ಕರ್ನಾಟಕ – ಚನ್ನವೀರ ಕಣವಿ
ಕವಿ – ಚನ್ನವೀರ ಕಣವಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಹಸಿಗೋಡೆಯ ಹರಳಿನಂತೆ ಹುಸಿಹೋಗದ ಕನ್ನಡ ಹೊಸೆದ ಹಾಗೆ ಹುರಿಗೊಳ್ಳುವ ಗುರಿ ತಾಗುವ ಕನ್ನಡ ಕುರಿತೋದದ ಪರಿಣತಮತಿ ಅರಿತವರಿಗೆ ಹೊಂಗೊಡ ಪಡುಗಡಲಿನ ತೆರೆಗಳಂತೆ ಹೆಡೆ ಬಿಚ್ಚುತ ಮೊರೆಯುವ ಸಹ್ಯಾದ್ರಿಯ ಶಿಖರದಂತೆ ಬಾನೆತ್ತರ ಕರೆಯುವ ಗುಡಿ ಗೋಪುರ ಹೊಂಗಳಸಕೆ ಚೆಂಬೆಳಕಿನ ಕನ್ನಡ ನಮ್ಮೆಲ್ಲರ ಮೈಮನಸಿನ ಹೊಂಗನಸಿನ ಕನ್ನಡ Read More