ನೋಡುವ ಜನರೇ ದುಡ್ಡು ಹಾಕಿ ಮಾಡಿದ ಸಿನೆಮಾ: ಲೂಸಿಯಾ

ಲೇಖಕ : ವಾಸುಕಿ ರಾಘವನ್ ಸುಮಾರು ಒಂದೂವರೆ ವರ್ಷಗಳ ಹಿಂದಿನ ಕಥೆಯಿದು. ಇನ್ನೇನು ಬಿಡುಗಡೆಗೆ ಕಾದಿರುವ “ಲೈಫು ಇಷ್ಟೇನೆ” ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ಕ್ರೌಡ್ ಫಂಡೆಡ್ “ಲೂಸಿಯಾ” ಚಿತ್ರದ್ದು. ಚಿತ್ರ ಹೇಗಿದೆ ಅಂತ ನಾವು ಇನ್ನೂ ನೋಡಬೇಕಷ್ಟೇ, ಆದರೆ ಈ ಚಿತ್ರದ ಮೇಕಿಂಗ್ ಇದೆಯಲ್ಲಾ ಅದೇ ಒಂದು ಅದ್ಭುತ ಸ್ಕ್ರಿಪ್ಟ್ ಆಗಬಹುದು! “ಲೈಫು ಇಷ್ಟೇನೆ” Read More

ಡೈರಿ ಹೇಳೆ, ಮುಂದೇನೆ?

ಅಂಗಡಿಯಿಂದ ಕೊಂಡುತಂದಿದ್ದ ದಿನಸಿಯನ್ನು ಕಾರಿನಿಂದ ಒಳತಂದಿಟ್ಟು, ಕುಡಿಯಲೆಂದು ಲೋಟಕ್ಕೆ ನೀರು ತುಂಬಿಸುತ್ತಿದ್ದಾಗಲೇ ಬಾಗಿಲ ಕರೆಘಂಟೆಯ ಸದ್ದು. ಫೋನ್ ಮಾಡಿ ಮುಂಚಿತವಾಗಿ ತಿಳಿಸದೆ, ನಾವಾಗಿ ಕರೆಯದೆ, ಯಾರ ಮನೆಗೆ ಯಾರೂ ಬಾರದ ಈ ದೇಶದಲ್ಲಿ, ಇದ್ದಕ್ಕಿದ್ದಂತೆ ಬಡಿದುಕೊಳ್ಳುವ ಕರೆಘಂಟೆಯ ಸದ್ದು ನನ್ನನ್ನು ಬೆಚ್ಚಿಸುತ್ತದೆ. ಫೆಡೆಕ್ಸ್‌ನವನು ಯಾವುದೋ ಪ್ಯಾಕೇಜು ತಂದಿದ್ದು, ಸಹಿಗಾಗಿ ಕಾದಿರಬಹುದೆಂದೆಣಿಸಿ ಬಾಗಿಲಿನ ಮಾಯಾಕಿಂಡಿಯಲ್ಲಿ ಇಣುಕಿದೆ. ಸಮವಸ್ತ್ರ Read More