ದಾಸೋಹಂ ತವ ದಾಸೋಹಂ ತವ
ದಾಸೋಹಂ ತವ ದಾಸೋಹಂ ||ಪಲ್ಲವಿ||
ವಾಸುದೇವ ವಿಗತಾಘಸಂಘ ತವ ||ಅನು ಪಲ್ಲವಿ||

ಜೀವಾಂತರ್ಗತ ಜೀವ ನಿಯಾಮಕ
ಜೀವ ವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪಿ ರಾ-
ಜೀವ ಭವಜನಕ ಜೀವೇಶ್ವರ ತವ ||೧||

ಕಾಲಾಂತರ್ಗತ ಕಾಲನಿಯಮಕ
ಕಾಲಾತೀತ ತ್ರಿಕಾಲಜ್ಞ
ಕಾಲ ಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲಮೂರ್ತಿ ತವ ||೨||

ಕರ್ಮಕರ್ಮಕೃತ ಕರ್ಮಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮಬಂಧ ಮಹ ಕರ್ಮವಿಮೋಚಕ
ಕರ್ಮನಿಗ್ರಹ ಕರ್ಮಸಾಕ್ಷಿ ತವ ||೩||

ಧರ್ಮಯೂಪ ಮಹ ಧರ್ಮವಿವರ್ಧನ
ಧರ್ಮವಿದೊತ್ತಮ ಧರ್ಮನಿಧೇ
ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಪುತ್ರ ತವ || ೪||

ಮಂತ್ರಯಂತ್ರ ಮಹ ಮಂತ್ರ ಬೀಜ ಮಹ
ಮಂತ್ರ ರಾಜಗುರು ಮಂತ್ರಧೃತ
ಮಂತ್ರಮೇಯ ಮಹ ಮಂತ್ರನಿಯಾಮಕ
ಮಂತ್ರದೇವ ಜಗನ್ನಾಥ ವಿಠಲ ತವ ||೫||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.