ದೂರ…. ಬಹುದೂರ…

ಕವಿ : ಕುವೆಂಪು ದೂರ ಬಹುದೂರ ಹೋಗುವ ಬಾರಾ ಅಲ್ಲಿ ಇಹುದೆಮ್ಮ ಊರ ತೀರ ಜಲಜಲದಲೆಗಳ ಮೇಲ್ಕುಣಿದಾಡಿ ಬಳಲಿಕೆ ತೊಳಲಿಕೆಗಳನೆಲ್ಲ ದೂಡಿ ಗೆಲುವಿನ ಉಲಿಗಳ ಹಾಡಿ ಒಲುಮೆಯ ಮಾತಾಡಿ ಹಕ್ಕಿಗಳಿಂಚರ ಕೇಳಿ ಆನಂದವ ತಾಳಿ ಹಿಮಮಣಿಕಣಗಣ ಸಿಂಚಿತ ಅಂಚಿನ ಹಸುರಿನ ತೀರದ ಮೇಲಾಡಿ ಕಿಸಲಯಕಂಪನದಿಂಪನು ನೋಡಿ ಕೂಡಿ ಆಡಿ ನೋಡಿ ಹಾಡಿ ತೇಲಿ ತೇಲಿ ಹೋಗುವ Read More

ಎಲ್ಲಿರುವುದು ನಾ ಸೇರುವ ಊರು ?

ಕವಿ – ಕುವೆಂಪು ಎಲ್ಲಿರುವುದು ನಾ ಸೇರುವ ಊರು ಬಲ್ಲಿದರರಿಯದ ಯಾರೂ ಕಾಣದ ಎಲ್ಲಿಯೂ ಇರದ ಊರು ಭವಭಯವಿಲ್ಲದ ಊರಂತೆ ದಿವಿಜರು ಬಯಸುವ ಊರಂತೆ ತವರೂರಂತೆ ಬಹುದೂರಂತೆ ಕವಿಗಳು ಕಂಡಿಹ ಊರಂತೆ ಜ್ಞಾನಿಗಳಿರುವುದೇ ಆ ಊರು ಜ್ಞಾನದ ಮೇರೆಯೇ ಆ ಊರು ನಾನಿಹ ಊರು ಸಮೀಪದ ಊರು ಮೌನತೆಯಾಳುವ ತವರೂರು ಎಲ್ಲಿರುವುದು ನಾ ಸೇರುವ ಊರು Read More

ಹಸುರು – ಕುವೆಂಪು

ಕವನ – ಹಸುರು ಕವಿ   – ಕುವೆಂಪು ನವರಾತ್ರಿಯ ನವಧಾತ್ರಿಯ ಈ ಶ್ಯಾಮಲ ವನಧಿಯಲಿ ಹಸುರಾದುದೊ ಕವಿಯಾತ್ಮಂ ರಸಪಾನ ಸ್ನಾನದಲಿ ! ಹಸುರಾಗಸ, ಹಸುರು ಮುಗಿಲು ; ಹಸುರು ಗದ್ದೆಯಾ ಬಯಲು  ; ಹಸುರಿನ ಮಲೆ ; ಹಸುರು ಕಣಿವೆ ; ಹಸುರು ಸಂಜೆಯೀ ಬಿಸಿಲೂ ! ಆಶ್ವೀಜದ ಶಾಲಿವನದ ಗಿಳಿಯೆದೆ ಬಣ್ಣದ ನೋಟ ; Read More

ಬಾಗಿಲೊಳು ಕೈ ಮುಗಿದು – ಕುವೆಂಪು

ಕವಿ – ಕುವೆಂಪು ಹಾಡು ಕೇಳಿ – ೧. ಶಿವಮೊಗ್ಗ ಸುಬ್ಬಣ್ಣ  ೨. ರತ್ನಮಾಲಾ ಪ್ರಕಾಶ್  ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ ಘಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ ಕರ್ಪೂರದಾರತಿಯ ಜ್ಯೋತಿಯಿಲ್ಲ ಭಗವಂತನಾನಂದ ರೂಪುಗೊಂಡಿಹುದಿಲ್ಲಿ ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ Read More

ಕುವೆಂಪು – ಆನಂದಮಯ

ಸಾಹಿತ್ಯ : ಕುವೆಂಪು ಆಲ್ಬಂ : ಭಾವಬಿಂದು ಸಂಗೀತ : ಸಿ.ಅಶ್ವಥ್ ಗಾಯಕ : ಶಿವಮೊಗ್ಗ ಸುಬ್ಬಣ್ಣ        ಹಾಡು ಕೇಳಿ – ಆನಂದಮಯ ಈ ಜಗಹೃದಯ ಏತಕೆ ಭಯ ಮಾಣೊ ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೊ ಬಿಸಿಲಿದು ಬರೀ ಬಿಸಿಲಲ್ಲವೊ ಸೂರ್ಯನ ಕೃಪೆ ಕಾಣೊ ಸೂರ್ಯನೋ ಬರೀ ರವಿಯಲ್ಲವೊ ಆ ಭ್ರಾಂತಿಯ ಮಾಣೊ ರವಿವದನವೇ Read More