ಬೆಳ್ಳಿ ಮೋಡಗಳು – ಹೃದಯವೆ ನಿನ್ನ ಹೆಸರಿಗೆ

ಬೆಳ್ಳಿ ಮೋಡಗಳು (1992)
ಸಾಹಿತ್ಯ : ದೊಡ್ಡರಂಗೇಗೌಡ
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಮನು, ಎಸ್.ಜಾನಕಿ

ಹಾಡು ಕೇಳಿ

ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ
ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ
ಆಕಾಶ ನಾನಾದೆ ನಾ

ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ
ಮಾತಿನಲ್ಲೆ ತಂದೆ ಮಳೆ ಬಿಲ್ಲ
ನಾಚಿ ನಿಂತ ಹೂವು ಬಳ್ಳಿ ಎಲ್ಲ
ಬಾನಲ್ಲಿ ಒಂದಾದೆ ನಾ

ಕಣ್ಣಿನಲಿ ಆಸೆ ಅಂಕುರಿಸಿ
ಪ್ರಥಮಗಳು ಪಲ್ಲವಿಸಿ
ಉದಯಗಳ ತೀರ ಸಂಚರಿಸಿ
ಹೃದಯಗಳು ಝೇಂಕರಿಸಿ

ಪ್ರಣಯದ ಹಾಡಾದೆ ನಾ
ಅರಳಿದ ಹೂವಾದೆ ನಾ
ಋತುವಲಿ ಒಂದಾದೆ ನಾ

ಮಳೆ ಹನಿಯ ಮೋಡ ನಾನಾಗಿ
ಹನಿ ಇಡುವೆ ನೆನಪಾಗಿ
ಉದಯಗಳ ಊರೇ ನಾನಾಗಿ
ಬೆಳಕಿಡುವೆ ನಿನಗಾಗಿ

ಪ್ರಣಯದ ಆರಾಧನ
ಋತುವಿನ ಆಲಾಪನ
ಮಿಥುನದ ಆಲಿಂಗನ

*************

ಅನುಪಮ – ಒಲುಮೆ ಪೂಜೆ

ಚಿತ್ರ : ಅನುಪಮ (೧೯೮೧)
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ

ದೊಡ್ಡರಂಗೇಗೌಡ/ಉದಯ/ನಕ್ಷತ್ರ

ಹಾಡು ಕೇಳಿ –

ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ 

ಕೊಳಲು – ಪ್ರವೀಣ್ ಗೋಡ್ಕಿಂಡಿ 

ಒಲುಮೆ ಪೂಜೆಗೆಂದೇ
ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮಗಾನ ಸಂಜೀವನಾ

ಮಮತೆ ಮೀಟಿ ಮಿಲನ ಕಂಡೆ
ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರಯ ತೂಗಿ ಸನಿಹ ಬಂದೆ
ಎಲ್ಲಾ ಪ್ರೀತಿ ಸಮ್ಮೋಹ ತಂದೆ

ಹರುಷ ತಂದ ಹಾದಿಯೇ ಚಂದ
ಒಲವಿನಾಸರೆ ರೋಮಾಂಚ ಬಂಧ

ಜೊತೆಯ ಸೇರಿ ಬರುವೆ ನಾನು
ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು
ನಿನ್ನ ಕೂಡಿ ಹೊಂಬಿಸಿಲ ಬಾನು

ನಿನಗೆ ನಾನು ನನಗೆ ನೀನು
ನಿನಗೆ ನಾನು ನನಗೆ ನೀನು
ಪ್ರೇಮ ಜೀವನ ಎಂದೆಂದೂ ಜೇನು

*    *    *     *     *      *

ಪರಸಂಗದ ಗೆಂಡೆತಿಮ್ಮ – ನಿನ್ನ ರೂಪು

ಚಿತ್ರ : ಪರಸಂಗದ ಗೆಂಡೆತಿಮ್ಮ(೧೯೭೮)
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ರಾಜನ್-ನಾಗೇಂದ್ರ
ಗಾಯಕಿ: ಎಸ್.ಜಾನಕಿ 

ಎಸ್.ಜಾನಕಿ - ಚಿತ್ರ ಕೃಪೆ:ಮೀರಾಕೃಷ್ಣ

ಹಾಡು ಕೇಳಿ

ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ
ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ

ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ
ಹೃದಯದ ಕುಲುಮೆಯಾಗೆ ನೂರು ಬಯಕೆ ಸಿಡಿದೈತೆ
ನಿನ್ನ ಕಾಣುವ ಬಾವ ಬೆಳೆದು ನನ್ನ ಕನಸು ಕಡೆದೈತೆ

ತೆರೆಯದ ಬಯಕೆ ಬಾನು ದೂರ ದೂರ ಸರಿದೈತೆ
ಹರೆಯದ ಹಂಬಲ ಗಂಗೆ ಬಾಗಿ ಬಳುಕಿ ಹರಿದೈತೆ
ನಿನ್ನ ಸ್ನೇಹಕೆ ಬಾಳು ನಲಿದು ಆಸೆ ಗಂಧ ಹರಡೈತೆ

ಮರೆಯದ ಮೋಹ ಉಕ್ಕಿ ತೇಲಿ ತೇಲಿ ಮೊರೆದೈತೆ
ಇಂಗದ ದಾಹ ಬೇಗೆ ಕಾದೂ ಕಾದೂ ಕರೆದೈತೆ
ನಿನ್ನ ಸೇರುವ ರಾಗ ರಂಗಿಗೆ ನನ್ನ ಮನಸು ತೆರೆದೈತೆ

*         *             *             *            *