ಚಿತ್ರ – ಶುಭಂ (೨೦೦೫)
ಸಾಹಿತ್ಯ – ಕವಿರಾಜ್
ಸಂಗೀತ – ಗುರುಕಿರಣ್
ಗಾಯಕಿ – ಚಿತ್ರ
ಹನಿ ಹನಿ ಇಬ್ಬನಿನ ಬಾಚಿ ಕುಡಿಯೋ ಆಸೆ
ಚಿಲಿಪಿಲಿ ಹಕ್ಕಿ ನಿನ್ನ ಭಾಷೆ ಕಲಿಯೋ ಆಸೆ
ಮುಗಿಲ ತಂಪಲಿ ಕೊಳಲ ಇಂಪಲಿ
ಅರಳೋ ಮೊಗ್ಗಿನ ಹರಡೋ ಕಂಪಲಿ
ಬೆರೆಯೋ ನೂರಾಸೆಯು
ಹನಿ ಹನಿ ಇಬ್ಬನಿನ ಬಾಚಿ ಕುಡಿಯೋ ಆಸೆ
ಇನಿದನಿ ಗುಬ್ಬಿ ನಿನ್ನ ಬಾಷೆ ಕಲಿಯೋ ಆಸೆ |
ಬಿಳಿ ಬಿಳಿ ಮೋಡಕೆ ಬಗೆ ಬಗೆ ಬಣ್ಣ
ಬಳಿಯೋಕೆ ಆಸೆಯು
ಗಗನ ಭೂಮಿಯ ಚುಂಬಿಸೋ ತಾಣ
ನೋಡೋಕೆ ಆಸೆಯು
ಎಲೆ ತಂಗಾಳಿ ನಿನ್ನ ಜೋಕಾಲಿ
ಹೆಣೆದು ನಾ ಆಡಲೇ |
ಹನಿ ಹನಿ ಇಬ್ಬನಿನ ಬಾಚಿ ಕುಡಿಯೋ ಆಸೆ
ಚಿಲಿಪಿಲಿ ಗುಬ್ಬಿ ನಿನ್ನ ಭಾಷೆ ಕಲಿಸೋ ಆಸೆ |
ನದಿಯೇ ಎಲ್ಲಿಗೆ ಹರಿಯುವೆ ಹೀಗೆ
ಬರಲೇ ನಾನೂ ಜೊತೆ
ಮರವೇ ಏತಕೆ ನಿಂತಲೇ ನಿಂತೆ
ನಿನದು ಏನೇ ಕಥೆ
ಮಳೆ ಬಿಲ್ಲಿನ ಮನೆ ಮಾಡೋಣ
ಕುಳಿತು ಮಾತಾಡಲು |
* * *