ಬಾಳೆಂಬ ಬಣ್ಣದ ಬುಗುರಿ

ಸುದೀಪ ಮನೆ ತಲುಪುವುದಕ್ಕೂ, ಸೀತಾಬಾಯಿ,ಕನ್ನಿಕಾ ಆಟೊದಿಂದಿಳಿಯುವುದಕ್ಕೂ ಸರಿಯಾಯಿತು. ಸದ್ಯ, ಅಮ್ಮನಿಂದ ಬೈಸಿಕೊಳ್ಳುವುದು ತಪ್ಪಿಸಿಕೊಳ್ಳುವುದು ತಪ್ಪಿತು ಅಂದುಕೊಂಡ ಸುದೀಪ. ಬೀಗ ತೆರೆದು ಲಗ್ಗೇಜುಗಳನ್ನು ಹೊತ್ತು ಒಳಸಾಗಿಸಿದ. ಕನ್ನಿಕಾಳು ಸುದೀಪನಿಗೆ ನೆರವಾದಳು. “ಪ್ರಯಾಣ ಸುಖವಾಗಿತ್ತೇನೇ ಕುನ್ನಿಕಾ?” ಎಂದು ಅವಳನ್ನು ರೇಗಿಸಲು ಮರೆಯಲಿಲ್ಲ ಸುದೀಪ. ಕಾಫಿ ಬೆರೆಸುತ್ತಿದ್ದ ಸೀತಾಬಾಯಿಯ ಮನಸ್ಸಿನಲ್ಲಿ ಕನಸುಗಳ ಮೆರವಣಿಗೆ! ಈ ಬಾರಿ ಸುದೀಪನಿಂದ ಮದುವೆಗೆ ಒಪ್ಪಿಗೆ Read More

ಒಮ್ಮೊಮ್ಮೆ ಹೀಗೂ ಆಗುವುದು!

ಒಮ್ಮೊಮ್ಮೆ ಹೀಗೂ ಆಗುವುದು … ಯಾರನ್ನೋ ಜೀವ ಬೇಡುವುದು… ಸಂಜೆ ಆಫೀಸಿನಿಂದ ಮನೆಗೆ ಹೋಗಲು ಸುದೀಪ ಎದ್ದಾಗ ಪ್ಯೂನ್ ರಂಗ ಹಲ್ಲು ಕಿರಿಯುತ್ತಾ ದರ್ಶನ ನೀಡಿದ `ಆರಾಮಾ ಸಾ..’ಅಂತಾ ಕೈ ಮುಂದೆ ಚಾಚಿ `ನೀವೇನೂ ನಮ್ಮುನ್ನ ಇತ್ತೀಚಿಗೆ ನೋಡ್ ಕೊಳದೇ ಇಲ್ಲಾ…’ಅಂತ ತನ್ನ ಎಂದಿನ ಪಲ್ಲವಿ ಹಾಡಿದ ರಂಗನ ಪ್ರಕಾರ `ನೋಡ್ ಕೊಳದೂ’ ಅಂದ್ರೆ ಅವನ Read More

ಮನಸು ಗೊಂದಲದ ಗೂಡು

ಇಳಿಸಂಜೆಗೆ ಕರೆಗಂಟೆಯ ಸದ್ದಿಗೆ ಎಚ್ಚರಾಗಿ ಬಾಗಿಲು ತೆರೆದವನಿಗೆ ಕಾಣಿಸಿದ್ದು ಯಾಮಿನಿಯ ತಂದೆ! ನಿದ್ದೆ ತುಂಬಿದ ತನ್ನ ಕಣ್ಣುಗಳು… ಮುದುರಿದ ತನ್ನ ಬಟ್ಟೆಗಳು… ಕೊಳಕಾದ ತನ್ನ ರೂಮು…ಅವರನ್ನು ಒಳಗೆ ಕರೆಯಲೂ ಸಂಕೋಚವೆನಿಸಿತು ಅವನಿಗೆ… `ಅಯ್ಯೋ ತಾವು ನನ್ನನ್ನ ಹುಡುಕಿಕೊಂಡು ಇಷ್ಟು ದೂರ ಯಾಕೆ ಬರಕ್ಕೆ ಹೋದ್ರೀ…ಯಾಮಿನೀ ಹತ್ರ ಹೇಳಿ ಕಳಿಸಿದ್ದರೆ ನಾನೇ ಬಂದು ನಿಮ್ಮನ್ನ ನೋಡ್ತಿದ್ದೆ’ಎಂದ ಅದಕ್ಕವರು Read More

ಮುಂದೇನು ಎಂದು ಹೇಳುವರು ಯಾರು?

ಪರಸ್ಪರ “ಹೇಗಿದ್ದೀ?” “ಚೆನ್ನಾಗಿದ್ದೇನೆ”ಗಳ ನಂತರ “ಪರದೇಶ ಹೇಗಿತ್ತು?” ಪ್ರಶ್ನೆ ಅಚಾನಕ್ಕಾಗಿ ಸುದೀಪನ ಬಾಯಿಂದ ಹೊರಬಿತ್ತು. ಒಂದೆರಡು ಕ್ಷಣಗಳ ಮೌನದ ಮೇಲೆ ಬಂದ ಉತ್ತರ ಸುನಯನಳದ್ದೇ ಹೌದಾ ಅನ್ನುವ ಸಂಶಯವೂ ಅವನಿಗೆ ಬರುವಂತಾಯ್ತು. “ಪರದೇಶವೇನೋ ಚೆನ್ನಾಗಿದೆ ಸುದೀಪ, ಆದರೆ ಪರದೇಶಿಯೊಡನೆ ಜೀವನ ಸರಿಯಾಗಲಿಲ್ಲ” ಅಂದಳು. “ಯಾಕೇಂತ ನಾನು ಕೇಳಲ್ಲ, ನಿನ್ನ ನೋವನ್ನು ಕೆದಕಲ್ಲ” ಅಂದ. “ಇಲ್ಲ, ನಿನ್ನ Read More

ಒಲವೇ..ಹೂವಾಗಿ ಬಳಿ ಬಂದೆ! – 5

ಬೆಳಗಿನ ಸೂರ್ಯನ ಕಿರಣಗಳು ಕಿಟಕಿಯ ಒಳಗೆ ತೂರಿ ಸುದೀಪನನ್ನು ಎಚ್ಚರಗೊಳಿಸಿದವು.  ಸುದೀಪನ ಮನಸ್ಸಿನಲ್ಲಿದ್ದ ಭ್ರಮೆಗಳೂ ಕತ್ತಲಿನೊಂದಿಗೆ ಕರಗಿಹೋಗಿತ್ತು.  ವಾಸ್ತವ ಬೆಳಗಿನ ಸೂರ್ಯನಂತೆ ನಿಚ್ಚಳವಾಗಿ ಕಣ್ಣೆದುರು ಹೊಳೆಯುತ್ತಿತ್ತು.  ಸುದೀಪ ಹುಸಿ ಆದರ್ಶವಾದಿಯಲ್ಲ.  ಭಾವನೆಗಳಿಗಿಂತ ಬದುಕೇ ಮುಖ್ಯವೆಂದು ನಂಬಿದವನು.    ತಾನು ಯಾಮಿನಿಯಂತೆ ಆದರ್ಶದ ಬೆನ್ನುಹತ್ತಿ ಹೋಗುವ ಶಕ್ತಿ ಇಲ್ಲದವನು ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಸೃಷ್ಟಿ ಯಾಮಿನಿಯ ಮಗಳೇ ಆಗಿದ್ದರೆ ಆ Read More