ನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿ

ಹಾಡು ಕೇಳಿ

ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ಬರುವ ಕಂಪಿನ ಹೆಸರು ಪ್ರೇಮವೆಂದು
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ
ಕಣ್ಣಸನ್ನೆಯ ಹೆಸರು ಪ್ರೇಮವೆಂದು

ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ
ದೂರದಿಂಪಿನ ಹೆಸರು ಪ್ರೇಮವೆಂದು
ಮಾಲಗಣ್ಣಿನ ಹೆಣ್ಣೆ ನಿನ್ನ ತುಟಿಯಿಕ್ಕೆಲದಿ
ಮಂದಹಾಸದ ಹೆಸರು ಪ್ರೇಮವೆಂದು

ಯಾವುದೋ ಕನಸಿನಲಿ ಯಾರೊ ಹಾಡಿದ ಹಾಡು
ಮಿಡಿದ ಹೃದಯದ ಹೆಸರು ಪ್ರೇಮವೆಂದು
ಬಳಿಗೆ ಬಾರೆನ್ನವಳೆ ಬಿಗಿದಪ್ಪಿ ಮಾತಾಡು
ನಾನದನೆ ಕರೆಯುವೆನು ಪ್ರೇಮವೆಂದು

ಬಾರೆನ್ನ ಮನದನ್ನೆ ಬರಲಿ ಹತ್ತಿರ ಕೆನ್ನೆ
ಮುತ್ತಿನಲಿ ಒಂದಾಗಲೆರಡು ಜೀವ
ಬಾಳಿನೇರಿಳಿತಗಳ ಮುಗಿದಿರದ ಪಯಣಕ್ಕೆ
ಶುಭವ ಕೋರಲಿ ಸುಳಿದು ಧನ್ಯಭಾವ

*******

‘ಇರುವಂತಿಗೆ’ – ಕವನ ಸಂಕಲನದಿಂದ.

1 thought on “ನಿಜದ ಸಂತಸದಲ್ಲಿ – ಕೆ.ಎಸ್.ನರಸಿಂಹಸ್ವಾಮಿ”

  1. ravi kiran says:

    ತುಂಬಾ ಚೆನ್ನಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಮಾತು – ಚೆನ್ನವೀರ ಕಣವಿಮಾತು – ಚೆನ್ನವೀರ ಕಣವಿ

ಕವಿ : ಚೆನ್ನವೀರ ಕಣವಿ ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ ಪಾರಿಜಾತವು ಹೂವು ಸುರಿಸಿದಂತೆ, ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ ; ಮೆಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರೂ ಸಾಕು;

ತೇನ ವಿನಾ – ಕುವೆಂಪುತೇನ ವಿನಾ – ಕುವೆಂಪು

ರಚನೆ : ಕುವೆಂಪು ತೇನ ವಿನಾ ತೇನ ವಿನಾ ತೃಣಮಪಿ ನ ಚಲತಿ ತೇನ ವಿನಾ ಮಮತೆಯ ಬಿಡು, ಹೇ ಮೂಢಮನಾ, ಮೂಢಮನಾ, ಹೇ ಮೂಢಮನಾ ! ರವಿಗಿಲ್ಲದ ಭಯ, ಶಶಿಗಿಲ್ಲದ ಭಯ, ತಾರಾನಿವಹಕೆ ಇರದ ಭಯ, ನಿನಗೇತಕೆ ಬಿಡು, ಅಣು

ವಿಶ್ವಭಾರತಿಗೆ ಕನ್ನಡದಾರತಿವಿಶ್ವಭಾರತಿಗೆ ಕನ್ನಡದಾರತಿ

ಕವಿ – ಚೆನ್ನವೀರ ಕಣವಿ ಹಾಡು ಕೇಳಿ ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ ಜಯಭಾರತಿ, ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ. ವಿಶ್ವವಿನೂತನ…………………….||೧|| ಗಂಗ, ಕದಂಬಾ, ರಾಷ್ಟ್ರಕೂಟ ಬಲ ಚಲುಕ್ಯ, ಹೊಯ್ಸಳ,ಬಲ್ಲಾಳ ಹುಕ್ಕ,ಬುಕ್ಕ,ಪುಲಕೇಶಿ,