ರಥವೋಗದ ಮುನ್ನ ಗೋಕುಲಕೆ

ನಿನ್ನೆ ಏನನ್ನೊ ಹುಡುಕುತ್ತಿದ್ದಾಗ ನನಗೊಂದು ರತ್ನವೇ ಸಿಕ್ಕಿತು. “ರಥವೋಗದ ಮುನ್ನ” ದಾಸ ಸಾಹಿತ್ಯದಲ್ಲಿ ಅಪರೂಪವೆನಿಸುವ ಕೃತಿ. ಶ್ರೀದವಿಠಲರಿಂದ ರಚಿತವಾಗಿರುವ ಈ ಕೀರ್ತನೆಯನ್ನು ಹಿಂದೆಯೂ ಕೇಳಿದ್ದೆ. ಆದರೆ ಈ ಬಾರಿ ರಾಗದ ಹಂಗಿಲ್ಲದೆ, ಹಾಗೆಯೇ ಓದಿಕೊಂಡಾಗ ನವಿರಾದ ಭಾವನೆಗಳಿಂದ ತುಂಬಿರುವ ಭಾವಗೀತೆಯನ್ನು ಸ್ಪರ್ಶಿಸಿದಂತಾಯಿತು. ಈ ಕೀರ್ತನೆಯಲ್ಲಿ, ಕೃಷ್ಣನನ್ನು ಕರೆತರಲು ಹೊರಟಿರುವ ಅಕ್ರೂರನ ಮನೋಲಹರಿ ಭಕ್ತಿರಸದೊಂದಿಗೆ ಹದವಾಗಿ ಬೆರೆತು Read More

ಆನಂದ ಆನಂದ ಮತ್ತೆ ಪರಮಾನಂದ

ಆನಂದ ಆನಂದ ಮತ್ತೆ ಪರಮಾನಂದ ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ|| ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧|| ಜಲ ಕಾಷ್ಟ ಶೈಲ ಗಗನ ನೆಲ ಪಾವಕ ತರು ಫಲ ಪುಷ್ಪಗಳಲ್ಲಿ ಹರಿ ವ್ಯಾಪ್ತನೆಂದರಿತವರಿಗೆ ||೨|| ಪೋಪುದು, ಬರುತಿಪ್ಪುದು, ಕೋಪ ಶಾಂತಿ ಮಾಡುವುದು ರೂಪ ಲಾವಣ್ಯವು Read More

ಗಾದೆಗಳಲ್ಲಿ ರಾಮಾಯಣ, ಮಹಾಭಾರತ

ರಾಮಾಯಣ, ಮಹಾಭಾರತ ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು ಎನ್ನಲು ನಮ್ಮಲ್ಲಿ ಬಳಕೆಯಲ್ಲಿರುವ ಕೆಲವು ಗಾದೆಗಳೇ ಸಾಕ್ಷಿ. ಅವುಗಳಲ್ಲಿ ನನಗೆ ತಿಳಿದ ಕೆಲವನ್ನು ಇಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ. * ’ರಾಮ ರಾಜ ಆದರೂ ರಾಗಿ ಬೀಸೋದು ತಪ್ಪೀತೇ?’- ಯಾರೇ ಅಧಿಕಾರಕ್ಕೆ ಬಂದರೂ, ಜನಸಾಮಾನ್ಯರ ಬದುಕಿನ ಮೇಲೆ ಏನೂ ಪರಿಣಾಮವಾಗದು ಎಂಬುದು ಅಂದಿಗೂ-ಇಂದಿಗೂ ನಿಜವೇ. *’ರಾವಣನ ಹೊಟ್ಟೆಗೆ ಮೂರು Read More

ಪ್ರೇಮದ ಹೂಗಾರ

ಚಿತ್ರ – ಚಿಕ್ಕೆಜಮಾನ್ರು -೧೯೯೨ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಎಸ್.ಪಿ.ಬಾಲಸುಬ್ರಹ್ಮಣ್ಯಂ ಚಿತ್ರಕೃಪೆ : ಮೀರಾ ಕೃಷ್ಣ  ಹಾಡು ಕೇಳಿ – ಪ್ರೇಮದ ಹೂಗಾರ ಈ ಹಾಡುಗಾರ ಹೂ ನೀಡುತಾನೆ ಮುಳ್ಳು ಬೇಡುತಾನೆ ಬೆಲ್ಲದ ಬಣಗಾರ ಈ ಹಾಡುಗಾರ ಸಿಹಿ ನೀಡುತಾನೆ ಕಹಿ ಕೇಳುತಾನೆ ಮಣ್ಣಿನ ಮಮಕಾರ ಕಂಪಿರುವ ಮಾನದ ಮಣಿಹಾರ Read More

ಅವನು ಒಳ್ಳೆಯವನು!

ಅಪ್ಪ, ಅಮ್ಮ ನೋಡಿ ಒಪ್ಪಿಕೊಂಡು ಬಂದಿದ್ದ ಹುಡುಗಿಯ ಭಾವಚಿತ್ರ ಈಗ ಮಗನೆದುರಲ್ಲಿತ್ತು. ಅವನು ಅದನ್ನು ಕೈಗೆತ್ತಿಕೊಂಡು ನೋಡಲೇ ಇಲ್ಲ. ಈಗಾಗಲೇ ಮನದಲ್ಲಿ ಮನೆ ಮಾಡಿ ನೆಲೆಸಿದ್ದ ಚೆಲುವೆಯ ನೆನಪನ್ನು ದೂರ ತಳ್ಳಿ ಹೇಳೇಬಿಟ್ಟ – ’ನೀವು ಒಪ್ಪಿದ್ದೀರಿ ತಾನೇ? ಸರಿ ಹಾಗಾದರೆ. ಮದುವೆ ನಿಶ್ಚಯವಾಗಲಿ’ – ಎಂದು ಎದ್ದು ಹೊರನಡೆದ. ಹೆತ್ತವರು ಹಿಗ್ಗಿ ಹೀರೆಕಾಯಾದರು. ನಮ್ಮ Read More