ನಾನು ಕೊಂದ ಗಿಡ!

ನಿನ್ನೆ ಸಂಜೆ ದಿನಸಿ ಪದಾರ್ಥಗಳನ್ನು ತಳ್ಳುಗಾಡಿಗಳಲ್ಲಿ ತುಂಬಿಕೊಳ್ಳುತ್ತಿದ್ದೆ. ತರಕಾರಿಗಳು ಎಂದಿನಂತಿಲ್ಲದೆ ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದವು. ಅವೂ ಕೂಡ ತಾಜಾ ಇರಲಿಲ್ಲ.  ಕ್ಯಾಬೇಜ್, ಕಾಲಿಫ್ಲವರಿಗೆ ತುಂಬಾ ರಾಸಾಯನಿಕ ಸಿಂಪಡಿಸಿರುತ್ತಾರೆ, ದ್ರಾಕ್ಷಿಯಂತೂ ವಿಷದಲ್ಲಿಯೇ ಬೆಳೆಯುವ ಹಣ್ಣು ಎಂದು ಬರೆದು, ಪೆಜತ್ತಾಯರು ಬೇರೆ ಹೆದರಿಸಿದ್ದರು.  ಇಲ್ಲಿ ಬೆಳೆಯುವ ಸೊಪ್ಪುಗಳಿಗೆಲ್ಲ ಏನೋ ರೋಗ ಬಂದಿದೆಯಂತೆ ಎಂದು ಎರಡು ದಿನದ ಹಿಂದೆ ಟೀವಿ ವಾರ್ತೆಯಲ್ಲಿ ಬಂದಿತ್ತು. Read More

ದೃಷ್ಟಿ ತಾಕಿತೇ ನಿನಗೆ ರಂಗಯ್ಯ?

ಈಚೆಗೆ ರಾಮಪ್ರಿಯರ ತಾಣದಲ್ಲಿ ಒಂದು ಮುದ್ದು ಮಗುವಿನ ಚಿತ್ರ ನೋಡಿದೆ. ಅಲ್ಲಿ ನಡೆಯುತ್ತಿದ ಮಾತು-ಕಥೆಗಳನ್ನೂ ಗಮನಿಸಿದ ಮೇಲೆ ಈ ಪ್ರಶ್ನೆ ನನ್ನನ್ನು ಕಾಡಿತು. ಮಕ್ಕಳಿಗೆ ದೃಷ್ಟಿಯಾಗೋದು ನಿಜವೇ? ನನಗೆ ಕಣ್ಣು ಬೀಳೋದು, ದೃಷ್ಟಿ ಆಗುವುದು ಇದರಲ್ಲೆಲ್ಲ ನಂಬಿಕೆ ಇಲ್ಲ.  ಇದ್ದರೂ ಇರಬಹುದೇ ಎನ್ನುವ ಅರೆಬರೆ ಅನುಮಾನ!   ಆದರೆ ಅಮ್ಮನಿಗೆ ಪೂರ್ತಿ ನಂಬಿಕೆ. ಅಮ್ಮನ ನಂಬಿಕೆ ಅಥವಾ ಮೂಢನಂಬಿಕೆಗೆ Read More

ಪಾರ್ವತಮ್ಮನವರು ಎಲ್ಲಿ? ಕಾಣ್ತಾ ಇಲ್ಲ?

