ಚಿತ್ರ – ಮೇಘಮಾಲೆ -೧೯೯೪
ಸಾಹಿತ್ಯ ಮತ್ತು ಸಂಗೀತ – ಹಂಸಲೇಖ
ಗಾಯಕ – ಡಾ.ರಾಜ್‍ಕುಮಾರ್
ಮೇಘಮಾಲೆ…ಮೇಘಮಾಲೆ…
ಪ್ರೀತಿಗಾಗಿ ದಾರಿ ತೋರೋ ದೀಪಮಾಲೆ!
ಬಿಸಿಲ ಬಿಡದೆ ಒಳಗೆ ಹೊಳೆಯೋ
ಬೆಳ್ಳಿ ಬಳಗವೇ ಬನ್ನಿರಿ
ದಿನವೂ ಪಯಣ, ಹೊರಡೋ ದಿಬ್ಬಣ
ನಮಗೂ ಅಮೃತ ತನ್ನಿರಿ
ನದಿಯ ಬಸಿರಿಗೆ ಪ್ರೇಮ ಸಿಂಚನ
ಮಿಂಚು ಮಿಂಚಿನ ಪದದ ಕಂಪನ
ನೀಡುವಂತೆ ನೀಡಿ ಸುಖದ ಮಾಲೆ ||೧||
ಇವನೋ ತರುಣ ಇವಳೋ ತರುಣಿ
ಪ್ರಣಯ ತರುಣದ ಹೊಸಿಲಲಿ
ಎರಡು ಒಡಲು ನೋಡೋ ಬದಲು
ಹೂಡೋ ಕಾಮನ ಬಲೆಯಲಿ
ಬಳಸಿಕೊಂಡರೆ ತೋಳಮಾಲೆ
ಹಂಚಿಕೊಂಡರೆ ಮುತ್ತುಮಾಲೆ
ಸ್ಪರ್ಶ ಸುಖಕೆ ಸಿಗದ ಪ್ರೇಮಮಾಲೆ||೨||
ಈ ಹಾಡುಗಳನ್ನು ಪ್ರಕಟಿಸುವುದರ ಜೊತೆಗೆ ಈ ಹಾಡು ಇರುವ ತಾಣಕ್ಕೆ ನೀವು ಕೊಂಡಿಯನ್ನೂ ಕೊಟ್ಟರೆ ಹೇಗೆ ಎಂದು ಯೋಚಿಸುತ್ತಿದ್ದೆ. ಏಕೆಂದರೆ, ಇತ್ತೀಚಿನ ಹಾಡುಗಳ ಪರಿಚಯ ನನಗೆ ಅಷ್ಟೊಂದು ಇಲ್ಲ.
ನಿಮ್ಮವ
ಹೌದು, ನಾನು ಹಾಗೆಯೇ ಯೋಚಿಸಿದ್ದೆ. copyright ಸಮಸ್ಯೆಯಾದೀತೇನೋ ಎಂದು ಹೆದರಿ ಸುಮ್ಮನಾದೆ. ಈ ಬಗ್ಗೆ ನಿಮಗೆ ತಿಳಿದಿದ್ದರೆ ಬೆಳಕು ಚೆಲ್ಲಿ. ಅಂದ ಹಾಗೆ ಈ ಹಾಡು ಇತ್ತೀಚೆಗೆ ಬಂದಿದ್ದಲ್ಲ. ೧೯೯೪ ರಲ್ಲಿ ಬಂದಿದ್ದು. (ಈ ಸಿನಿಮಾದಲ್ಲಿಯೇ ಇರುವ ”ನೈಂಟಿ ಫೋರು, ಪ್ರೀತಿ ತೋರು” ಎಂಬ ಹಾಡಿನಿಂದ ಸಿನಿಮಾ ಬಂದ ವರ್ಷ ಚೆನ್ನಾಗಿ ನೆನಪಿದೆ 🙂 )
MusicIndiaOnline ಅಥವಾ KannadaAudio ದಲ್ಲಿ ಇರುವ ಹಾಡುಗಳಿಗೆ ನಾನು ‘ನನ್ನಲಿ ನಾನಿಲ್ಲ’ ಹಾಡಿಗೆ ಕೊಂಡಿಯನ್ನು ಜೋಡಿಸಿದಂತೆ ಕೊಟ್ಟರೆ ಯಾವ ತೊಂದರೆಯೂ ಆಗದು.
೧೯೯೪ರಲ್ಲೇ ಬಂದ ಈ ಹಾಡನ್ನು ನಾನು ಹೇಗೆ ತಪ್ಪಿಸಿಕೊಂಡೆನೋ ಗೊತ್ತಿಲ್ಲ – ನಿಮ್ಮೊಡನೆ ‘ಅಂತ್ಯಾಕ್ಷರಿ’ಯನ್ನು ಹಾಡಿ/ಆಡಿ ಗೆಲ್ಲುತ್ತೇನೆ ಎಂಬ ವಿಶ್ವಾಸವೂ ಹೊರಟುಹೋಗುತ್ತಿದೆಯೇಕೆ!? 🙂
ನಿಮ್ಮವ
ಸಲಹೆಗೆ ಧನ್ಯವಾದಗಳು. ಹಾಗೆಯೇ ಮಾಡಿದ್ದೇನೆ. ನನ್ನ ಮೆಚ್ಚಿನ ಹಾಡನ್ನು ಈಗ ನೀವೂ ಕೇಳಬಹುದು 🙂