ಎನ್ನಂಥ ಭಕ್ತರು ಆನಂತ ನಿನಗಿಹರು

ರಚನೆ : ಜಗನ್ನಾಥ ದಾಸರು ಎನ್ನಂಥ ಭಕ್ತರು ಆನಂತ ನಿನಗಿಹರು ನಿನ್ನಂಥ ಸ್ವಾಮಿ ಎನಗಿಲ್ಲ|| ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ ಭಿನೈಪೆ ಎನ್ನಾ ಸಲಹೆಂದು || ಪಲ್ಲವಿ|| ಪತಿತ ನಾನಾದರೂ ಪತಿತಪಾವನ ನೀನು ರತಿನಾಥ ಜನಕ ನಗಪಾಣಿ || ರತಿನಾಥ ಜನಕ ನಗಪಾಣಿ ನೀನಿರಲು ಇತರ ಚಿಂತ್ಯಾಕೋ ಎನಗಿನ್ನು || ೧|| ಮನದೊಳಗೆ ನೀನಿದ್ದು ಮನವೆಂದೆನಿಸಿಕೊಂಡು Read More

ದಯವಿರಲಿ ದಯವಿರಲಿ ದಾಮೋದರ – Dayavirali Damodara

ರಚನೆ : ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ರಚನೆ – ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ||ಪಲ್ಲವಿ|| ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣ ||ಅನು ಪಲ್ಲವಿ|| ಹೋಗುವ ಹಾದಿಯಲಿ ಹೋದ ಹಾಗೆಲ್ಲ ನಾ ಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟು ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲುವಂತೆ ಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||-೧-|| Read More

ಲಕ್ಷ್ಮೀ ಶೋಭಾನೆ – Lakshmi Shobhane – 1

ಶೋಭಾನವೆನ್ನಿರೆ ಸುರರೊಳು ಶುಭಗನಿಗೆ ಶೋಭಾನವೆನ್ನಿ ಸುಗುಣನಿಗೆ ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ ಶೋಭಾನವೆನ್ನಿ ಸುರಪ್ರಿಯಗೆ ಶೋಭಾನೆ ||ಪಲ್ಲವಿ|| ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ ಪಕ್ಷಿವಾಹನ್ನಗೆರಗುವೆ ಪಕ್ಷಿವಾಹನ್ನಗೆರಗುವೆ ಅನುದಿನ ರಕ್ಷಿಸಲಿ ನಮ್ಮ ವಧೂವರರ ||೧|| ಪಾಲಸಾಗರವನ್ನು ಲೀಲೆಯಲಿ ಕಡೆಯಲು ಬಾಲೆ ಮಹಾಲಕ್ಷುಮಿ ಉದಿಸಿದಳು ಬಾಲೆ ಮಹಾಲಕ್ಷುಮಿ ಉದಿಸಿದಳಾ ದೇವಿ ಪಾಲಿಸಲಿ ನಮ್ಮ ವಧೂವರರ ||೨|| ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ ಸುಮ್ಮನೆಯಾಗಿ ಮಲಗಿಪ್ಪ Read More

ಲಕ್ಷ್ಮೀ ಶೋಭಾನೆ – Lakshmi Shobhane – 2

ನರಕವಾಳುವ ಯಮಧರ್ಮರಾಯ ತನ್ನ ನರಜನ್ಮದೊಳಗೆ ಪೊರಳಿಸಿ ಮರಳೀ ತನ್ನರಕದಲಿ ಪೊರಳಿಸಿ ಕೊಲುವನು ಕುರು ನಿನ್ನ ಕುಹಕ ಕೊಳದಲ್ಲ ||೫೭|| ಬೊಮ್ಮನ ನೂರು ವರ್ಷ ಪರಿಯಂತ ಪ್ರಳಯದಲಿ ಸುಮ್ಮನೆಯಾಗಿ ಮಲಗಿಪ್ಪ ನಮ್ಮ ನಾರಾಯಣಗೆ ಹಸಿ-ತೃಷೆ -ಜರ-ಮರಣ-ದು- ಷ್ಕರ್ಮ-ದುಃಖಂಗಳು ತೊಡಸುವರೆ ||೫೮|| ರಕ್ಕಸರಸ್ತ್ರಗಳಿಂದ ಗಾಯವಡೆಯದ ಅಕ್ಷಯಕಾಯದ ಶ್ರೀಕೃಷ್ಣ ತುಚ್ಛ ಯಮಭಟರ ಶಸ್ತ್ರಕಳಕುವನಲ್ಲ ಹುಚ್ಚ ನೀ ಹರಿಯ ಗುಣವರಿಯ ||೫೯|| Read More

ಶ್ರೀನಿವಾಸ ಕಲ್ಯಾಣ – Srinivasa Kalyana

ಸ್ತ್ರೀಯರೆಲ್ಲರು ಬನ್ನಿರೆ । ಶ್ರೀನಿವಾಸನ ಪಾಡಿರೇಜ್ಞಾನಗುರುಗಳಿಗೊಂದಿಸಿ । ‏ ಮುಂದೆ ಕಥೆಯ ಪೇಳುವೆ ।। ಗಂಗಾ ತೀರದಿ ಋಷಿಗಳು । ಅಂದು ಯಾಗವ ಮಾಡ್ಡರುಬಂದು ನಾರದ ನಿಂತುಕೊಂಡು । ಯಾರಿಗೆಂದು ಕೇಳಲು ಅರಿತು ಬರಬೇಕು ಎಂದು । ಆ ಮುನಿಯು ತೆರಳಿದ-ಭೃಗುಮುನೀಯು ತೆರಳಿದನಂದಗೋಪನ ಮಗನ ಕಂದನ । ಮಂದಿರಕಾಗ ಬಂದನು ವೇದಗಳನೆ ಓದುತಾ । ಹರಿಯನೂ Read More