ಬೆಳಗು ಬಾ ಹಣತೆಯನು ನನ್ನೆದೆಯ ಗುಡಿಯಲ್ಲಿ

ಮನುಷ್ಯನಿಗಿರುವ ಹಲವಾರು ಮೂಲಭೂತವಾದ ಭಯಗಳಲ್ಲಿ ಒಂದು ಈ ಕತ್ತಲೆಯ ಭಯ. ಚಿಕ್ಕಮಕ್ಕಳಂತೂ ಕತ್ತಲೆಗೆ ಭಯಪಡುವಷ್ಟು ಇನ್ನು ಯಾವ ಗುಮ್ಮನಿಗೂ ಹೆದರುವುದಿಲ್ಲ. ಕತ್ತಲೆ ಎಂದರೆ ಭಯ, ಅಜ್ಞಾನಕ್ಕೆ ಸಂಕೇತವಾದರೆ, ಬೆಳಕು ನೆಮ್ಮದಿ, ಕ್ಷೇಮಭಾವಗಳಿಗೊಂದು ಸುಂದರ ರೂಪಕ. ಬೆಳಕು ಎಲ್ಲ ಒಳಿತುಗಳಿಗೊಂದು ಭವ್ಯ ಸಂಕೇತ! ಬೆಳಕು ಎಂದರೆ ಅರಿವು. ಬೆಳಕು ಎಂದರೆ ಆಸೆ. ಬೆಳಕೇ ಒಂದು ಸಂಭ್ರಮ. ಬೆಳಕು Read More

ಅಮ್ಮನ ಪ್ರೀತಿಯ ನೆನಪಿಸುವ ತಿಳಿಸಾರು

“ನಿಮಗೆ ಅತ್ಯಂತ ಇಷ್ಟದ ತಿಂಡಿ, ತಿನಿಸು, ಅಡುಗೆ ಯಾವುದು?” ಇದು ಅತಿ ಸುಲಭದ ಪ್ರಶ್ನೆ ಮತ್ತು ಕಠಿಣವಾದ ಪ್ರಶ್ನೆಯೂ ಹೌದು! ಎಷ್ಟೇ ಸರಳ ಅನ್ನಿಸಿದರೂ, ಯಾರಾದರೂ ಇದ್ದಕ್ಕಿದ್ದಂತೆ ನಮ್ಮನ್ನು ನಿಲ್ಲಿಸಿ, ಈ ಪ್ರಶ್ನೆ ಕೇಳಿದರೆ, ಕ್ಷಣ ಕಾಲವಾದರೂ ಯೋಚಿಸಲೇ ಬೇಕಾಗುತ್ತದೆ. ಮೈಸೂರು ಪಾಕ್ ಇಷ್ಟವೆಂದರೆ ಜಿಲೇಬಿ, ಜಾಮೂನುಗಳು “ನನ್ನಲ್ಲಿ ಕೋಪವೇ? ನಾ ನಿನಗೆ ಬೇಡವೇ?” ಎಂದು Read More

ಪುಸ್ತಕಗಳು ಮರಿ ಹಾಕುತ್ತವೆ!

ಯಾವುದೋ ಪುಸ್ತಕ ಬೇಕೆಂದು ಹುಡುಕುತ್ತಾ, ಬೇಸ್‌ಮೆಂಟಿನಲ್ಲಿದ್ದ ನನ್ನ ಪುಸ್ತಕ ಸಂಗ್ರಹದ ಮುಂದೆ ನಿಂತಿದ್ದೆ. ಹಿಂದೆಂದೋ ಹುಡುಕಿದಾಗ ತಿಪ್ಪರಲಾಗ ಹೊಡೆದರೂ ಸಿಗದಿದ್ದ ಪುಸ್ತಕಗಳೆಲ್ಲಾ ಈಗ ನಾನು ತಾನೆಂದು ಸಿಕ್ಕವು! ಆದರೆ ನನಗೆ ಆಗ ಬೇಕಾಗಿದ್ದ ಪುಸ್ತಕ ಮಾತ್ರ ಕೊನೆಗೂ ಸಿಗಲಿಲ್ಲ. ಮಹಾಭಾರತದಲ್ಲಿ ಕರ್ಣನಿಗೆ ಸಿಕ್ಕ ಶಾಪವನ್ನು ಸ್ವಲ್ಪ ಆಲ್ಟರ್ ಮಾಡಿ, ನನಗೂ ಯಾರೋ ಅದೇ ಶಾಪ ಕೊಟ್ಟಿರಬಹುದೇ Read More

ಮಾತಾಡ್ ಮಾತಾಡ್ ಮಲ್ಲಿಗೆ!

ಪ್ರಪಂಚಾದ್ಯಂತ ಇರುವ ಜನರು ‘ಹಣ ಉಳಿಸುವುದು ಹೇಗೆ?’, ‘ಇರುವ ಹಣವನ್ನು ಕಳೆಯದೆ ಬೆಳೆಸುವುದು ಹೇಗೆ?’ ‘ಮೈ ಕರಗಿಸುವುದು ಹೇಗೆ?’, ‘ದಷ್ಟಪುಷ್ಟ ಮೈ ಬೆಳೆಸುವುದು ಹೇಗೆ?’, ‘ಸಂತೆಯಲ್ಲಿ ಕುಂತರೂ ಏಕಾಂತ ಸಾಧಿಸುವುದು ಹೇಗೆ?’, ‘ಯೋಗ ಕಲಿಯುವುದು ಹೇಗೆ?’, ‘ಓದುವುದು ಹೇಗೆ?’, ‘ಓದಿದ್ದನ್ನು ಮರೆಯದೆ ಇರುವುದು ಹೇಗೆ?’, ‘ಅದನ್ನು ಕಲಿಯುವುದು ಹೇಗೆ?’,`ಇದನ್ನು ಮರೆಯುವುದು ಹೇಗೆ?’ ‘ಎಂದೋ ಕಲಿತ ಯಾವುದರಿಂದಲೋ Read More

ತಾರೆಗಳ ತೋಟದ ಮುಸ್ಸಂಜೆಗಳು

ಕೆಲಕಾಲದ ಹಿಂದೆ ನಿಧನರಾದ ಕನ್ನಡದ ಹೆಮ್ಮೆಯ ಕಲಾವಿದೆ ಪಂಡರಿಬಾಯಿ ತಮ್ಮ ಕೊನೆಗಾಲದಲ್ಲಿ ಅನಾರೋಗ್ಯ ಹೊಂದಿ, ಸಂಕಷ್ಟಕ್ಕೆ ಗುರಿಯಾಗಿ ಕೊನೆಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರ ನೆರೆವಿಗೆ ಧಾವಿಸಿದ್ದು, ಚಿಕಿತ್ಸೆಗೆ ನೆರವಾಗಿದ್ದು ಎಲ್ಲರಿಗೂ ತಿಳಿದ ಸಂಗತಿಯೇ ಅಗಿದೆ. ಜಯಲಲಿತ ತಾವೂ ಕೂಡ ಮಾಜಿ ಕಲಾವಿದೆಯಾಗಿದ್ದು, ಮತ್ತೊಬ್ಬ ಕಲಾವಿದೆಯ ಕಂಬನಿ ಒರೆಸಲು ಮುಂದಾಗಿದ್ದು, ಜಯಲಲಿತಳನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ಒಪ್ಪಿಕೊಳ್ಳದವರಿಗೂ Read More