Month: November 2006

AK-47 – ಕಡಲೋ ಕಣ್ಕಡಲೋAK-47 – ಕಡಲೋ ಕಣ್ಕಡಲೋ

ಚಿತ್ರ – AK-47 – (1999) ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕರು – ಚಿತ್ರ,ಹರಿಹರನ್ ಹಾಡು ಕೇಳಿ  ಕಡಲೋ ಕಡಲೋ ಕಣ್ ಕಡಲೋ ಮುಗಿಲೋ ಮುಗಿಲೋ ಮನ ಮುಗಿಲೋ ಕಡಲಲ್ಲೋ ಮುಗಿಲಲ್ಲೋ ನೀ ನನ್ನ ತೇಲಿಸು ಕಡಲಲ್ಲೋ ಮುಗಿಲಲ್ಲೋ ನೀ

Happy Thanksgiving day!Happy Thanksgiving day!

Happy Thanksgiving weekend 🙂 !! ಇನ್ನೊಂದು ೩-೪ ದಿನ ಅಮೆರಿಕದಿಂದ ಹೊರಡುವ ಬ್ಲಾಗ್‍ಗಳಿಗೆಲ್ಲಾ ರಜ ಅನ್ನಿಸತ್ತೆ. 🙂 ಯಾಕೆಂದರೆ, ಈ ಸಮಯದಲ್ಲಿ ಮನೆಯಲ್ಲಿ ಇರೋರು ಕಡಿಮೆ. ಅಲ್ಲಿ,ಇಲ್ಲಿ, ಗೆಳೆಯರ ಮನೆಗೆ, ಹೊಸ ಹೊಸ ಜಾಗಗಳನ್ನು ನೋಡಲು ಹೋಗುವವರೇ ಹೆಚ್ಚು. ನೀವೆಲ್ಲ ಏನೇನು ಪ್ಲಾನ್ ಮಾಡಿದೀರಿ? ಎಲ್ಲಿಗೆ

ಹೆಸರುಬೇಳೆಗೆ ಈ ಹೆಸರೇಕೆ?ಹೆಸರುಬೇಳೆಗೆ ಈ ಹೆಸರೇಕೆ?

ಮೇಲೇರಿದ್ದ ಬೇಳೆಗಳ ಬೆಲೆ ಕೆಳಗಿಳಿಯುತ್ತಾ  ಇದೆ. ಈ ಬಾರಿ ಸಮಸ್ಯೆ ಬಿಸಿಬೇಳೆ ಬಾತಿಗೆ ಬೇಕಾದ ತೊಗರಿಬೇಳೆಯದಲ್ಲ. ಹೆಸರುಬೇಳೆಯದು.   ಸುಮ್ಮನೆ ಯೋಚಿಸುತ್ತಿದ್ದೆ .. ಬೇರೆ ಕೆಲಸವಿಲ್ಲದೆ ಅಲ್ಲ 🙂  ಹೆಸರುಬೇಳೆಯ ಹೆಸರು ಮೊದಲು ಹಸಿರುಬೇಳೆ ಎಂದು ಇದ್ದಿರಬಹುದಲ್ಲವೇ? ಏಕೆಂದರೆ ಹೆಸರುಕಾಳಿನ ಬಣ್ಣ ಹಸಿರು.  englishನಲ್ಲಿಯೂ green gram

ಸುಲಿದ ಬಾಳೆಯ ಹಣ್ಣಿನಂದದಿ – ಮಹಾಲಿಂಗಕವಿಸುಲಿದ ಬಾಳೆಯ ಹಣ್ಣಿನಂದದಿ – ಮಹಾಲಿಂಗಕವಿ

ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರುವ ಈ ಲಲಿತವಹ ಕನ್ನಡ ನುಡಿಯಲಿ ತಿಳಿದು ತನ್ನಲಿ ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೆ? ಸಂಸ್ಕೃತದಲಿನ್ನೇನು?   *            *         *

ಕನ್ನಡದ ನೆಲದ – ಸಾಲಿ ರಾಮಚಂದ್ರರಾಯರುಕನ್ನಡದ ನೆಲದ – ಸಾಲಿ ರಾಮಚಂದ್ರರಾಯರು

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ! ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ! ಕನ್ನಡದ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ! ಕನ್ನಡಂ ದೈವಮೈ! ಕನ್ನಡದ ಶಬ್ದಮೆಮಗೋಂಕಾರಮೀಯೆನ್ನ ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ- ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳಗೆ?              *                  * ಕೃಪೆ: