ನಿಮಗೆಲ್ಲರಿಗೂ ದಸರ ಹಬ್ಬದ ಹಾರ್ದಿಕ ಶುಭಾಶಯಗಳು!
ಈ ಬ್ಲಾಗಿನಲ್ಲಿ ವಿಜಯದಶಮಿ ಹಬ್ಬದ ಬಗೆಗೆ ಮಾತಾಡಿಕೊಂಡಿದ್ದಾರೆ. ನನಗೂ ಅಷ್ಟೇ. ವಿಜಯದಶಮಿಯನ್ನೂ ಸೇರಿಸಿಕೊಂಡ ದಸರಾ ಹಬ್ಬವೇ ತುಂಬಾ ಇಷ್ಟ. ಇದು ಎಲ್ಲಾ ಹಬ್ಬಗಳಂತಲ್ಲದೆ ನಮ್ಮ ಭಾವನೆಗಳೊಡನೆ ಬೆಸೆದುಕೊಂಡಿರುವ ಹಬ್ಬ. ನಮ್ಮ ನಾಡು-ನುಡಿಗಳೊಂದಿಗೆ ಗುರುತಿಸಿಕೊಂಡಿರುವ ಹಬ್ಬ. ಕುಲದೇವರಾದ ತಿರುಪತಿ ತಿಮ್ಮಪ್ಪನ ಮದುವೆ ನಡೆದಿದ್ದು ಈಗಲೇ ಎಂಬುದು ನಮ್ಮ ಮನೆಯಲ್ಲಿ ಗರಿಗೆದರುತ್ತಿದ್ದ ಸಂಭ್ರಮಕ್ಕೆ ಮತ್ತೊಂದು ಕಾರಣ. ಹತ್ತು ದಿನವೂ ನಿರಂತರವಾಗಿ ಉರಿಯುವ ತುಪ್ಪದ ದೀಪಗಳು, ಶ್ರೀನಿವಾಸ ಕಲ್ಯಾಣ, ಬನ್ನಿ ಸೊಪ್ಪು , ಶಾವಿಗೆ ಪಾಯಸ ಎಲ್ಲವೂ ನವರಾತ್ರಿಯ ಜೊತೆಗೆ ಹಿಂಬಾಲಿಸಿಕೊಂಡು ಬರುವ ಸವಿ ಸವಿ ನೆನಪು..ಸಾವಿರ ನೆನಪು! ಎದೆಯಾಳದಲ್ಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೂರೊಂದು ನೆನಪು!
ಆ ಕಾಲದ ದಸರ ವೈಭವವ ನ್ನು ನಾವು ಕಂಡಿಲ್ಲ. ಮಹಾರಾಜರ ಒಡ್ದೋಲಗ ನಮಗೆ ಬರೀ ಚಿತ್ರಗಳಲ್ಲಿ ಕಂಡ ದೃಶ್ಯ ಮಾತ್ರ. ಆದರೆ ಅಂದಿನ ಸಡಗರವನ್ನು ಕಂಡಿದ್ದ ಹಳಬರನ್ನು ದಸರಾ ಬಂತೆಂದರೆ ಅಸಹನೀಯ ವ್ಯಥೆ ಆವರಿಸಬಹುದೇನೋ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ , ಸುವರ್ಣ ಸಿಂಹಾಸನದ ಮೇಲೆ ಯಾವುದೇ ಸಂಭ್ರಮವಿರದ ಮುಖಭಾವ ಹೊತ್ತು ಕೂತಿರುವ ದೃಶ್ಯವನ್ನು ಟೀವಿಯಲ್ಲಿ ನೋಡಿ ಮರುಕವಾಯಿತು. ಹಿಂದಿದ್ದ ಎಲ್ಲಾ ವೈಭವಗಳನ್ನೂ ಕಳೆದುಕೊಂಡು ನಾಮಕಾವಸ್ತೆ ದರ್ಬಾರ್ ನಡೆಸುವ ಯುವರಾಜರ ಮನಸ್ಸಿನಲ್ಲಿರುವ ಭಾವನೆಗಳೇನಿರಬಹುದು ? ಊಹಿಸಲು ಸಾಧ್ಯವಾಗಲಿಲ್ಲ!
