ರಾಮದೂತನ ಪಾದ ತಾಮರಸವ ಕಂಡ||2||
ಆ ಮನುಜನೆ ಧನ್ಯನೂ||2||

ಶ್ರೀ ಮನೋಹರನಂಘ್ರಿ
ಭಜಕಸ್ತೋಮ ಕುಮುದಕೆ ಸೋಮನೆನಿಸುವ
ಭೂಮಿಯೊಳು ಯದುಗಿರಿಯ ಸೀಮೆಯ
ಕಾಮವರದೊಳು ಪ್ರೇಮದಿಂದಿಹ ||ಪ||

ಕೋತಿರೂಪದಿ ರಘುನಾಥನಾಜ್ಞೆಯ ತಾಳಿ
ಪಾದೋದಿಯ ಲಂಘಿಸಿ ||
ಖ್ಯಾತ ಲಂಕೆಯ ಪೊಕ್ಕು ಶೋಧಿಸಿ
ಮಾತೆಯನ್ನು ಕಂಡೆರಗಿದಶಮುಖ
ಹೋತ ಖಳಕುಲ ವ್ಯಾತ ಘಾತಿಸಿ
ಸೀತೆವಾರ್ತೆಯ ನಾಥಗರುಹಿದ ||-1-||

ಪಾಂಡುಸುತನೆ ಪ್ರಚಂಡ ಗದೆಯನ್ನು
ದೋರ್ದಂಡದಿ ಧರಿಸುತಲೀ||
ಮಂಡಲದೊಳು ಭಂಡ ಕೌರವ
ಚಂಡ ರಿಪುಗಳ ಖಂಡಿಸಿ
ಶಿರ ಚೆಂಡನಾಡಿ ಸತಿಗೆ ಕರುಳಿನ
ದಂಡೆ ಮುಡಿಸಿದ ಉಧ್ಧಂಡ ವಿಕ್ರಮ ||-2||

ಧಾರುಣಿಯೊಳು ದ್ವಿಜನಾರಿ ಗರ್ಭದಿ ಬಂದು
ಮೂರೊಂದಾಶ್ರಮ ಧರಿಸಿ||
ಧೀರನೀನೆರದಿಕತ್ರಿದಶ
ಸಾರಗ್ರಂಥಗಳವಿರಚಿಸುತ
ಮಹಾಶೂರ ಶ್ರೀಗೋಪಾಲವಿಠ್ಠಲನ
ಚಾರು ಚರಣಕೆ ಅರ್ಪಿಸಿದ ಗುರು ||-3-||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.