ಮಿಥಿಲೆ – ಸು.ರಂ.ಎಕ್ಕುಂಡಿ
‘ಮಿಥಿಲೆ’ ಕವಿ : ಸುಬ್ಬಣ್ಣ.ರಂಗನಾಥ.ಎಕ್ಕುಂಡಿ ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ ಬೀದಿಬೀದಿಯನಲೆದು ನೋಡಬೇಕು ಅಲ್ಲಿ ಎಲ್ಲಾದರೂ ಮರದ ನೆರಳಿಗೆ ಕುಳಿತು ರಾಮಭದ್ರನ ಮಹಿಮೆ ಹಾಡಬೇಕು ಅಲ್ಲಿಹವು ಎತ್ತರದ ಮನೆಗಳು ಮಂದಿರವು ಅಲ್ಲಿ ಬೇಕಾದಷ್ಟು ತುಳಸಿ ಹೂವು ಹೆಜ್ಜೆ ಹೆಜ್ಜೆಗೆ ಅಲ್ಲಿ ಸಂಪಿಗೆಯ ಮರಗಳಿವೆ ಗಿಳಿಗಳಿವೆ. ಇಲ್ಲ ಪಂಜರದ ನೋವು ಅಲ್ಲಿ ಪುಷ್ಕರಿಣಿಗಳ ತುಂಬ ತಾವರೆಯಿಹವು Read More