ಭಾಗ – 21
ಭರತ ಪತ್ರವನ್ನು ಓದಿ ಮುಗಿಸಿದ. ಅವನನ್ನು ಬಹುದಿನಗಳಿಂದ ಕಾಡುತ್ತಿದ್ದ “ನಾನಾರು?” ಎಂಬ ಪ್ರಶ್ನೆಗೆ ಇಂದು ಉತ್ತರ ದೊರಕಿತ್ತು. ಸಮೀಯುಲ್ಲಾ ತನ್ನ ಹೆತ್ತ ತಂದೆ ಇರಲಾರರು ಎಂಬ ಅನುಮಾನ ಅವನಿಗೆ ಮೊದಲೇ ಇತ್ತು. ಸಮೀಯುಲ್ಲಾರ ಸಾತ್ವಿಕ ಸ್ವಭಾವಕ್ಕೂ, ತನ್ನಲ್ಲಿದ್ದ ಉಗ್ರ ಗುಣಕ್ಕೂ ಹೋಲಿಕೆಯೇ ಇಲ್ಲದ್ದು ಅವನ ಗಮನಕ್ಕೂ ಎಷ್ಟೋ ಬಾರಿ ಬಂದಿತ್ತು. ಯಾರನ್ನೂ ನೋಯಿಸೆನೆನ್ನುವ ಸಮೀಯುಲ್ಲಾರನ್ನು ನೋಡಿದಾಗ Read More