ವಿರೋಧವಿಲ್ಲ ವಿರೋಧಿಗೆ
ಹಬ್ಬ ಬಂದರೂ ಹೊಸದೇನಿಲ್ಲ; ಬಕೇಟಿನಲ್ಲಿ ಕದರಬೇಕಿಲ್ಲ ಸಗಣಿ ನೀರು ಬೀದಿಯ ಧೂಳಡಗುವಂತೆ ಚಿಲ್ಲನೆ ನೀರೆರಚಿ ಹೆಣೆಯಬೇಕಿಲ್ಲ ಚುಕ್ಕಿ ಚೆಲ್ಲಿ ರಂಗೋಲಿ ಚಪ್ಪರವ ಹೊಸ್ತಿಲಿನ ನೆತ್ತಿಗೆ ಕೆಮ್ಮಣ್ಣಿನ ಬದಲು ಕೆಂಪು ಪೇಂಟಿದೆ ತೋರಣಕ್ಕೆ ಮಾವಿಲ್ಲ, ಬೇವೂ ಬೇಕಿಲ್ಲ ಎಣ್ಣೆಯ ಜಿಗುಟು ತೊಳೆಯಲು ಸೀಗೆಯ ಘಾಟು ಸಹಿಸಬೇಕಿಲ್ಲ ಶವರಿನ ಅಡಿ ಮೈತೆರೆದು ನಿಂತರೆ ನಿತ್ಯ ಅಭ್ಯಂಜನವೇ, ಬೇಕಿಲ್ಲ ಅದಕೊಂದು Read More