ನಿನ್ನ ಕರುಣೆಗೆ – ಚೆನ್ನವೀರ ಕಣವಿ
ನಿನ್ನ ಕರುಣೆಗೆ ನಾನು ಕೇಂದ್ರವಾಗಿ ನಿಂದಿರುವೆ ಮೌನದಲಿ ತಲೆಯ ಬಾಗಿ ಮುಗಿಲಿಂದ, ಹಗಲಿಂದ, ಇರುಳಿಂದ ಬಂದು ಮುಗಿಯದಾವುದೊ ಮಹಾದ್ಭುತವ ತಂದು, ಬದುಕು ಪೊರೆ ಪೊರೆ ಬಿಚ್ಚಿ ಹದಗೊಳಿಸಲೆಂದು ಒಳಗು ಹೊರಗೂ ತುಂಬಿ ತುಳುಕಿರುವೆ ಇಂದು. ಅಂಜುವೆನು, ಅಳುಕುವೆನು ಅಷ್ಟಿಷ್ಟಕೆಲ್ಲ ಮಂಜು ಮುಗಿಬೀಳುವುದು ಭೂಮಿ ಬಾನೆಲ್ಲ: ಹಿಂಜುವುದು ನೇಸರನ ನೂರಾರು ಕಿರಣ ಜೇಡಬಲೆ ತುಂಬೆಲ್ಲ ಮುತ್ತಿನಾಭರಣ. ಒಂದೊಂದು Read More