ಕನಸಿನೊಳಗೊಂದು ಕಣಸು – ಅಂಬಿಕಾತನಯದತ್ತ

ಕವನ -ಕನಸಿನೊಳಗೊಂದು ಕಣಸುಕವಿ – ದ.ರಾ.ಬೇಂದ್ರೆ(ಅಂಬಿಕಾತನಯದತ್ತ)          ತಾಯಿ ಮಕ್ಕಳ ಸಂವಾದ(ಈಗಿನ ಕನ್ನಡ ನಾಡಿನ ಮತ್ತು ಕನ್ನಡಿಗರ ಸ್ಥಿತಿಯ ಚಿತ್ರ) “ಯಾರು ನಿಂದವರಲ್ಲಿ ತಾಯೆ” ಎಂದೆ  “ಯಾರು ಕೇಳುವರೆನಗೆ, ಯಾಕೆ ತಂದೆ ?” “ಬೇಸರದ ದನಿಯೇಕೆ ಹೆಸರ ಹೇಳಲ್ಲ”  “ಹೆಸರಾಗಿಯೂ ಕೂಡ ಹೇಳ ಹೆಸರಿಲ್ಲ” “ನೀನಾರ ಮನೆಯವಳು ಮುತ್ತೈದೆ ಹೇಳು”  “ನಾನಾರ ಮನೆಯವಳೊ ಬಯಲನ್ನೆ ಕೇಳು” “ಆಪ್ತರಿಲ್ಲವೆ ನಿನಗೆ Read More

ಕೃಷ್ಣಪಕ್ಷದ ಮಧ್ಯರಾತ್ರಿ – ಅಂಬಿಕಾತನಯದತ್ತ

೧ ‘-ಹಿಂದೆ ಎಂದೋ ಒಮ್ಮೆ ಇಂದಿನೀ ರಾತ್ರಿ ಕೃಷ್ಣ ಹುಟ್ಟಿದನಂತೆ – ಕೃಷ್ಣ ಹುಟ್ಟಿದನು. ಮುಂದೆ ಎಂದೋ ಒಮ್ಮೆ ತಾ ಬರುವ ಖಾತ್ರಿ ಕೃಷ್ಣ ಹೇಳಿದನಂತೆ ; ಪಾರ್ಥ ಕೇಳಿದನು : ೨ “ಬಾಡಿರಲು ಬತ್ತಿರಲು ಧರ್ಮವು ; ಅಧರ್ಮ ಮೊಳೆತಿರಲು ಚಿಗಿತಿರಲು ನಾ ಬರುವೆನೆಂ”ದು. ಆಡಿದನು ಮಾಡಿಲ್ಲ. ಯಾರದೀ ಕರ್ಮ? ಇನ್ನಾದರೂ ಅವನು ಬರುವುದೆಂದು? Read More

ತಿಲ್ಲಾಣ – ಅಂಬಿಕಾತನಯದತ್ತ

೧ ಇದಾವ ಹಾಡು ? ಇದಾವ ತಾಲ ? ಇದಾವ ರಾಗ ? ನನ್ನ ಪುಟ್ಟ ಪುರಂದರ ವಿಠಲಾ ! ೨ ಕೈಯ ತಾರಮ್ಮಯ್ಯಕ್ಕೆ ತೊದಲ ನುಡಿಯ ತಿಲ್ಲಾಣ ; ಬಾಯಬೆಲ್ಲವ ಚಪ್ಪರಿಸಿ ಕಾಯಪರವಶನಾದೆ ; ಇದಾವ ರಸ ? ಇದಾವ ಭಾವ ? ಇದಾವ ಹಾವ ? ನನ್ನ ಪುಟ್ಟ ಪುರಂದರ ವಿಠಲಾ ! Read More

ಜಗವೆಲ್ಲ ಮಲಗಿರಲು – ದ.ರಾ.ಬೇಂದ್ರೆ

ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ; ಮಡದಿ ಮಗು ಮನೆ – ಮಾರು ರಾಜ್ಯ – ಗೀಜ್ಯ ಹೊತ್ತಿರುವ ಉರಿಯಲಿ ಆಯಿತಾಜ್ಯ ಹಿಂದೆ ಬಿದ್ದವು ಎಲ್ಲೋ ಕುದುರೆ ಕಾಲಾಳು ಬಿಚ್ಚಿ ಉದಿರಿತು ಎಲ್ಲೋ ಮನದ ಬಾಳು ಹೊರಟ ಹೊರಟೇ ಹೊರಟ, ಹೊರಟನೆತ್ತೋ ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ ! ಕಾಮ – ಕ್ರೋಧವ ದಾಟಿ, ಮದ – Read More

ಯುಗಾದಿ ಮರಳಿ ಬರುತಿದೆ – ಬೇಂದ್ರೆ

  ಕವನ : ಯುಗಾದಿ ಕವಿ : ಅಂಬಿಕಾತನಯ ದತ್ತ (ದ.ರಾ.ಬೇಂದ್ರೆ) ಹಾಡು ಕೇಳಿ  ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿ ಮತ್ತೆ ಕೇಳಬರುತಿದೆ ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ ಕಮ್ಮನೆ Read More