ಸುಂದರಮೂರುತಿ ಮುಖ್ಯಪ್ರಾಣ ಬಂದ ನಮ್ಮನೆಗೆ
ಸುಂದರಮೂರುತಿ ಮುಖ್ಯಪ್ರಾಣ ಬಂದ ನಮ್ಮನೆಗೆ ಪ್ರಾಣ ಬಂದ ಮನೆಗೆ ಶ್ರೀರಾಮನಾಮ ಧ್ವನಿಗೆ ||ಪ|| ಕನಕಲಂದುಗೆ ಗೆಜ್ಜೆ ಝಣಝಣರೆನುತ ಝಣಕು ಝಣಕೆಂದು ನಾದವಗೈಯುತ ಪ್ರಾಣ ಬಂದ ಮನೆಗೆ ಶ್ರೀರಾಮನಾಮ ಧ್ವನಿಗೆ||೧|| ತುಂಬುರು ನಾರದ ವೀಣೆ ಬಾರಿಸುತ ರಾಮನಾಮ ಪಾಡುತ ಪ್ರಾಣ ಬಂದ ಮನೆಗೆ ಶ್ರೀರಾಮನಾಮ ಧ್ವನಿಗೆ||೨|| ಪುರಂದರವಿಠಲನ ನೆನೆದು ಪಾಡುತಲಿ ಆಲಿಂಗನ ಮಾಡುತಲಿ ಪ್ರಾಣ ಬಂದ ಮನೆಗೆ Read More