ಒಲವೇ..ಹೂವಾಗಿ ಬಳಿ ಬಂದೆ! – 5

ಬೆಳಗಿನ ಸೂರ್ಯನ ಕಿರಣಗಳು ಕಿಟಕಿಯ ಒಳಗೆ ತೂರಿ ಸುದೀಪನನ್ನು ಎಚ್ಚರಗೊಳಿಸಿದವು.  ಸುದೀಪನ ಮನಸ್ಸಿನಲ್ಲಿದ್ದ ಭ್ರಮೆಗಳೂ ಕತ್ತಲಿನೊಂದಿಗೆ ಕರಗಿಹೋಗಿತ್ತು.  ವಾಸ್ತವ ಬೆಳಗಿನ ಸೂರ್ಯನಂತೆ ನಿಚ್ಚಳವಾಗಿ ಕಣ್ಣೆದುರು ಹೊಳೆಯುತ್ತಿತ್ತು.  ಸುದೀಪ ಹುಸಿ ಆದರ್ಶವಾದಿಯಲ್ಲ.  ಭಾವನೆಗಳಿಗಿಂತ ಬದುಕೇ ಮುಖ್ಯವೆಂದು ನಂಬಿದವನು.    ತಾನು ಯಾಮಿನಿಯಂತೆ ಆದರ್ಶದ ಬೆನ್ನುಹತ್ತಿ ಹೋಗುವ ಶಕ್ತಿ ಇಲ್ಲದವನು ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಸೃಷ್ಟಿ ಯಾಮಿನಿಯ ಮಗಳೇ ಆಗಿದ್ದರೆ ಆ Read More

ಆಕಾಶ ದೀಪವು ನೀನು – 4

ಸೃಷ್ಟಿ! – ನಿಜವಾಗಿ ಆ ಮಗು ಜಗತ್ತಿನ ಒಂದು ಅದ್ಭುತ ಸೃಷ್ಟಿಯೇ! ಅವಳ ಚುರುಕುತನ, ಮುದ್ದು ಮಾತಿಗೆ ಸುದೀಪ ಬೆರಗಾಗಿದ್ದ. ಸೃಷ್ಟಿಯ ಬುದ್ಧಿ ಶಕ್ತಿ ಅಸಾಧಾರಣವಾಗಿರುವುದನ್ನು ಸುದೀಪ ಗಮನಿಸಿದ. ಅವಳ ಮಾತಿನಲ್ಲಿ ವಯಸ್ಸಿಗೆ ಮೀರಿದ ಪ್ರೌಢತೆ ಇತ್ತು. ಬಿಳುಪಾದ ಗುಂಡು ಮುಖದಲ್ಲಿ ಗಾಜಿನ ಗೋಲಿಯಂತಹ ನೀಲಿ ಕಣ್ಣುಗಳು! ಅರೆ ಈ ನೀಲಿ ಕಣ್ಣುಗಳು ಎಲ್ಲಿಂದ ಬಂದವು? Read More