  ಚಿತ್ರಲೋಕದಲ್ಲಿ ಪ್ರತಿವಾರ ಧಾರಾವಾಹಿಯಾಗಿ ಬರುತ್ತಿದ್ದ ಪಾರ್ವತಮ್ಮನವರ ಅಂಕಣವನ್ನು ತಪ್ಪದೆ ಓದುತ್ತಿದ್ದವರಲ್ಲಿ ನಾನೊಬ್ಬಳು. ಚಿತ್ರರಂಗದ ಕುರಿತು ಅವರು ನೀಡುತ್ತಿದ ಒಳವಿವರಗಳು ಓದಲು ತುಂಬಾ ಚೆನ್ನಾಗಿರುತ್ತಿತ್ತು. ನಿರ್ಮಾಪಕಿಯಾಗಿ, ವಿತರಕಿಯಾಗಿ, ನಟನ ಪತ್ನಿಯಾಗಿ,ತಾಯಿಯಾಗಿ ಅವರ ಅನುಭವ ಬಹಳ ದೊಡ್ಡದು. ಪ್ರಸಿದ್ಧ ಪುರುಷರ ಪತ್ನಿಯರು ತಮ್ಮ ಪತಿಯ ಪ್ರಭಾವಳಿಯಲ್ಲಿ ಲಯವಾಗಿ ಹೋಗುವುದೇ ಹೆಚ್ಚು. ಆದರೆ ಪಾರ್ವತಮ್ಮ ರಾಜ್‍ರಂತಹ ಮೇರು ವ್ಯಕ್ತಿತ್ವದ Read More

ಹಾಡು ಹಳೆಯದಾದರೇನು?

“ಹಳೆಯ ಹಾಡು ಹಾಡು ಮತ್ತೆ ಅದನೇ ಕೇಳಿ ತಣಿಯುವೆ ಹಳೆಯ ಹಾಡಿನಿಂದ ಹೊಸತು ಜೀವನ ಕಟ್ಟುವೆ” ಜಿ.ಎಸ್.ಶಿವರುದ್ರಪ್ಪನವರ ಈ ಗೀತೆ ನನಗೀಗ ಮತ್ತಷ್ಟು ಅರ್ಥಪೂರ್ಣ ಅನ್ನಿಸುತ್ತಿದೆ. ಯಾಕೆ ಗೊತ್ತಾ? ನನಗೆ ಹಳೆಯ ಹಾಡುಗಳ ಭಂಡಾರ ಸಿಕ್ಕಿದೆ.  ಕೆಲವು ದಿನಗಳ ಹಿಂದೆ  ನಮ್ಮ ಮಿತ್ರರೊಬ್ಬರ ಮನೆಗೆ ಹೋಗಿದ್ದಾಗ ಆ ಮಾತು-ಈ ಮಾತು ಆಡುತ್ತಿದ್ದಾಗ ಪಿ.ಕಾಳಿಂಗರಾಯರ “ಉದಯವಾಗಲಿ ನಮ್ಮ Read More

ಬೇಳೆಗಳ ಬೆಲೆ ಗಗನಕ್ಕೆ, ಯಾಕೆ?

ಬೆಳ್ಳಿ,ಬಂಗಾರವಾಯಿತು, ಗ್ಯಾಸ್ ಆಯಿತು, ಈಗ ಬೇಳೆಗಳ ಸರದಿಯೇ??  ಇವತ್ತು ದಿನಸಿ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋಗಿದ್ದೆ. ಎಲ್ಲಾ ಬೇಳೆಗಳ ಬೆಲೆ ಮಾಮೂಲಿಗಿಂತ ಬಹಳ ಹೆಚ್ಚಾಗಿರುವುದು ಕಂಡು ಬಂದಿತು. ತೊಗರಿಬೇಳೆಯ ಬೆಲೆಯಂತೂ ಇನ್ನೂ ಹೆಚ್ಚು. ಇದ್ದಕ್ಕಿದ್ದಂತೆ ಬೇಳೆಗಳ ಬೆಲೆ ಮೇಲೇರಲು ಏನಾದರೂ ಕಾರಣವಿದೆಯೇ? ಅಥವಾ ವ್ಯಾಪಾರಿಗಳು ಕೃತಕ ಅಭಾವವನ್ನು ಸೃಷ್ಟಿಸುತ್ತಿದ್ದಾರೆಯೇ? ಗೊತ್ತಿಲ್ಲ. ನಿಮ್ಮೂರಿನಲ್ಲೂ ಇದೇ ಪರಿಸ್ಥಿತಿ ಇದೆಯೇ? ಭಾರತದಲ್ಲಿಯೂ ಹೀಗೆ Read More