ಕಟಿಯಲ್ಲಿ ಕರವಿಟ್ಟನೊ ಪಂಢರಿರಾಯ

ರಚನೆ – ಪುರಂದರದಾಸರು ಹಾಡು ಕೇಳಿ – ವಿದ್ಯಾಭೂಷಣ ಹುಸೇನ್ ಸಾಹೇಬ್ ಕಟಿಯಲ್ಲಿ ಕರವಿಟ್ಟನೊ ಪಂಢರಿರಾಯ ಕಟಿಯಲ್ಲಿ ಕರವಿಟ್ಟನೊ ||ಪಲ್ಲವಿ|| ಗೊಲ್ಲ ಬಾಲಕರೊಡಗೂಡಿ ತಾ ಬಂದು ಗೊಲ್ಲತಿಯರ ಮನೆ ಕದ್ದು ಬೆಣ್ಣೆಯ ತಿಂದು ಬಲ್ಲಿದ ತೃಣಾವರ್ತ ಮೊದಲಾದ ಅಸುರರ ಮೆಲ್ಲನೆ ಕೊಂದಾಯಾಸದಿಂದಲೋ ? ಮುದದಿಂದ ವ್ರಜದ ಹದಿನಾರು ಸಾವಿರ ಸುದತಿಯರಾಳಿದ ಮದದಿಂದಲೊ ಮದಗಜಗಮನೆಯರ ಮದದಂತಕ ಕೃಷ್ಣ Read More

ಮಹಿಮೆ ಸಾಲದೇ?

ರಚನೆ – ವ್ಯಾಸರಾಜರು ಗಾಯಕ – ರಾಯಚೂರು ಶೇಷಗಿರಿ ದಾಸ್ ಸಂಗೀತ – ಪ್ರವೀಣ್ ಗೋಡ್ಕಿಂಡಿ ಹಾಡು ಕೇಳಿ – ಮಹಿಮೆ ಸಾಲದೇ ? ಇಷ್ಟೇ ಮಹಿಮೆ ಸಾಲದೇ? ||ಪಲ್ಲವಿ|| ಅಹಿಶಯನನ ಒಲುಮೆಯಿಂದ ಮಹಿಯೊಳೆಮ್ಮ ಶ್ರೀಪಾದರಾಜರ ||ಅ.ಪ|| ಮುತ್ತಿನ ಕವಚ ಮೇಲ್ಕುಲಾವಿ ನವರತ್ನ ಕೆತ್ತಿದ ಕರ್ಣಕುಂಡಲ ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೆರೆದು ಬರುವ Read More