ಪೋಗಬೇಡವೊ ನಿಗಮನುತ – Pogabedavo Nigamanuta madhurege

ಪೋಗಬೇಡವೊ ನಿಗಮನುತ ಮಧುರೆಗೆ ಪೋಗಬೇಡವೊ ಹರಿಯೆ||ಪಲ್ಲವಿ|| ಪೋಗುವಿ ನೀ ಪುನಾರಾಗಮ ಎಂದಿಗೆ ಹೇಗೆ ತಾಳುವೆವೊ ನಾಗಮರ್ದನ ಕೃಷ್ಣ||ಅನು|| ಬಾಲತನದಿ ಬಹುಲೀಲೆಗಳಿಂದಲಿ ಗೋಪಾಲಕರೊಡಗೂಡಿಬಾಳಪ್ರೇಮದಿ ನಮ್ಮಾಲಯವನು ಪೊಕ್ಕು ಪಾಲು ಮೊಸರು ಬೇಡಿಶೀಲಮೂರುತಿ ನಿಮ್ಮೊಲುಮೆಗೆ ಸಿಲುಕಿದಬಾಲೆಯರ ಸ್ಮರಣಂಬಿಗೆ ಗುರಿಮಾಡಿ ||-೧-|| ಹುಟ್ಟಿದ್ದು ಮಧುರೆ ತಂದಿಟ್ಟದ್ದು ಗೋಕುಲ ಪಟ್ಟದರಸ ಎನಿಸಿಬೆಟ್ಟಿಲಿ ಬೆಟ್ಟವ ಎತ್ತಿ ಪೊರೆದು ಬಂದ ಕಷ್ಟವ ಪರಿಹರಿಸಿಕೃಷ್ಣಮೂರುತಿ ಪರಮೇಷ್ಟಿಗಳರಸನೆನಮ್ಮಿಷ್ಟ ದೈವವೆ Read More

ಬಾರಯ್ಯಾ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ!

ರಚನೆ : ಗೋಪಾಲದಾಸರು ಹಾಡಿದವರು : ಮೈಸೂರು ರಾಮಚಂದ್ರ ಆಚಾರ್ಯ ವಾರಿಜಾಲಯಪತೆ ವಾರಿಜನಾಭನೆ ವಾರಿಜಭವಪಿತ ವಾರಿಜನೇತ್ರನೆ ವಾರಿಜಮಿತ್ರ ಅಪಾರ ಪ್ರಭಾವನೆ ವಾರಿಜಜಾಂಡದ ಕಾರಣ ದೊರೆಯೆ ಬಾರೈಯ್ಯ ಬಾ ಬಾ ಭಕುತರ ಪ್ರಿಯ ಶ್ರೀನಿವಾಸ ರಾಯ ||ಪ|| ಮಾರ ಜನಕ ಮುಕುತರೊಡೆಯ ದೇವೈಯ್ಯ ಜೀಯ ||ಅ-ಪ|| ಸ್ಯಂದನವೇರಿ ಬಾಪ್ಪ ರಂಗ ದೇವೋತ್ತುಂಗ ನಂದ ನಂದನ ಅರಿಮದಭಂಗ ಕರುಣಾಪಾಂಗ Read More

ಸೀತೆಯ ಭೂಮಿಜಾತೆಯ – Seeteya Bhoomi Jaateya

ವಿಜಯದಾಸರ ರಚನೆ ಸೀತೆಯ ಭೂಮಿಜಾತೆಯ ಜಗ-|ನ್ಮಾತೆಯ ಸ್ಮರಿಸಿ ವಿಖ್ಯಾತೆಯ ||ಪಲ್ಲವಿ|| ಕ್ಷೀರ ವಾರಿಧಿಯ ಕುಮಾರಿಯ ತನ್ನ |ಸೇರಿದವರ ಭಯಹಾರಿಯ ||ತೋರುವಳು ಮುಕ್ತಿದಾರಿಯ ಸರ್ವ |ಸಾರ ಸುಂದರ ಶ್ರೀನಾರಿಯ ||1|| ಈಶಕೋಟಿಯೊಳು ಗಣನೆಯ ಸ್ವಪ್ರ-|ಕಾಶವಾದ ಗುಣಶ್ರೇಣಿಯ ||ಈಶಾದ್ಯರ ಪೆತ್ತ ಕರುಣಿಯ ನಿ-|ರ್ದೋಷ ವಾರಿಧಿಕಲ್ಯಾಣಿಯ||2|| ವಿಜಯವಿಠ್ಠಲನ್ನ ರಾಣಿಯ ಪಂ-|ಕಜಮಾಲೆ ಪಿಡಿದ ಪಾಣಿಯ ||ವಿಜಯಲಕ್ಷ್ಮಿ ಗಜಗಮನೆಯ ನಿತ್ಯ |ಸುಜನವಂದಿತೆ ಅಹಿವೇಣಿಯ Read More

ಕೇಶವ ನಾಮ – ಕನಕದಾಸರು

ಈಶ ನಿನ್ನ ಚರಣ ಭಜನೆ । ಆಶೆಯಿಂದ ಮಾಡುವೆನು । ದೋಷರಾಶಿ ನಾಶ ಮಾಡು ಶ್ರೀಶ ಕೇಶವ ।।೧।।ಶರಣು ಹೊಕ್ಕೆನಯ್ಯ ಎನ್ನ । ಮರಣಸಮಯದಲ್ಲಿ ನಿನ್ನ । ಚರಣಸ್ಮರಣೆ ಕರುಣಿಸಯ್ಯ ನಾರಾಯಣಾ ।।೨।।ಶೋಧಿಸೆನ್ನ ಭವದ ಕಲುಷ । ಬೋಧಿಸಯ್ಯ ಜ್ಞಾನವೆನಗೆ । ಬಾಧಿಸುವ ಯಮನ ಬಾಧೆ ಬಿಡಿಸು ಮಾಧವಾ ।।೩।।ಹಿಂದನೇಕ ಯೋನಿಗಳಲಿ । ಬಂದು ಬಂದು Read More