದೆಡೆ ಎಡುವಿದಿರಿ ಎಂದು ನನಗೆ ತೋರುತ್ತಿದೆ. ಪದ್ಯದ ಕೊನೆಯ ಸಾಲುಗಳು ಹೀಗಿರಬೇಕು

  ಉದಯದೊಳೇನ್ ಹೃದಯವ ಕಾಣ್ (ಉದಯವ ಕಾಣ್ ಅಲ್ಲ, ಹೃದಯವ ಕಾಣ್)
  ಅದೇ ಅಮೃತದ ಹಣ್ಣೊ

 4. ಪ್ರದೀಪ ಭಟ್ ಅವರಿಗೆ , ನನ್ನಲ್ಲಿ ಈ ಹಾಡಿನ ಸಾಹಿತ್ಯವಿಲ್ಲ. ಹಾಡುಗಾರರು ಹಾಡುವುದನ್ನು ಕೇಳಿ ಬರೆದಾಗ ಇಂತಹ ವ್ಯತ್ಯಾಸವಾಗುತ್ತಲೇ ಇರುತ್ತವೆ. “ಉದಯದೊಳೇನ್ ಹೃದಯವ ಕಾಣ್ ” ಎಂತಹ ಅದ್ಭುತವಾದ ಕಲ್ಪನೆ! ತಿದ್ದುಪಡಿಗೆ ಅನಂತ ಧನ್ಯವಾದಗಳು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.