ಕುಂದಣದ ಹಸೆಗೆ ಚಂದದಲಿ ಬಾರೆ – Kundanada hasege Chandadali baare
ಕುಂದಣದ ಹಸೆಗೆ ಚಂದದಲಿ ಬಾರೆಚಂದದಲಿ ಬಾರೆ ಸಿಂಧು ಕುಮಾರಿ ||ಪಲ್ಲವಿ|| ಶೃಂಗಾರಮಯವಾದ ರಂಗ ಮಂಟಪದೊಳುಕಂಗೊಳಿಸು ಇಲ್ಲಿ ತಿಂಗಳ ಸೋದರಿ ||1|| ಕುಂದ ಕುಡ್ಮಲ ರದನೆ ಸಿಂಧೂರ ವದನೆಇಂದೂಧರಾದಿ ಸುರ ವೃಂದ ವಂದಿತ ಚರಣೆ || 2|| ಕಾಮನ ಜನನಿ ಕಾಮಿತ ದಾಯಿನಿಗೋಮಿನಿ ರುಕ್ಮಿಣಿ ಶಾಮಸುಂದರ ರಾಣಿ || 3||