ಹೃದಯ ಹೃದಯ ಮಿಲನದೊಳಗೆ – ಪುತಿನ

ಸಾಹಿತ್ಯ : ಪು ತಿ ನರಸಿಂಹಾಚಾರ್ ಸಂಗೀತ : ಎನ್ ಎಸ್ ಪ್ರಸಾದ್ ಗಾಯನ : ರತ್ನಮಾಲ ಪ್ರಕಾಶ್ ಹೃದಯ ಹೃದಯ ಮಿಲನದೊಳಗೆ ಮಧುರವಹುದು ಧಾತ್ರಿ ಮಧುರ ನಯನ ಮಧುರ ವಚನ ಮಧುರ ಹಸನ ಮೈತ್ರಿ ಇರವಿರವಿನ ನಡುವಣಿರುಳ ಪರಿಹರಿಸುವ ಸಲುವಳಿ|| ಹರಿವರ್ತವ ಜಮಿಸು ಓರ್ಚೆ ನರಗೊಲುಮೆಯ ಬಳುವಳಿ|| ಇನಿಯರೊಸಗೆ ಮೊಗದೊಳೆಸೆವ ದನಿಯ ಕಾಂತಿಗೇನೇಳೆ|| ಅನುಕರಿಸುವ Read More

ಅಗಣಿತ ತಾರಾ ಗಣಗಳ ನಡುವೆ- – ಕುವೆಂಪು

ಅಗಣಿತ ತಾರಾಗಣಗಳ ನಡುವೆ        ನಿನ್ನನೆ ನೆಚ್ಚಿಹೆ ನಾನು.ನನ್ನೀ ಜೀವನ ಸಮುದ್ರ ಯಾನಕೆ        ಚಿರ ಧ್ರುವ ತಾರೆಯು ನೀನು. ಇಲ್ಲದ ಸಲ್ಲದ ತೀರಗಳೆಡೆಗೆ        ಹೊರಡುತ ಬಳಲಿದರೇನು.ದಿಟ್ಟಿಯು ನಿನ್ನೊಳು ನೆಟ್ಟರೆ ಕಡೆಗೆ       ಗುರಿಯನು ಸೇರೆನೆ ನಾನು? ಚಂಚಲವಾಗಿಹ  ತಾರಕೆಗಳಲಿ        Read More

ಒಡವೆಗಳು – ಕುವೆಂಪು

ಚಿನ್ನದ ಒಡವೆಗಳೇತಕೆ ಅಮ್ಮಾ?ತೊಂದರೆ ಕೊಡುವುವು ಬೇಡಮ್ಮಾ!ಬಣ್ಣದ ಬಟ್ಟೆಗಳೇತಕೆ ಅಮ್ಮಾ?ಮಣ್ಣಿನೊಳಾಡಲು ಬಿಡವಮ್ಮಾ! ‘ಚಂದಕೆ, ಚಂದಕೆ’ ಎನ್ನುವೆಯಮ್ಮಾ!ಚಂದವು ಯಾರಿಗೆ ಹೇಳಮ್ಮಾ?ನೋಡುವರಿಗೆ ಚಂದವು, ಆನಂದ;ಆಡುವ ಎನಗಿದು ಬಲು ಬಂಧ! ನನ್ನೀ ಶಿಶುತನ ನಿನ್ನೀ ತಾಯ್ತನಎರಡೇ ಒಡವೆಗಳೆಮಗಮ್ಮಾ:ನಾ ನಿನಗೊಡವೆಯು; ನೀ ನನಗೊಡವೆಯು;ಬೇರೆಯ ಒಡವೆಗಳೇಕಮ್ಮಾ? – ಕುವೆಂಪು

ನನ್ನ ಹಾಗೆಯೆ – ಸು ರಂ ಎಕ್ಕುಂಡಿ

ನನ್ನ ಹಾಗೆಯೆ ಸು ರಂ ಎಕ್ಕುಂಡಿ ಮೊನ್ನೆ ಮೊನ್ನೆ ನಡೆಯಿತಲ್ಲ ಬಾಹುಬಲಿಯ ಮಜ್ಜನ ಬೆಟ್ಟದಲ್ಲಿ ಕೇಳಿತೊಂದು ಪುಟ್ಟ ಮಗುವು ಅಜ್ಜನ “ಈತನಾರು ತಾತ ಇಲ್ಲಿ ನಿಂತು ನೋಡುತಿರುವನು ಇಂದ್ರಗಿರಿಯ ನೆತ್ತಿಯಲ್ಲಿ ಏನು ಮಾಡುತಿರುವನು?” “ಇವನೆ ಬಾಹುಬಲಿಯು ಮಗು! ಧೀರತನದ ಮೂರ್ತಿಯು! ನುಡಿಯ ಹೊಳೆಗಳಲ್ಲಿ ತುಂಬಿ ಹರಿವುದಿವನ ಕೀರ್ತಿಯು ಹತ್ತುವವರ ಇಳಿಯುವವರ ನಿಂತು ನೋಡುತಿರುವನು ನಿಲ್ಲುವವರ ನಡೆಯುವವರ Read More

ಕೃಷ್ಣಪಕ್ಷದ ಮಧ್ಯರಾತ್ರಿ – ಅಂಬಿಕಾತನಯದತ್ತ

೧ ‘-ಹಿಂದೆ ಎಂದೋ ಒಮ್ಮೆ ಇಂದಿನೀ ರಾತ್ರಿ ಕೃಷ್ಣ ಹುಟ್ಟಿದನಂತೆ – ಕೃಷ್ಣ ಹುಟ್ಟಿದನು. ಮುಂದೆ ಎಂದೋ ಒಮ್ಮೆ ತಾ ಬರುವ ಖಾತ್ರಿ ಕೃಷ್ಣ ಹೇಳಿದನಂತೆ ; ಪಾರ್ಥ ಕೇಳಿದನು : ೨ “ಬಾಡಿರಲು ಬತ್ತಿರಲು ಧರ್ಮವು ; ಅಧರ್ಮ ಮೊಳೆತಿರಲು ಚಿಗಿತಿರಲು ನಾ ಬರುವೆನೆಂ”ದು. ಆಡಿದನು ಮಾಡಿಲ್ಲ. ಯಾರದೀ ಕರ್ಮ? ಇನ್ನಾದರೂ ಅವನು ಬರುವುದೆಂದು? Read More