ವೇಣಿ ಮಾಧವನ ತೋರಿಸೆ – ವಾದಿರಾಜರು

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ||ಪಲ್ಲವಿ||

ಕಾಣುತ ಭಕ್ತರ ಕರುಣದಿ ಸಲಹುವ
ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ||

ಬಂದೆನೆ ಬಹಳ ದೂರದಿ ಭವಸಾಗರ ತರಣಿ
ನಿಂದೆನೆ ನಿನ್ನ ತೀರದಿ
ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ
ಮಂದಗಮನೆ ಎನ್ನ ಮುಂದಕೆ ಕರೆಯೆ ||೧||

ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು
ಕರುಣದಿಂದೆನ್ನ ಪೊರೆಯೆ
ಸ್ಮರಣೆ ಮಾತ್ರದಿ ಭವತಾಪವ ಹರಿಸುವ
ಸ್ಮರನ ಪಿತ ಮುರಹರನ ಕರುಣದಿ ||೨||

ಸುಜನರಿಗೆಲ್ಲಾಧರಳೆ ಸುಖಶೀಲೆ ಕೇಳೆ
ಕುಜನ ಸಂಗವನು ಕೀಳೆ
ನಿಜಪದವಿಯನೀವ ಹಯವದನನ
ಪದ ರಜವ ತೋರಿಸೆ ಮದಗಜಗಮನೆ ||೩||

4 thoughts on “ವೇಣಿ ಮಾಧವನ ತೋರಿಸೆ – ವಾದಿರಾಜರು”

  1. ವಾದಿರಾಜರ ಸೊಗಸಾದ ಕೀರ್ತನೆಯನ್ನು ವಿದ್ಯಾದಿಭೂಷಣರು ಸೊಗಸಾಗಿ ಹಾಡಿದ್ದಾರೆ. ಕೇಳಿಸಿದ್ದಕ್ಕಾಗಿ ಧನ್ಯವಾದಗಳು.

  2. ವಾದಿರಾಜರ ಮೇರು ಪ್ರತಿಭೆಗೆ ಸಾಕ್ಷಿ:
    ‘ಜಾಣೆ ತ್ರಿವೇಣಿ ಸಾರೆ ಸುಖವಾಣಿ’ ಅಲ್ಲವೇ.

  3. ಈಶ್ವರ ಭಟ್ says:

    ಎಂತಾ ಒಳ್ಳೇ ಪದ್ಯ …ಖುಷಿ ಆಯ್ತು.

  4. ಸುಮಧುರ ಗಾಯನ… 🙂

Leave a Reply to Shamalajanardhanan Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಅಕ್ಕಾ, ಅಕ್ರೂರ ಬಂದನಂತೆ!ಅಕ್ಕಾ, ಅಕ್ರೂರ ಬಂದನಂತೆ!

ರಚನೆ : ಪುರಂದರದಾಸರು ವಿದ್ಯಾಭೂಷಣ ಅಕ್ಕಾ, ನಂದಗೋಪನ ಅರಮನೆಯ ಒಳಗೊಬ್ಬ ಅಕ್ರೂರ ಬಂದನಂತೆ ಹೊಕ್ಕು ಬಳಸುವಳಲ್ಲ, ಹುಸಿಯನಾಡುವಳಲ್ಲ ಇಕ್ಕೋ, ಬಾಗಿಲ ಮುಂದೆ ಈಗ ರಥವ ಕಂಡೆ | ಮಥುರಾ ಪಟ್ಟಣವಂತೆ, ಮಾವ ಕಂಸನಂತೆ ನದಿಯ ದಾಟಲುಬೇಕಂತೆ, ಬದಲು ಮಾತಿಲ್ಲವಂತೆ, ಏನೆಂಬೆ ಏಣಾಕ್ಷಿ

ಬಲು ರಮ್ಯವಾಗಿದೆ ಶ್ರೀಹರಿಯ ಮಂಚಬಲು ರಮ್ಯವಾಗಿದೆ ಶ್ರೀಹರಿಯ ಮಂಚ

ರಚನೆ : ಜಗನ್ನಾಥದಾಸರು ರೂಪಾ ಮತ್ತು ದೀಪಾ ದನಿಯಲ್ಲಿ ಬಲು ರಮ್ಯವಾಗಿದೆ ಶ್ರೀಹರಿಯ ಮಂಚ ||ಪ|| ಎಲರುಣಿ ಕುಲರಾಜ ರಾಜೇಶ್ವರನ ಮಂಚ ||ಅನುಪಲ್ಲವಿ|| ಪವನತನಯ ಮಂಚ ಪಾವನತರ ಮಂಚ ಭುವನತ್ರಯವ ಪೊತ್ತ ಭಾರಿ ಮಂಚ ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ

ಹರಿ ನಿನ್ನೊಲುಮೆಯು ಆಗುವ ತನಕಹರಿ ನಿನ್ನೊಲುಮೆಯು ಆಗುವ ತನಕ

ರಚನೆ – ಪುರಂದರದಾಸರು ಗಾಯಕ – ಶಶಿಧರ್ ಕೋಟೆ ಹಾಡು ಕೇಳಿ ಹರಿ ನಿನ್ನೊಲುಮೆಯು ಆಗುವ ತನಕ ಅರಿತು ಸುಮ್ಮನಿರುವುದೇ ಲೇಸು ಮರಳಿ ಮರಳಿ ತಾ ಪಡೆಯದ ಭಾಗ್ಯ ಮರುಗಿದರೆ ತನಗಾದೀತೆ ||ಪ|| ದೂರು ಬರುವ ನಂಬಿಕೆಯನು ಕೊಟ್ಟರೆ ದುರ್ಜನ ಬರುವುದು