ಮರೆತೇನೆಂದರ ಮರೆಯಲಿ ಹ್ಯಾಂಗ? ಮಾವೋ-ತ್ಸೆ-ತುಂಗ
ಸಾಹಿತ್ಯ, ಸಂಗೀತ : ಡಾ. ಚಂದ್ರಶೇಖರ ಕಂಬಾರ ಕಂಬಾರರ ದನಿಯಲ್ಲಿ ಹಾಡು ಕೇಳಿ ಮರೆತೇನೆಂದರ ಮರೆಯಲಿ ಹ್ಯಾಂಗ ಮಾವೋ-ತ್ಸೆ-ತುಂಗ ಮರೆತೇನೆಂದಾರ ಮರೆಯಲಿ ಹ್ಯಾಂಗ…. ಹಾ ಪಂಚಭೂತದಾಗ ವಂಚನೆ ಕಂಡಿ ಕಣ್ಣಿನಂಚಿನಾಗ ಹೊಸ ಜಗ ಕಂಡಿ ಸೊನ್ನಿಗೆ ಆಕಾರ ಬರೆದೇನೆಂದಿ ಬಯಲಿಗೆ ಗೋಡೆ ಕಟ್ಟೇನೆಂದಿ ಸಚರಾಚರಗಳ ರಚನೆ ಮಾಡೋದಕ್ಕ ಬೇರೊಬ್ಬ ಸೂರ್ಯನ ತರತೇನೆಂದ್ಯೋ ಕಣ್ಣೀರಿನ ಹೊಳಿಗಡ್ಡ ಕಟ್ಟಿದಿ Read More