ಆರು ಬಾಳಿದರೇನು? ಆರು ಬದುಕಿದರೇನು?

ರಚನೆ : ಕನಕದಾಸರು ಆರು ಬಾಳಿದರೇನು ಆರು ಬದುಕಿದರೇನು ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೇನು ಹಣ್ಣು ಬಿಡದ ಮರ ಹಾಳಾದರೇನು ಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನು ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು ||೧|| ಅಕ್ಕರಿಲ್ಲದವರಿಗೆ ಮಕ್ಕಳಿದ್ದು ಫಲವೇನು ಹೊಕ್ಕು ನಡೆಯದ ನಂಟತನದೊಳೇನು ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು ||೨|| ಅಲ್ಪದೊರೆಗಳ ಜೀತ ಎಷ್ಟು Read More

ಇಷ್ಟು ದಿನ ಈ ವೈಕುಂಠ

ರಚನೆ : ಕನಕದಾಸರು ವಿದ್ಯಾಭೂಷಣ ಇಷ್ಟು ದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ ದೃಷ್ಟಿಯಿಂದಲಿ ನಾನು ಕಂಡೆ ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪಲ್ಲವಿ|| ಎಂಟು ಏಳನು ಕಳೆದುದರಿಂದೆ ಭಂಟರೈವರ ತುಳಿದುದರಿಂದೆ ತುಂಟಕನೊಬ್ಬನ ತರಿದುದರಿಂದೆ ಭಂಟನಾಗಿ ಬಂದೆನೋ ರಂಗಶಾಯಿ ||೧|| ವರ್ಜ ವೈಢೂರ್ಯದ ತೊಲೆಗಳ ಕಂಡೆ ಪ್ರಜ್ವಲಿಪ ಮಹಾದ್ವಾರವ ಕಂಡೆ ನಿರ್ಜರಾದಿ ಮುನಿಗಳ ನಾ ಕಂಡೆ ದುರ್ಜನಾಂತಕನೆ Read More

ದೇವೀ, ನಮ್ಮ ದ್ಯಾವರು ಬಂದರು

ರಚನೆ – ಕನಕದಾಸರು ರಾಯಚೂರು ಶೇಷಗಿರಿ ದಾಸ್ ವಿದ್ಯಾಭೂಷಣ ದೇವಿ ನಮ್ಮ ದ್ಯಾವರು ಬಂದರು ಬನ್ನಿರೇ ನೋಡಬನ್ನಿರೇ ||ಪಲ್ಲವಿ|| ಕೆಂಗಣ್ಣ ಮೀನನಾಗಿ ನಮ್ಮ ರಂಗ ಗುಂಗಾಡಿ ಸೋಮನ್ನ ಕೊಂದಾನ್ಮ್ಯ ಗುಂಗಾಡಿ ಸೋಮನ್ನ ಕೊಂದು ವೇದವ ಬಂಗಾರದೊಡಲನಿಗಿತ್ತಾನ್ಮ್ಯ ದೊಡ್ಡ ಮಡುವಿನೊಳಗೆ ನಮ್ಮ ರಂಗ ಗುಡ್ಡವ ಹೊತ್ತುಕೊಂಡು ನಿಂತಾನ್ಮ್ಯ ಗುಡ್ಡವ ಹೊತ್ತುಕೊಂಡು ನಿಂತು ಸುರರನ್ನು ದೊಡ್ಡವರನ್ನಾಗಿ ಮಾಡಾನ್ಮ್ಯ ಚೆನ್ನ Read More

ಯಾಕೆ ಮೂಕನಾದ್ಯೋ ಗುರುವೇ

ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ । ಯಾಕೆ ಮೂಕನಾದೆ ಲೋಕಪಾಲಕ ಎನ್ನ । ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥ ಪಲ್ಲವಿ || ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ । ಮಂದಿಯೊಳಗೆ ಎನ್ನ ಮಂದನ್ನ ॥ ೧ ॥ ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ । ಕಾಕುಜನರೊಳೆನ್ನ ನೂಕಿಬಿಟ್ಟು ನೀನು ॥ ೨ ॥ Read More

ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ

ರಚನೆ : ಕನಕದಾಸರು ಕಷ್ಟಪಟ್ಟರು ಇಲ್ಲ ಕಳವಳಿಸಿದರಿಲ್ಲ ಭೃಷ್ಟಮಾನವ ನಿನ್ನ ಹಣೆಯ ಬರಹವಲ್ಲದೆ ಇಲ್ಲ || ಸಿರಿವಂತರ ಸ್ನೇಹಮಾಡಿ ನಡೆದರಿಲ್ಲ ಪರಿಪರಿಯಲ್ಲಿ ವಿದ್ಯೆ ಕಲಿತರಿಲ್ಲ ನರಿಯ ಬುದ್ಧಿಯಲ್ಲಿ ನಡೆದುಕೊಂಡರು ಇಲ್ಲ ಅರಿಯದೆ ಹಲವ ಹಂಬಲಿಸಿದರಿಲ್ಲ || ಕೊಂಡಾಡಿ ಕಾಡಿ ನೀ ಬೇಡಿಕೊಂಡರು ಇಲ್ಲ ಕಂಡಕಂಡವರಿಗೆ ಕೈಮುಗಿದರಿಲ್ಲ ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ ಪ್ರ- ಚಂಡನಾದರೂ ಇಲ್ಲ ಪರಿಹಾಸವೆಲ್ಲ Read More