ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ

ರಚನೆ : ಕನಕದಾಸರು ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ ಭೃಷ್ಟಮಾನವ ನಿನ್ನ ಹಣೆಯ ಬರಹವಲ್ಲದೆ ಇಲ್ಲ || ಸಿರಿವಂತರ ಸ್ನೇಹಮಾಡಿ ನಡೆದರಿಲ್ಲ ಪರಿಪರಿಯಲ್ಲಿ ವಿದ್ಯೆ ಕಲಿತರಿಲ್ಲ ನರಿಯ ಬುದ್ಧಿಯಲ್ಲಿ ನಡೆದುಕೊಂಡರು ಇಲ್ಲ ಅರಿಯದೆ ಹಲವ ಹಂಬಲಿಸಿದರಿಲ್ಲ || ಕೊಂಡಾಡಿ ಕಾಡಿ ನೀ ಬೇಡಿಕೊಂಡರು ಇಲ್ಲ ಕಂಡಕಂಡವರಿಗೆ ಕೈಮುಗಿದರಿಲ್ಲ ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ ಪ್ರ- ಚಂಡನಾದರೂ ಇಲ್ಲ ಪರಿಹಾಸವೆಲ್ಲ Read More

ನೀ ಬಂದು ನಿಂದಿಲ್ಲಿ ದೀಪ ಹಚ್ಚಾ

ಕವಿ : ಎಸ್ ವಿ ಪರಮೇಶ್ವರ ಭಟ್ಟ ಸಂಗೀತ : ಮೈಸೂರು ಅನಂತಸ್ವಾಮಿ ಗಾಯಕಿ : ಸುನೀತ ಅನಂತಸ್ವಾಮಿ ಪ್ರೀತಿಯ ಕರೆಕೇಳಿ ಆತ್ಮನ ಮೊರೆಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚಾ ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚಾ ಬಾಳ ಮುಂಬೆಳಗುರಿದು ಹಗರಣದ ಬೈಗಿಳಿದು ಕಪ್ಪೇರಿ ಬಂದಿತು ದೀಪ ಹಚ್ಚಾ Read More

ಕನ್ನಡವೆಂದರೆ….

ಕವಿ – ಕೆ. ಎಸ್ ನಿಸಾರ್ ಅಹಮದ್ ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ ; ಜಲವೆಂದರೆ ಕೇವಲ ನೀರಲ್ಲ. ಅದು ಪಾವನ ತೀರ್ಥ. ಕನ್ನಡವೆಂದರೆ ಬರಿ ನಾಡಲ್ಲ ; ಭೂಪಟ, ಗೆರೆ, ಚುಕ್ಕೆ ; ಮರವೆಂದರೆ ಬರಿ ಕಟ್ಟಿಗೆಯೆ? ಶ್ರೀಗಂಧದ ಚಕ್ಕೆ. ಕನ್ನಡ ಬರಿ ಕರ್ನಾಟಕವಲ್ಲ ಅಸೀಮ, ಅದು ಅದಿಗಂತ ; ದೇವರು ಕೇವಲ Read More