ಗೆಳೆಯನೊಬ್ಬನಿಗೆ ಬರೆದ ಕಾಗದ – ಜಿ. ಎಸ್. ಶಿವರುದ್ರಪ್ಪ

ಬಾಳ ಪಯಣದಲಿ ಹಿರಿಯ ಗುರಿಯ ಕಡೆ ನಡೆಯುತಿರಲು ನಾನು ಯಾವ ಜನ್ಮದಲಿ ಗೈದ ಸುಕೃತವೊ ಮಿಲನವಾದೆ ನೀನು. ತಾಯಿ ಮೊದಲ ಗುರು, ತಂದೆ ರಕ್ಷಕನು ಮಿತ್ರ ಎರಡು ಹೌದು, ಎಂಬ ಹಿರಿನುಡಿಯ ನಿನ್ನ ವಾಣಿಯಲಿ ಕೇಳಿ ನಲಿದೆನಿಂದು ಬಾಳ ಹಾದಿಯಲಿ ಪಯಣಕರ್ಮದಲಿ ನೀನು ಮುಂದೆ ಮುಂದೆ. ನಾನಿನ್ನು ಹಿಂದೆ ; ಬಾಹ್ಯದೃಷ್ಟಿಯಲಿ ನಾವೆಲ್ಲರಿಲ್ಲಿ ಒಂದೆ! ಸಹೃದಯ Read More

ಯುಗಾದಿಯ ಹಾಡು

ಕವಿ – ಜಿ. ಎಸ್. ಶಿವರುದ್ರಪ್ಪ ಗಾಯಕ – ಡಾ. ಶಶಿನಾಥ್ ಗೌಡ ಹಾಡು ಕೇಳಿ ಬಂದ ಚೈತ್ರದ ಹಾದಿ ತೆರೆದಿದೆ ಬಣ್ಣ-ಬೆಡಗಿನ ಮೋಡಿಗೆ ಹೊಸತು ವರ್ಷದ ಹೊಸತು ಹರ್ಷದ ಬೇವು-ಬೆಲ್ಲದ ಬೀಡಿಗೆ. ಕೊಂಬೆ ಕೊಂಬೆಯ ತುಂಬ ಪುಟಿದಿದೆ ಅಂತರಂಗದ ನಂಬಿಕೆ ಚಿಗುರು ಹೂವಿನ ಬಣ್ಣದಾರತಿ ಯಾವುದೋ ಆನಂದಕೆ! ಇದ್ದುದೆಲ್ಲವು ಬಿದ್ದುಹೋದರು ಎದ್ದು ಬಂದಿದೆ ಸಂಭ್ರಮ. Read More

ಸ್ತ್ರೀ – ಜಿ.ಎಸ್.ಶಿವರುದ್ರಪ್ಪ

ಕವಿ – ಜಿ.ಎಸ್.ಶಿವರುದ್ರಪ್ಪ ಗಾಯಕ – ಸಿ. ಅಶ್ವಥ್ ಹಾಡು ಕೇಳಿ ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಹಸುರನುಟ್ಟ ಬೆಟ್ಟಗಳಲಿ ಮೊಲೆಹಾಲಿನ ಹೊಳೆಯನಿಳಿಸಿ ಬಯಲ ಹಸುರ ನಗಿಸಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಮರ Read More

ತಕ್ಕಡಿಯಿಂದ ತಂಬೂರಿಯ ತನಕ

ಕವಿ : ಜಿ.ಎಸ್.ಶಿವರುದ್ರಪ್ಪ ಸಂಕಲನ : ನೂರು ಕವಿತೆಗಳು ತಕ್ಕಡಿಯಿಂದ ತಂಬೂರಿಯ ತನಕ ಸಹಧರ್ಮಿಣಿಯ ಮೂಗುತಿಯ ಮಿನುಗು, ತಂಬೂರಿಯಿಂದ ತುಂಬುವತನಕ ಹಾಡಿನ ಮೊಳಗು. ತಕ್ಕಡಿಯಲ್ಲಿ ತೂಗಿದನು ಇಹದ ಸರುಕೆಲ್ಲವನು ಈ ವ್ಯಾಪಾರಿ. ಗೊತ್ತಾಗಲಿಲ್ಲ ವೈಕುಂಠಕೆ ದಾರಿ. ‘ದಾರಿ ಯಾವುದಯ್ಯಾ ವೈಕುಂಠಕೆ?’ ಪ್ರಶ್ನೆಗುತ್ತರವಾಗಿ ಮೊಳಗಿತ್ತು ಒಳಗಿಂದಲೇ ಮರುಪ್ರಶ್ನೆ ; ‘ಯಾರು ಹಿತವರು ನಿನಗೆ ಈ ಮೂವರೊಳಗೆ ನಾರಿಯೋ? Read More

ಜಡೆ – ಜಿ. ಎಸ್. ಶಿವರುದ್ರಪ್ಪ

ಕವನ – ಜಡೆ ಕವಿ – ಜಿ. ಎಸ್. ಶಿವರುದ್ರಪ್ಪ ಲಲನೆಯರ ಬೆನ್ನೆನೆಡೆ ಹಾವಿನೊಲು ಜೋಲ್ವ ಜಡೆ ಕಾಳಿಂದಿಯಂತಿಳಿದು, ಕೊರಳೆಡೆಗೆ ಕವಲೊಡೆದು ಅತ್ತಿತ್ತ ಹರಿದ ಜಡೆ! ಚೇಳ್ ಕೊಂಡಿಯಂಥ ಜಡೆ, ಮೋಟು ಜಡೆ, ಚೋಟು ಜಡೆ, ಚಿಕ್ಕವರ ಚಿನ್ನ ಜಡೆ ! ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ ಗಂಟು Read More