ಮತ್ತೆ ಹುಟ್ಟಿ ಬಾ!

ಭಾರತಾಂಬೆಯ ಮಡಿಲಲ್ಲಿ ಜನಿಸಿದ ಧೀರ ಸನ್ಯಾಸಿ ವಿಶ್ವ ಭೂಪಟದಲ್ಲಿ ಮಾಡಿದ ಭಾರತವ ಹೆಸರುವಾಸಿ ಪರಮಹಂಸರ ದಿವ್ಯ ಶಕ್ತಿಯು ಕಟೆದು ನಿಲಿಸಿದ ಮೂರುತಿ ನರೇಂದ್ರನೆಂಬ ಪುಟ್ಟ ಬಾಲಕ ವಿವೇಕಾನಂದನೆನಿಸಿದ ಕೀರುತಿ ಮಲಗಿ ಮೈಮರೆತಿದ್ದ ಜನರನು ತಟ್ಟಿ ಎಬ್ಬಿಸಿ ಛಲದಲಿ ಸಿಂಹದಂತೆಯೇ ಗರ್ಜಿಸಿದ್ದನು ‘ಏಳಿ! ಎದ್ದೇಳಿ!’- ಗುಡುಗಿನ ದನಿಯಲಿ ಶಿಕಾಗೊ ನೆಲವಿದು ಧನ್ಯವಾಯಿತು ಅವನ ಪಾದಧೂಳಿಯು ಸೋಕಲು ಹಿಂದೂ Read More

ಯಾವ ಮೋಹನ?

ಮದುವೆಯಾಗಿ ಇಪ್ಪತ್ತೈದು ಕಳೆದರೂ ಆಗೀಗ ಫಂಕ್ಷನ್ನುಗಳಲ್ಲಿ ಹೊರಗೆ ಬಂದು ಉಸಿರೆಳೆದುಕೊಳ್ಳುವ ಅದೇ ಭಾರಿ ದುಬಾರಿ ಧಾರೆ ಸೀರೆಗಳು, ಎಂದೋ ಫ್ಯಾಷನ್ ಆಗಿದ್ದು ಈಗ ಫ್ಯಾಷನ್ ಅಂಗಳದಿಂದ ಒದ್ದಾಚೆ ಹಾಕಿರುವ ಅದೇ ಉದ್ದ ತೋಳಿನ ಅಂಚು ತೊಡಿಸಿದ ರವಿಕೆಗಳಲ್ಲಿ ಬಾಬ್ ಅಲ್ಲದ, ಜಡೆಯೂ ಅಲ್ಲದ ಕರಿ-ಬಿಳಿ ಕೂದಲಿಗೆ ಮೆಹಂದಿ ಸೋಕಿದ ಕೆಂಬಣ್ಣದ ರಂಗು. ಬಂಗಾರ ಈ ಪಾಟಿ Read More

ಪ್ರೀತಿಯ ಕವಿಗೊಂದು ಇಮೇಲು!

ಕವಿಗಳೇ, ಇಲ್ಲಿಂದ ಹೋದಮೇಲೆ ನಿಮ್ಮಿಂದ ಸುದ್ದಿಯಿಲ್ಲ, ಸಮಾಚಾರ ತಿಳಿಯೋಣವೆಂದರೆ ಈಗ ಬಳೆಗಾರ ಬರುವುದಿಲ್ಲ ಭವಾನಿ ಕಂಗನ್, ಮಹಿಳಾ ಬ್ಯಾಂಗಲ್ ಬಂದ ಮೇಲೆ ಅವನಿಗೂ ಕೆಲಸವಿಲ್ಲ, ಪಾಪ! ಪತ್ರ ವ್ಯವಹಾರಕ್ಕೂ ಪುರಸೊತ್ತಿಲ್ಲದ ಹೊತ್ತಲ್ಲಿ ಈಮೇಲೇ ಮೇಲೆನಿಸಿತು. ನಾವು ಕ್ಷೇಮ, ನೀವು ಹೇಗಿದ್ದೀರಿ? ಮೊನ್ನೆ ಊರಿಗೆ ಬಂದಿದ್ದಾಗ ನಿನ್ನ ಮನೆಯ ಮುಂದೆಲ್ಲ ಸುತ್ತಿಸುಳಿದೆ ; ಜಗಲಿಯಲ್ಲಿ ಅಕ್ಕಿ ಆರಿಸುತ್ತಾ Read More

ಇದು ಕ್ರಿಸ್‍ಮಸ್ ಮಾಸ!

ಇದು ಕ್ರಿಸ್‍ಮಸ್ ಮಾಸ ! ನವ ವರುಷವು ಬರುವ ಮೊದಲೇ ಭುವಿಗಿಳಿದಿದೆ ಉಲ್ಲಾಸ ಸ೦ಭ್ರಮವಿದೆ ಸ೦ತಸವಿದೆ ಇದು ಕ್ರಿಸ್‍ಮಸ್ ಮಾಸ! ಮನೆ ಮನೆಯ ಅ೦ಗಳದಲಿ ಮನ ಸೆಳೆಯುವ ನೋಟ ಇಳೆಯ ಅರಸಿ ಬ೦ದ೦ತಿದೆ ನ೦ದನದ ತೋಟ! ಹಸಿರಿಲ್ಲದ ಮರಗಿಡದಲಿ ಮಾಗಿದೆ ಹಸಿ ಗಾಯ ಹಿಮ ಸವರಿದೆ ಸವಿಲೇಪ ಹಳೆಯ ನೋವು ಮಾಯ! ಎಲೆಗಳಿಲ್ಲ ಆದರೇನು? ಹೊನಲಾಗಿದೆ Read More

ಮಾತು ಬಲ್ಲ ಜನ

ಅವರಿರುತ್ತಾರೆ, ಇರಲೇಬೇಕು ಮಾತು ಬಲ್ಲ ಜನ ವೇದಿಕೆ ಮೇಲೇರಿದರೆ ವೇದಿಕೆಗೇ ಅಲಂಕಾರ, ಕಳಸಪ್ರಾಯ! ತಿದ್ದಿ ತೀಡಿದಂತಹ ಆರೋಗ್ಯದ ಕೆಂಪು ಚಿಮ್ಮುವ ಚೆಲುವಾದ ಮುಖದಲ್ಲಿ ಕಿರುನಗೆಯದೇ ಕಾರುಬಾರು ನುಡಿದರೆ ಯಾರೂ ಮೆಚ್ಚಿ ತಲೆದೂಗಲೇಬೇಕು ‘ಹೌದಪ್ಪಾ ಹೌದು!’ ಏನು ಮಾತಾಡಿದರೂ ಚಂದ. ನುಡಿವುದೆಲ್ಲ ಬಲು ಸೊಗಸು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ನಯವಾಗಿ, ನುಣುಪಾಗಿ ಜಾಗರೂಕತೆಯಲ್ಲಿ ಅಳೆದು ತೂಗಿ ಚಚ್ಚೌಕದ Read More