* * *
ಶ್ರೀನಿವಾಸ ಕಲ್ಯಾಣ, ಬನ್ನಿ ಸೊಪ್ಪು ಶಾವಿಗೆ ಪಾಯಸ…
ಅಂತ ಆಹ್ವಾನ ನೀಡಿದ್ದೀರಿ, ಆದರೆ ಸೊಪ್ಪು ಯಾಕೆಂತ ಗೊತ್ತಾಗಲಿಲ್ಲ.
ಪಾಯಸ ಮಾಡಿಟ್ಟಿದ್ದಿದ್ದರೆ ಕಳುಹಿಸಿ.
ಕಲ್ಯಾಣೋತ್ಸವಕ್ಕೂ ವಿಜಯದಶಮಿಗೂ ನಿಮಗೆ ಶುಭಾಶಯಗಳು.
ಹುಷಾರು ಮೆಡಂ, ಜನರು ನಿಮ್ಮ ಆಹ್ವಾನ ಸ್ವೀಕರಿಸಿ ಬಂದೆ ಬಿಡ್ತಾರೆ!
ಪಾಪ ಅವರು ವರ್ಷಕ್ಕೊಂದ್ ಸಾರಿ ಹೆಸರಿಗೆ ದರ್ಬಾರ್ ಮಾಡ್ತಾರೆ, ಆದ್ರೆ ನಮ್ಮ್ ಮಂತ್ರಿಗಳು ದಿನಾ ದರ್ಬಾರಲ್ಲೇ ಬಿದ್ದಿರ್ತಾರೆ!
ಅಸತ್ಯಿಗಳೇ, ಹಬ್ಬದಲ್ಲೂ ನಿಮ್ಮ ಅಸತ್ಯಾನ್ವೇಷಣೆಗಳಿಗೆ ರಜಾ ಇಲ್ಲ ಅಂತಾಯ್ತು:)
ವಿಜಯದಶಮಿ ಮತ್ತು ಗಾಂಧಿ ಜಯಂತಿ ಒಟ್ಟಿಗೇ ಬಂದು ಒಂದು ರಜಕ್ಕೆ ಕತ್ತರಿ ಬಿದ್ದಿದ್ದಕ್ಕಾಗಿ , ನಿಮ್ಮ ಬೊ.ರ.ಬ್ಯೂರೋದ ಏಕೈಕ ಸಿಬ್ಬಂದಿ ವರ್ಗಕ್ಕೆ ನನ್ನ ಸಂತಾಪಗಳನ್ನು ತಿಳಿಸಿಬಿಡಿ.
ಕಾಳು, ನೀವು ಹೇಳಿದ್ದು ನಿಜ. ಅಂದು ಒಬ್ಬ ರಾಜ ಇದ್ರೆ ಇಂದು ಅಸಂಖ್ಯ ಪುಡಿ ರಾಜರು! ದಸರ ಈಗ ಸರಕಾರಿ ಹಬ್ಬ ಆಗಿಹೋಗಿದೆ.
ನವಕೋಟಿ ಆಸ್ತಿ ಇದ್ದರೂ ಎಂಥಾ ಜಿಪುಣನಪ್ಪಾ ಶ್ರೀನಿವಾಸ! `ಕಲ್ಯಾಣ….ಬನ್ನಿ’ ಅಂತ ಕರೆದು ಬಿಟ್ಟು ಬರೀ ಪಾಯಸವೇ…? ಲಾಡು,ಚಿರೋಟಿ ಏನೂ ಇಲ್ವಾ?
ವಿ.ಸೂ. ಶ್ರೀತ್ರೀ ಅವರೇ ,ಇದು ನಿಮ್ಮ ಶ್ರೀನಿವಾಸರ ಬಗ್ಗೆ ಹೇಳಿದ್ದಲ್ಲಾ ಕೋಪ ಮಾಡ್ಕೋಬೇಡಿ .
