ನಾನೇಕೆ ಬಡವನು? ನಾನೇಕೆ ಪರದೇಶಿ?

ರಚನೆ – ಪುರಂದರದಾಸರು ವಿದ್ಯಾಭೂಷಣರ ದನಿಯಲ್ಲಿ ನಾನೇಕೆ ಬಡವನೊ ನಾನೇಕೆ ಪರದೇಶಿ ಶ್ರೀನಿಧೇ ಹರಿ ಎನಗೆ ನೀನಿರುವ ತನಕ||ಪ|| ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ ಅಷ್ಟ ಬಂಧು ಬಳಗ ಸರ್ವ ನೀನೆ ಪೆಟ್ಟಿಗೆಯ ಒಳಗಿನ ಅಷ್ಟಾಭರಣ ನೀನೆ ಶ್ರೇಷ್ಠ ಮೂರುತಿ ಕೃಷ್ಣ ನೀನಿರುವತನಕ||೧|| ಒಡಹುಟ್ಟಿದವ ನೀನೆ ಒಡಲಿಗ್ಹಾಕುವ ನೀನೇ ಉಡಲು ಹೊದೆಯಲು ವಸ್ತ್ರ ಕೊಡುವವ ನೀನೆ Read More

ನನ್ನ ಬಯಕೆ – ಕುವೆಂಪು

ಕವಿ – ಕುವೆಂಪು ಹಾಡು ಕೇಳಿ ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ. ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ. ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ ದನಿಯು ದನ ಕಾಯುವನ ಕೊಳಲೊಡನೆ ಬರಲಿ. ಅಲ್ಲಿ ಸಿರಿಗನ್ನಡ ಕಬ್ಬಗಳ ಹಬ್ಬಗಳು ದಿನ ದಿನವು ಸವಿಯೂಟವಿಕ್ಕುತಿರಲೆನಗೆ. ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ Read More

ಅಮ್ಮ

ಅವಳು- ದುಡಿದುಡಿದು ಸತ್ತವಳು, ದುಡಿದು ಬೇಸತ್ತವಳು, ಬದುಕ ಹೆಗ್ಗಾಲಿಯ ಕೆಳಗೆ ನುಚ್ಚು ನೂರಾದವಳು ಅವಳಿಲ್ಲ ಈಗ- ಹೀಗನ್ನುವುದು ದಾಷ್ಟೀಕ ಇದ್ದೇ ಇದ್ದಾಳೆ ಮನದಾಳದೊಳಗೆ- ನಾನೊಂದು ಕಣ್ಣೀರಿಡುವಾಗ ಮೈದಡವಿ ಸಂತೈಸುತ್ತಾಳೆ, ನನ್ನ ಸುಖ, ಸಾಧನೆಗಳಿಗೆ ತಾನೂ ಸಂಭ್ರಮಿಸಿ ನಲಿಯುತ್ತಾಳೆ, ತೀರದ ಕೊರಗಾಗಿ ಕಾಡುತ್ತಾಳೆ, ಆರದ ಗಾಯವಾಗಿ ಉರಿಯುತ್ತಾಳೆ, ಭಾರದ ನೆನಪಾಗಿ ಮೀಟುತ್ತಾಳೆ ಇಲ್ಲಿ…… ಅಮೆರಿಕಾದ ಅಡಿಗೆ ಮನೆಯಲ್ಲಿ Read More

ಡಿವಿಜಿಯವರ ಕೆಲವು ಸೂಕ್ತಿಗಳು

* ಸಾಹಿತ್ಯವೆಂದರೆ ಎದೆಯನ್ನು ಅಲುಗಿಸುವಂಥ ಮಾತು. * ಜೀವನದ ಕೊಳೆ-ಕಲ್ಮಶಗಳನ್ನು ತೊಳೆಯಬಲ್ಲ ತೀರ್ಥವೆಂದರೆ ಕಾವ್ಯತೀರ್ಧ. * ಅಸಾಧ್ಯವಾದ ವೈರಾಗ್ಯದ ಸೋಗಿಗಿಂತ ಸಾಧ್ಯವಾದ ಭೋಗದ ಸಾಧನೆ ಮೇಲೆಂದು ನಾವೆಲ್ಲ ಸ್ಪಷ್ಟವಾಗಿ ಅಂಗೀಕರಿಸಬೇಕು. * ಸಂಸ್ಕೃತವು ಮಳೆಯ ಮೋಡ; ಕನ್ನಡವು ಅದನ್ನು ಹನಿಯಾಗಿಸಿ ನೆಲಕ್ಕೆ ಬರಮಾಡಿಕೊಳ್ಳುವ ತಂಗಾಳಿ. * ಉತ್ತಮ ಜೀವನದಿಂದ ಉತ್ತಮ ಸಾಹಿತ್ಯ. * ಮಿತತೆಯೇ ಬಲ Read More