ಮಾವು ನಾವು, ಬೇವು ನಾವು – ಕೆ. ಎಸ್. ನರಸಿಂಹಸ್ವಾಮಿ

ಕವಿ – ಕೆ.ಎಸ್.ನರಸಿಂಹಸ್ವಾಮಿ ಮಾವು ನಾವು, ಬೇವು ನಾವು; ನೋವು ನಲಿವು ನಮ್ಮವು. ಹೂವು ನಾವು, ಹಸಿರು ನಾವು, ಬೇವು ಬೆಲ್ಲ ನಮ್ಮವು. ಹೊಸತು ವರುಷ, ಹೊಸತು ಹರುಷ- ಹೊಸತು ಬಯಕೆ ನಮ್ಮವು ತಳಿರ ತುಂಬಿದಾಸೆಯೆಲ್ಲ, ಹರಕೆಯೆಲ್ಲ ನಮ್ಮವು. ಬಂಜೆ ನೆಲಕೆ ನೀರನೂಡಿ ಹೊಳೆಯ ದಿಕ್ಕು ಬದಲಿಸಿ ಕಾಡ ಕಡಿದು ದಾರಿ ಮಾಡಿ ಬೆಟ್ಟ ಸಾಲ Read More

ಸುರಲೋಕದ ಸುರನದಿಯಲಿ ಮಿಂದು

ಕವಿ – ಕುವೆಂಪು ಸುರಲೋಕದ ಸುರನದಿಯಲಿ ಮಿಂದು, ಸುರಲೋಕದ ಸಂಪದವನು ತಂದು, ನವ ಸಂವತ್ಸರ ಭೂಮಿಗೆ ಬಂದು ಕರೆಯುತಿದೆ ನಮ್ಮನು ಇಂದು! ಗೀತೆಯ ಘೋಷದಿ ನವ ಅತಿಥಿಯ ಕರೆ; ಹೃದಯ ದ್ವಾರವನಗಲಕೆ ತೆರೆ, ತೆರೆ! ನವ ಜೀವನ ರಸ ಬಾಳಿಗೆ ಬರಲಿ, ನೂತನ ಸಾಹಸವೈತರಲಿ! ಗತವರ್ಷದ ಮೃತಪಾಪವ ಸುಡು, ತೊರೆ; ಅಪಜಯ ಅವಮಾನಗಳನು ಬಿಡು; ಮರೆ; Read More

ಯುಗಾದಿ ಮರಳಿ ಬರುತಿದೆ – ಬೇಂದ್ರೆ

  ಕವನ : ಯುಗಾದಿ ಕವಿ : ಅಂಬಿಕಾತನಯ ದತ್ತ (ದ.ರಾ.ಬೇಂದ್ರೆ) ಹಾಡು ಕೇಳಿ  ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿ ಮತ್ತೆ ಕೇಳಬರುತಿದೆ ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ ಕಮ್ಮನೆ Read More