ಮಾಲಾ, ನೀವು ತಿರುಪತಿಗೆ ಹೋದ್ರೆ ಲಾಡು ಸಿಗೋದಂತೂ ಗ್ಯಾರಂಟಿ. ಅದೂ ಮಾಮೂಲಾಗಿ ಹೋದ್ರೇ ಲಾಡು ಸಿಗತ್ತೇ ಇನ್ನು ಅವನ ಕಲ್ಯಾಣಕ್ಕೆ ಹೋದ್ರೆ ಖಂಡಿತ ಮತ್ತೊಂದು ಸಿಹಿ ಸಿಕ್ಕೇಸಿಗತ್ತೆ.
ವಿ.ಸೂ. ಇನ್ನು ನಮ್ಮ ತ್ರಿವೇಣಿ ಶ್ರೀನಿವಾಸ್ ಮನೆಗೆ ಹೋದ್ರೆ ಮೆಣಸಿನಕಾಯಿ ಬೋಂಡ ಮಾಡಿಕೊಡ್ತಾರೆ ಯೋಚನೆ ಮಾಡಬೇಡಿ.
ಮೀರಾ,ಮಾಲಾ, ಮೈಸೂರು ದಸರ ನೋಡಿ ನೀವಿಬ್ಬರೂ “ತಿರುಪತಿ” ರೈಲು ಹತ್ತಿರೋ ಹಾಗಿದೆಯಲ್ಲಾ!
ನವಕೋಟಿ ಆಸ್ತಿ ಇದ್ದರೂ ಎಂಥಾ ಜಿಪುಣನಪ್ಪಾ ಶ್ರೀನಿವಾಸ! ಶ್ರೀತ್ರೀ ಅವರೇ ,ಇದು ನಿಮ್ಮ ಶ್ರೀನಿವಾಸರ ಬಗ್ಗೆ ಹೇಳಿದ್ದಲ್ಲಾ ಕೋಪ ಮಾಡ್ಕೋಬೇಡಿ .
ಕೋಪನಾ? ಸಾಧ್ಯವೇ ಇಲ್ಲ. ಅಂದ ಹಾಗೆ ಇಲ್ಲಿದೆ ನೋಡಿ ಶ್ರಿನಿವಾಸರಾಯರ ಪಂಗನಾಮ ಪುರಾಣ ! 🙂
ಅಯ್ಯೋ ಪಾಪ ಶ್ರೀನಿ ದೊಡ್ಡ ನಾಮಾನೇ ಹಾಕಿಸಿಕೊಂಡಿದ್ದಾರೆ. ಇದೇ ತರ ಸಂದೀಪ್ ಗೇನಾದ್ರೂ ಆಗಿದ್ರೆ, ಶ್ರೀನಿ ಹಣೇಮೇಲಿರೋ ನಾಮಾ ತೆಗೆದು ಎಂ.ಎಂ.ಸಾಫ್ಟೆಕ್ ಇನ್ಸಿಟ್ಯೂಟ್ ಮಾಲೀಕನ ಹೆಂಡತಿಯ ಹಣೆ ಮೇಲೆ ಎಳೀತಿದ್ರು. ಮೊದಲು ಕಾಸು ಆಮೇಲೆ ಕ್ಲಾಸು ಅನ್ನೋ ಕಿಲಾಡಿ. ನೀನು ಬರೆದಂತೆ ಕೆಲವರು ಇರೋದೇ ನಾಮಾ ಹಾಕಿಸಿಕೊಳ್ಳೋಕ್ಕೆ. ಎಷ್ಟೇ ಬುದ್ದಿವಂತರಾದ್ರೂ ನಾಮಾ ಹಾಕಿಸಿಕೊಳ್ಳೋ ಪ್ರಸಂಗದಿಂದ ತಪ್ಪಿಸಿಕೊಳ್ಳೋದು ಕಷ್ಟ. ಶ್ರೀನಿ ತುಂಬಾ ತಮಾಷೆಯಾಗೇನೋ ಬರೆದಿದ್ದಾರೆ ಆದರೆ ನಂಗೇ ತುಂಬಾ ಬೇಜಾರಾಯ್ತು. ಆದರೆ ಒಂದು ಅರ್ಥವಾಗ್ಲಿಲ್ಲ ‘ನನ್ನ ಅರ್ಧಾಂಗಿ ಬಿಡ್ಲಿಲ್ಲ ಅಂತೂ 50% ವಸೂಲಿ ಮಾಡಿದ್ಲು’ ಅಂತ ಬರೆದಿದ್ದಾರೆ ಶ್ರೀನಿ. ನೀನು ಅವರ ಜೋಬಿಂದ ದುಡ್ಡು ಕಿತ್ಕೊಂಡು extra ಇನ್ನೊಂದು ನಾಮಾ ಎಳೆದಿರೋ ಹಾಗೆ ಕಾಣ್ತಿದೆ? ಎಲ್ಲಿಂದ ಕಿತ್ತೊಂಡೆ?
ಶ್ರಿತ್ರೀ ಅವರೇ,
ಇದು ಬಲೇ ಮೋಸ! ನಾವುಗಳು ನೋಡಿದ್ದು ನಿಮ್ಮ ಬ್ಲಾಗ್ ದಸರಾ ಅಲ್ಲಾ!
ನಿಮ್ಮ ಬ್ಲಾಗ್ ನೋಡಿದ ತಪ್ಪಿಗೆ ರೈಲು, ಅದರಲ್ಲೂ ತಿರುಪತಿ ರೈಲು ಹತ್ತಿಸುತ್ತಿದ್ದೀರಲ್ಲಾ….
ಹೇ ಏಳು ಕೊಂಡಲವಾಡ, ನುವ್ವೇ ಚೆಪ್ಪು ಇದಿ ನ್ಯಾಯಮಾ…?
ಮೀರಾ ಅವರೇ,
ಶ್ರಿತ್ರೀ ಅವರು ಮೆಣಸಿನಕಾಯಿ ಬೋಂಡ ಎಕ್ಸ್ಪಪರ್ಟ್ ಅಂಥಾ ತಿಳಿಸಿದ್ದಕ್ಕೆ ಧನ್ಯವಾದಗಳು!
ಶ್ರಿತ್ರಿ,
ಮುಂದಿನಸಾರಿ ಬೋಂಡ ಮಾಡಿದಾಗ ಇತ್ತಕಡೆ ಒಂದುಹತ್ತು ಕಳುಹಿಸಿ. ನಿಮ್ಮ ಕೋಡುಬಳೆ ಗೋಸ್ಕರ ಇನ್ನೂ ಕಾಯ್ತಾ………………..ಇದೀನಿ.
ಅಂಚೆ ಅಣ್ಣ ಏನಾದರೂ ಗುಳುಂ ಮಾಡಿ ಬಿಟ್ಟನಾ ಹೇಗೆ?
ತಡವಾಗಿ ಇತ್ತ ಕಡೆ ಬಂದದ್ದಕ್ಕೆ ಕ್ಷಮಿಸಿ.
ಈ ಶ್ರೀನಿವಾಸ ಕುಟುಂಬದ ವತಿಯಿಂದ ಆ ಶ್ರೀನಿವಾಸರ ಕುಟುಂಬಕ್ಕೆ ಹಬ್ಬಗಳ ಸರಣಿಯ ಶುಭಾಶಯಗಳು.
ತವಿಶ್ರೀಯವರೆ ಧನ್ಯವಾದಗಳು. ಇನ್ನು ದೀಪಾವಳಿವರೆಗೆ ಹಬ್ಬಗಳಿಗೆ ವಿರಾಮ.
ನಿಮ್ಮಮುಂಬಯಿನಲ್ಲಿ ಗಣೇಶ ಹಬ್ಬ ಜೋರು ಅನ್ನಿಸತ್ತೆ. ಅಲ್ಲಿ ನವರಾತ್ರಿ ಆಚರಣೆ ಹೇಗಿರುತ್ತದೆಯೋ ಗೊತ್ತಿಲ್ಲ.